Advertisement

ಮೊಳಕಾಲ್ಮೂರು ಪಟ್ಟಣ ಸಮಗ್ರ ಅಭಿವೃದ್ಧಿಗೆ ಶ್ರಮ: ಲಕ್ಷಣ

06:00 PM Mar 05, 2021 | Team Udayavani |

ಮೊಳಕಾಲ್ಮೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವ್ಯಾಪಾರ ಮಳಿಗೆಗಳ ಬಾಡಿಗೆಯ ಬಾಕಿ 16.65 ಲಕ್ಷ ರೂ. ಸೇರಿದಂತೆ ಇನ್ನಿತರ ಆದಾಯ ಮೂಲಗಳು ಹಾಗೂ ಸರ್ವ ಸದಸ್ಯರ ಸಹಕಾರದೊಂದಿಗೆ ಪಟ್ಟಣದ ಸಮಗ್ರ ಅಭಿವೃದ್ಧಿ ಶ್ರಮಿಸಲಾಗುವುದು ಎಂದು ಪಪಂ ಅಧ್ಯಕ್ಷ ಪಿ. ಲಕ್ಷ್ಮಣ ಭರವಸೆ ನೀಡಿದರು.

Advertisement

ಪಟ್ಟಣದ ಪಟ್ಟಣ ಪಂಚಾಯಿತಿಸಭಾಂಗಣದಲ್ಲಿ 2021-22ನೇ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪಪಂನ ವ್ಯಾಪಾರ ಮಳಿಗೆಗಳ ಕೆಲ ಬಾಡಿಗೆದಾರರು ಸಕಾಲಕ್ಕೆ ಬಾಡಿಗೆ ಕಟ್ಟದೆ ಹೆಚ್ಚಿನ ಬಾಡಿಗೆಯನ್ನು ಉಳಿಸಿಕೊಂಡಿದ್ದು, ಬಾಕಿ ಬಾಡಿಗೆ ಹಣವನ್ನು ಕೂಡಲೇ ವಸೂಲಾತಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದೆಂದು ತಿಳಿಸಿದರು. ಪ.ಪಂನ ಮುಖ್ಯಾ ಧಿಕಾರಿ ಪಿ.ಬಸಣ್ಣ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಪಪಂನ ಜನಪ್ರತಿನಿ ಧಿಗಳು ಮತ್ತು ಸಾರ್ವಜನಿಕರ ಮುಖ್ಯ ಅಂಶಗಳನ್ನು ಪರಿಗಣಿಸಿ ಆಯವ್ಯಯ ಮಂಡನೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಕಂದಾಯ ಮೂಲಗಳಿಂದ ಬರುವ 5.75 ಕೋಟಿ.ರೂ. ರಾಜ್ಯ ಸರ್ಕಾರದಿಂದ ಬರುವ ಬಂಡವಾಳ 2 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದಿಂದ 4.27 ಕೋಟಿ ರೂ ಬರುವ ಆದಾಯದ ನಿರೀಕ್ಷಣೆ ಹೊಂದಲಾಗಿದೆ ಎಂದು ತಿಳಿದರು.

ಸದಸ್ಯ ಕೆ.ತಿಪ್ಪೇಸ್ವಾಮಿ ಮಾತನಾಡಿ, ಕಂದಾಯ ಆದಾಯದಲ್ಲಿ ವರ್ಷಕ್ಕೆ ಎಷ್ಟುವಸೂಲಾಗುತ್ತಿದೆ. ಯಾವ ಯಾವುದಕ್ಕೆ ಎಷ್ಟು ತೆರಿಗೆ ವಿ ಧಿಸಲಾಗುತ್ತದೆ. ವಾಣಿಜ್ಯ ಮಳಿಗೆಗಳು, ಸೇರಿದಂತೆ ನಿಯಮಾನುಸಾರ ಕೆಲವು ತೆರಿಗೆಗಳ ವಸೂಲಾತಿಯನ್ನು ಗಮನದಲ್ಲಿಟ್ಟುಕೊಂಡು 1.20 ಕೋಟಿ ತೆರಿಗೆ ನಿರೀಕ್ಷೆಯೊಂದಿಗೆ ಮುಂದಿನ ಅಭಿವೃದ್ಧಿ ಕೈಗೊಳ್ಳಬೇಕಾಗಿದೆ . ತುಂಗಾ ಹಿನ್ನೀರು, ಕೋತಲಗೊಂದಿ ಕೆರೆ ಇನ್ನಿತರ ಕುಡಿಯುವ ನೀರನ್ನು ಶೇಖರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು. ಪಪಂನ ಸದಸ್ಯ ಟಿ.ಟಿ.ರವಿಕುಮಾರ್‌ ಮಾತನಾಡಿ, ಪ್ರತಿ ವರ್ಷದಂತೆ ಹೊಸ ಕಟ್ಟಡಹಾಗೂ ವ್ಯಾಪಾರ ಮಳಿಗೆಗಳು ಸೇರಿದಂತ  ಕಂದಾಯ ಜಾಸ್ತಿಯಾಗುತ್ತದೆ. ಸರ್ಕಾರದಿಂದವತಿಯಿಂದ ಹೆಚ್ಚಿನ ಅನುದಾನ ಪಡೆದು  ಪ್ರಗತಿಗೊಳಿಸಬೇಕಾಗಿದೆ ಎಂದು ತಿಳಿಸಿದರು. ಇದಕ್ಕೆ ಸದಸ್ಯ ಎಂ.ಅಬ್ದುಲ್ಲಾ ರವರು ಸಹಮತ ವ್ಯಕ್ತಪಡಿಸಿದರು.

ಸದಸ್ಯೆ ರೂಪಾ ಮಾತನಾಡಿ, ಪಟ್ಟಣದಲ್ಲಿ 4ನೇ ವಾರ್ಡ್‌ ನಲ್ಲಿ ಅಂಗನವಾಡಿ ಶಾಲೆ ಸೌಲಭ್ಯ ಕಲ್ಪಿಸಬೇಕಾಗಿದೆ . ಪಟ್ಟಣದಲ್ಲಿ ವೃದ್ದರಿಗೆ ಮತ್ತು ಅನಾಥರಿಗೆ ಅನಾಥಾಶ್ರಮ ಮತ್ತು ವೃದ್ದಾಶ್ರಮ ನಿರ್ಮಿಸಬೇಕೆಂದು ತಿಳಿಸಿದರು. ಪ್ರತಿಯಗಿ ಮುಖ್ಯಾ ಧಿಕಾರಿ ಕೇಂದ್ರ ಸರ್ಕಾರದಿಂದ ನಿರ್ದೇಶನವಿದ್ದು, ಪ್ರಸ್ತಾವನೆ ಸಲ್ಲಿಸಲಾಗುವುದು. ಪಟ್ಟಣದ ಸ್ವತ್ಛತೆಗೆ ಪೌರಕಾರ್ಮಿಕರ ಕೊರತೆಯಿದ್ದು, ಹೆಚ್ಚಿನ ಸಿಬ್ಬಂದಿ ನೇಮಿಸಿಕೊಳ್ಳಲು ಮೇಲಾ ಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಪಪಂ ಉಪಾಧ್ಯಕ್ಷೆ ಶುಭ ಡಿಶ್‌ರಾಜ್‌,ಸದಸ್ಯರಾದ ಟಿ.ಟಿ.ರವಿಕುಮಾರ್‌, ಎಸ್‌. ಖಾದರ್‌, ಎಂ.ಅಬ್ದುಲ್ಲಾ, ನಬಿಲ್‌ ಅನ್ಸಾರ್‌, ಕೆ.ತಿಪ್ಪೇಸ್ವಾಮಿ, ಮಂಜಣ್ಣ, ಲೀಲಾವತಿ, ಚಿತ್ತಮ್ಮ, ಪದ್ಮಾವತಿ, ಲಲಕ್ಷ್ಮೀದೇವಿ, ರೂಪ, ವಿಜಯಲಕ್ಷ್ಮೀ ಪಪಂನ ಅಭಿಯಂತರ ರೇವಣಸಿದ್ದಪ್ಪ, ಆರೋಗ್ಯ ನಿರೀಕ್ಷಕ ಶ್ರೀನಿವಾಸ್‌, ಬಸಣ್ಣ, ನೇತ್ರಾವತಿ, ಪೆನ್ನೋಬಳಿ, ಕೃಷ್ಣಮೂರ್ತಿ, ಎನ್‌.ದೇವೇಂದ್ರಪ್ಪ, ಕೃಷ್ಣಮೂರ್ತಿ, ರವಿ, ಸಿಬ್ಬಂದಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next