Advertisement

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಪ್ರಿಯಾಂಕಾ ಆಚಾರ್ಯ ಅವರ ಸ್ಟ್ರಿಂಗ್‌ ಆರ್ಟ್‌ ಸೇರ್ಪಡೆ

06:13 PM May 24, 2022 | Team Udayavani |

ಶಿರ್ವ : ಬಂಟಕಲ್ಲು 92ನೇ ಹೇರೂರು ನಿವಾಸಿ ಯುವ ಚಿತ್ರ ಕಲಾವಿದೆ ಪ್ರಿಯಾಂಕಾ ಆಚಾರ್ಯ ಅವರು ರಚಿಸಿದ ವಿರಾಟ್‌ವಿಶ್ವಕರ್ಮ ಕಲಾಕೃತಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡಿದೆ.

Advertisement

ಪ್ರಿಯಾಂಕಾ ಅವರು ತನ್ನ ತಂದೆಯ ಮಾರ್ಗದರ್ಶನದಂತೆ ಸ್ಟ್ರಿಂಗ್‌ ಆರ್ಟ್‌ ಮೂಲಕ ರಚಿಸಿದ 37.5 x 38 ಇಂಚಿನ ವಿರಾಟ್‌ ವಿಶ್ವಕರ್ಮ ಕಲಾಕೃತಿಯನ್ನು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಮಾರ್ಚ್‌ತಿಂಗಳಲ್ಲಿ ಕಳುಹಿಸಿದ್ದರು. ಎಪ್ರಿಲ್‌ ತಿಂಗಳಲ್ಲಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನವರು ಅದನ್ನು ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಿದ್ದಾರೆ.

ಯುವ ಚಿತ್ರ ಕಲಾವಿದೆಯಾಗಿರುವ ಪ್ರಿಯಾಂಕಾ ಕ‌ಳೆದ ಒಂದೂವರೆ ವರ್ಷದಿಂದ ಸ್ವ ಪರಿಶ್ರಮದಿಂದ ಸ್ಟ್ರಿಂಗ್‌ ಆರ್ಟ್‌ ಕಲಿಯುತ್ತಿದ್ದು, ಈ ವರೆಗೆ ಸುಮಾರು 150ಕಲಾಕೃತಿಗಳನ್ನು ರಚಿಸಿದ್ದಾರೆ. ಅವರು ರಚಿಸಿದ ವಿವಿಧ ಕಲಾಕೃತಿಗಳು ಹೈದರಾಬಾದ್‌, ಚೆನೈ, ದಿಲ್ಲಿ, ಪುಣೆ, ಹರ್ಯಾಣ,ಮುಂಬಯಿ ಮತ್ತು ಬೆಂಗಳೂರಿಗೆ ರವಾನೆಯಾಗಿವೆ. ಬಂಟಕಲ್ಲಿಗೆ ಆಗಮಿಸಿದ್ದ ಅಂತರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್‌ ನಾಯಕ್‌ ಅವರಿಗೆ ತಾನು ರಚಿಸಿದ ಕಲಾಕೃತಿಯನ್ನು ನೀಡುವ ಮೂಲಕ ಮೇರು ಕಲಾವಿದನ ಮೆಚ್ಚುಗೆ ಗಳಿಸಿದ್ದಾರೆ.

ಇದನ್ನೂ ಓದಿ : ಮಳೆಗೆ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ

Advertisement

ಬಂಟಕಲ್ಲು ಹೇರೂರು ಕೃಷ್ಣ ಆಚಾರ್ಯ ಮತ್ತು ಯಶೋದಾ ಆಚಾರ್ಯ ದಂಪತಿಗಳ ಪುತ್ರಿಯಾಗಿರುವ ಪ್ರಿಯಾಂಕಾ ಆಚಾರ್ಯ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದು ಪ್ರಸ್ತುತ ಐಟಿ ಕಂಪೆನಿಯೊಂದರಲ್ಲಿ ಪ್ರೋಗ್ರಾಮ್ಮರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next