Advertisement

ಮುಷ್ಕರ ನಿಷೇಧ: ಕಾರ್ಮಿಕ ಇಲಾಖೆಯಿಂದ ಆದೇಶ

08:01 AM Apr 10, 2021 | Team Udayavani |

ಬೆಂಗಳೂರು: ಸಾರಿಗೆ ನೌಕರರು ಮತ್ತು ಸರಕಾರದ ನಡುವಣ ಗುದ್ದಾಟಕ್ಕೆ ಶುಕ್ರವಾರ ಮತ್ತೊಂದು ತಿರುವು ಸಿಕ್ಕಿದೆ. ಕೈಗಾರಿಕಾ ವಿವಾದ ಕಾಯ್ದೆಯಡಿ ಮುಷ್ಕರವನ್ನೇ ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

Advertisement

ಈ ಮೂಲಕ ಸರಕಾರ ಬಿಗಿಹಿಡಿತ ಸಾಧಿಸಿದಂತಾಗಿದ್ದು, ಮುಷ್ಕರ ನಿರತರ ವಿರುದ್ಧ “ಎಸ್ಮಾ’ ಸಹಿತ ಕಠಿನ ಕ್ರಮ ಜಾರಿಗೆ ದಾರಿ ಸುಗಮವಾಗಿದೆ. 6ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಸಂಬಂಧಿಸಿ ಸಾರಿಗೆ ನಿಗಮಗಳು ಮತ್ತು ನೌಕರರ ಕೂಟದ ನಡುವಿನ ಸಂಧಾನ ಪ್ರಕ್ರಿಯೆ ಬಾಕಿ ಇರುವಾಗ ಕಾರ್ಮಿಕರು ಮುಷ್ಕರ ಹೂಡಬಾರದು ಎಂಬ ನಿಯಮ ಇದೆ. ಹೀಗಾಗಿ ಈಗಿನ ಮುಷ್ಕರ ಇದಕ್ಕೆ ವಿರುದ್ಧವಾಗಿದ್ದು, ಸಾರ್ವಜನಿಕರಿಗೂ ತೊಂದರೆ ಉಂಟಾಗಿದೆ. ಆದ್ದರಿಂದ “ಕೈಗಾರಿಕಾ ವಿವಾದ ಕಾಯ್ದೆ-1947 ಕಲಂ 10 (3)’ ಅಡಿ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ:  ಬಾಲ್ಯ ವಿವಾಹಕ್ಕೆ ಊಟ ಪೂರೈಸಿದರೂ ಕೇಸ್‌! ರಾಜಸ್ಥಾನ ಸರಕಾರ‌ ಕಟ್ಟಾಜ್ಞೆ

ಎ. 12ರಂದು ಸತ್ಯಾಗ್ರಹ

ಇದೆಲ್ಲದರ ನಡುವೆ ನೌಕರರ ಕೂಟದ ನಿಲುವು ಅಚಲವಾಗಿದ್ದು, ಮುಷ್ಕರ ಮುಂದುವರಿಸಲು ನಿರ್ಧರಿಸಿದೆ. ಹೋರಾಟದ ರೂಪುರೇಷೆಯಲ್ಲಿ ತುಸು ಬದಲಾವಣೆ ಮಾಡಿಕೊಂಡಿದ್ದು, ಎ. 12ರಂದು ಎಲ್ಲ ಡಿಸಿಗಳು ಮತ್ತು ತಹಶೀಲ್ದಾರ್‌ ಕಚೇರಿಗಳ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement

ಪರ್ಯಾಯ ವ್ಯವಸ್ಥೆ ಮೊರೆ ಹೋದ ಜನರು

ಮುಷ್ಕರದ ನಡುವೆ ಖಾಸಗಿ ಬಸ್‌ ಗಳಿಂದ ಸುಲಿಗೆ ಹೆಚ್ಚಾಗಿದೆ. ಇದರಿಂದ ಬಚಾವಾಗಲು ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಗಳ ಮೊರೆಹೋದರು. ಪರಿಣಾಮ ಸರಣಿ ರಜೆ ನಡುವೆಯೂ ಪ್ರಮುಖ ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಕಂಡುಬಂತು.

ಇದನ್ನೂ ಓದಿ:  ಅಜ್ಜ-ಅಜ್ಜಿಯ ನೆನಪಿಗಾಗಿ 2 ಬಸ್‌ ತಂಗುದಾಣ ನಿರ್ಮಿಸಿದ ಮೊಮ್ಮಗ

ಸಾವಿರ ಬಸ್‌ ಕಾರ್ಯಾಚರಣೆ?

ಕಳೆದೆರಡು ದಿನಗಳಿಗೆ ಹೋಲಿಸಿದರೆ, ಮೂರನೇ ದಿನ ಅಲ್ಲಲ್ಲಿ ಬಸ್‌ಗಳು ರಸ್ತೆಗಿಳಿದವು. ಸಂಜೆವರೆಗೂ ನಾಲ್ಕೂ ನಿಗಮಗಳು ಸೇರಿ ಅಂದಾಜು 900-1,000 ವಾಹನಗಳು ಸಂಚಾರ ಮಾಡಿವೆ. ಇದಲ್ಲದೆ, ಸಾರಿಗೆ ಇಲಾಖೆಯು 25-26 ಸಾವಿರ ಖಾಸಗಿ ವಾಹನಗಳ ವ್ಯವಸ್ಥೆ ಮಾಡಿತ್ತು

Advertisement

Udayavani is now on Telegram. Click here to join our channel and stay updated with the latest news.

Next