Advertisement

ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸಿ

04:05 PM Sep 20, 2019 | Suhan S |

ಸಕಲೇಶಪುರ: ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಈ ಬಾರಿ 13.5 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೌಡಳ್ಳಿಲೋಹಿತ್‌ ಹೇಳಿದರು. ಪಟ್ಟಣದ ಗುರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

Advertisement

ಗೊಬ್ಬರ ವ್ಯಾಪಾರದಲ್ಲಿ 4.5 ಕೋಟಿ ವಹಿವಾಟು: ನಷ್ಟದಲ್ಲಿದ್ದ ಸಂಘವನ್ನು ಹಂತಹಂತವಾಗಿ ಲಾಭದಾಯಕವಾಗಿಸಿದ್ದು, ಸಂಘದ ಅಧೀನದಲ್ಲಿ ಎರಡು ನ್ಯಾಯಬೆಲೆ ಅಂಗಡಿಗಳನ್ನು ನಡೆಸ ಲಾಗು ತ್ತಿದ್ದರೆ, ಕ್ರಿಮಿನಾಶಕ ಹಾಗೂ ಗೊಬ್ಬರದ ವ್ಯಾಪಾರದಲ್ಲಿ 4.5 ಕೋಟಿ ರೂ. ವಹಿವಾಟು ನಡೆಸಲಾಗಿದೆ. ಇದಲ್ಲದೆ ಸಂಘದ ವತಿಯಿಂದ ರೈತರ ಮಾರುಕಟ್ಟೆ ನಿರ್ಮಾಣಕ್ಕೂ ಚಿಂತನೆ ನಡೆದಿದೆ ಎಂದು ಹೇಳಿದರು.

ಯಾವುದೇ ಸಾಲವಿಲ್ಲ: ಹಾಗೆಯೇ ಸಂಘದ ಮೇಲೆ ಯಾವುದೇ ಸಾಲವಿಲ್ಲ, ಸಂಘದ ವತಿಯಿಂದ ಸಾವಯವ ಗೊಬ್ಬರ ವನ್ನೂ ಮಾರಾಟಕ್ಕಿಡಲಾಗಿದೆ ಎಂದು ತಿಳಿಸಿದರು. ವಾರ್ಷಿಕ ಸಭೆ ಅಂಗವಾಗಿ ಪ್ರತಿ ಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಸಂಘದ ಕಚೇರಿ ಯಲ್ಲಿ ಹಮಾಲಿಯಾಗಿ ಹಾಗೂ ಡಿ. ಗ್ರೂಪ್‌ ನೌಕರರಾಗಿ ಕೆಲಸ ಮಾಡುತ್ತಿರುವ ಮೆಹಬೂಬ್‌ ಹಾಗೂ ಸೋಮಣ್ಣ ಅವ ರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾ  ಧ್ಯಕ್ಷ ರಾದ ವಜ್ರಲೋಕೇಶ್‌, ಸದಸ್ಯರಾದ ಸಹಾನ, ಶಶಿಕುಮಾರ್‌, ರಮೇಶ್‌, ಸಂಘದ ಕಾರ್ಯದರ್ಶಿ ಲೋಕೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next