Advertisement
ಜತೆಗೆ ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸಾವಿರಾರು ಜನರ ಸಮ್ಮುಖದಲ್ಲಿ ಶಿಲಾನ್ಯಾಸ ಆಗಿರುವ ಸೌಡ -ಶಂಕರನಾರಾಯಣ ಸಂಪರ್ಕ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಈ ಕಾಮಗಾರಿಯನ್ನು ಅತಿ ಶೀಘ್ರ ಪ್ರಾರಂಭಿಸಲು ಹೋರಾಟ ಸಮಿತಿಯು ಶಾಸಕರಿಗೆ ಮನವಿ ನೀಡಿತು.
ಬ್ರಿಟಿಷ್ ಅಧಿಪತ್ಯದ ಕಾಲದಿಂದಲೂ ಉಪ ನೋಂದಣಿ ಕಚೇರಿ ಸಹಿತ ಹತ್ತು ಹಲವು ಸರಕಾರಿ ಕಚೇರಿಗಳನ್ನು ಹೊಂದಿರುವ ಶಂಕರನಾರಾಯಣ ತಾಲೂಕು ರಚನೆ ಕೂಗು ದಶಕಗಳಿಂದಲೂ ಮಾರ್ದನಿಸುತ್ತಿದೆ. ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಹೋರಾಟ ಸಮಿತಿಯು ಬೆಂಗಳೂರಿಗೆ ಹೋಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷಯ ಮನವರಿಕೆ ಮಾಡಿದಾಗ ಒಂದು ಹಂತದಲ್ಲಿ ಘೋಷಣೆಯಾಗುವವರೆಗೆ ಹೋಗಿ ನಂತರ ಅಲ್ಲೇ ತಣ್ಣಗಾಗುತ್ತಾ ಹೋಯಿತು.
Related Articles
Advertisement
ಮತ್ತೆ ನೆನಪುಈಗ ಯಡಿಯೂರಪ್ಪ ಅವರ ಸರಕಾರ ಬಂದಾಗ ಪುನಃ ಗರಿಗೆದರಿದ್ದು,ಹೋರಾಟ ಸಮಿತಿಯು ಮತ್ತೆ ಹೋರಾಟಕ್ಕೆ ಸಿದ್ಧವಾಗಿದೆ.ಈಗಾಗಲೇ ಜಿಲ್ಲಾಡಳಿತ ಯಂತ್ರ ಶಂಕರನಾರಾಯಣವು ಹೋಬಳಿ ಕೇಂದ್ರ ಹಾಗೂ ನಾಡ ಕಚೇರಿ ಆಗಲು ವರದಿ ತಯಾರಾಗಿ ಕಡತ ಸರಕಾರದ ಖಜಾನೆಯಲ್ಲಿ ಧೂಳು ಹಿಡಿಯುತ್ತ ಕೂತಿದೆ. ಎರಡು(ಕುಂದಾಪುರ,ಬೈಂದೂರು) ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಪ್ರಸ್ತಾವಿತ ಶಂಕರನಾರಾಯಣ ಹೋಬಳಿ ಕೇಂದ್ರಕ್ಕೆ ಸಂಬಂಧಪಟ್ಟಂತೆ ಹೋರಾಟ ಸಮಿತಿಯು ಈಗಾಗಲೇ ರಾಜ್ಯ ಸರಕಾರದ ಗಮನ ಸೆಳೆಯುತ್ತಿದ್ದು ವ್ಯಾಪ್ತಿಯ ಇಬ್ಬರು ಶಾಸಕರನ್ನು ಭೇಟಿಯಾಗಿ ಮನವಿ ಜತೆಗೆ ಮನವರಿಕೆ ಮಾಡಿದೆ.