Advertisement
ಮುಷ್ಕರದ ಹಿನ್ನೆಲೆಯಲ್ಲಿ ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಶುಕ್ರವಾರ ಅಧಿಕಾರಿಗಳ ನೋಟಿಸ್ ಬೆದರಿಕೆಗೆ ಹೆದರಿದ್ದ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಅರ್ಧಕ್ಕಿಂತ ಹೆಚ್ಚು ಬಸ್‌ಗಳ ಕಾರ್ಯಾಚರಣೆ ನಡೆದಿತ್ತು. ಶನಿವಾರವೂ ಸಹ ಎನ್‌ಈಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ನೌಕರರ ಮನವೊಲಿಕೆಗೆ ಪ್ರಯತ್ನಿಸಿದರಾದರೂ ಫಲ ಸಿಗಲಿಲ್ಲ. ಬಹುತೇಕ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಷ್ಕರ ನಡೆಸಿದ್ದಾರೆ.
Related Articles
Advertisement
ಸಿಬ್ಬಂದಿಗಳ ಧರಣಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಸ್ವಾಮಿ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ಮತ್ತು ಸರ್ಕಾರಿ-ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಪಾಟೀಲ ಮತ್ತಿತರರು ಭೇಟಿ ನೀಡಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮುಂದುವರಿದ ಪ್ರತಿಭಟನೆ: ಕೃಷಿ ಕಾಯ್ದೆಯಿಂದ ರೈತರಿಗೆ ಹೊಸ ಮಾರುಕಟ್ಟೆ, ತಂತ್ರಜ್ಞಾನ ಲಭ್ಯ
ಸಿಬ್ಬಂದಿ ಒತ್ತಡ ಹಾಕಿಲ್ಲ:
ಬೀದರ್ ಜಿಲ್ಲೆಯಲ್ಲಿ ನಿತ್ಯ 475 ಬಸ್‌ಗಳ ಕಾರ್ಯಾಚರಣೆ ಇದ್ದು, ಶನಿವಾರ ಕೇವಲ 46 ಬಸ್‌ಗಳು ಮಾತ್ರ ಓಡಾಡಿವೆ. ಔರಾದ್ ನಿಂದ ದೇಗಲೂರಿಗೆ ಬಸ್ ಕಾರ್ಯಾಚರಣೆ ನಡೆಸಿದ್ದ ಔರಾದ ಘಟಕದ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಲಕನಿಗೆ ನೌಕರರು ಯಾವುದೇ ರೀತಿಯ ಒತ್ತಡ ಹಾಕಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಈ ಘಟನೆ ನಡೆದಿದೆ.
ಸಿ.ಎಸ್ ಫುಲೇಕರ್
ಎನ್‌ಈಕೆಆರ್‌ಟಿಸಿ ಡಿಸಿ, ಬೀದರ್
25 ಸಾವಿರ ಸಹಾಯ ಧನ
ಮಹಾರಾಷ್ಟ್ರದ ದೇಗಲೂರಿನಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಹೃದಯಾಘಾತದಿಂದ ಔರಾದ ಘಟಕದ ಬಸ್ ಚಾಲಕ ಮಕ್ಬೂಲ್ ಚಾಂದ್ ಮೃತಪಟ್ಟಿರುವ ಘಟನೆ ನೋವಿನ ಸಂಗತಿ. ಚಾಲಕನ ಕುಟುಂಬಕ್ಕೆ ವ್ಯೆಯಕ್ತಿಕವಾಗಿ 25 ಸಾವಿರ ರೂ. ಸಹಾಯ ಧನ ನೀಡುತ್ತೇನೆ ಮತ್ತು ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ಮಂಜೂರಾತಿಗೆ ಪ್ರಯತ್ನಿಸುತ್ತೇನೆ.
ಅರವಿಂದ ಅರಳಿ
ಎಂಎಲ್‌ಸಿ, ಬೀದರ್
ಇದನ್ನೂ ಓದಿ: ಅಧಿಕಾರಿಗಳ ಒತ್ತಡಕ್ಕೆ ಮಣಿದು ಕೆಲಸಕ್ಕೆ ಹಾಜರಾದ ಬಸ್ ಚಾಲಕ ಹೃದಯಾಘಾತದಿಂದ ಸಾವು