Advertisement
ದ.ಕ., ಉಡುಪಿಯ ಎಲ್ಲ ತಾಲೂಕುಗಳಲ್ಲಿ ಖಾಸಗಿ ಬಸ್, ಸಿಟಿ ಬಸ್, ಸರಕಾರಿ ಬಸ್‌ಗಳು, ರಿಕ್ಷಾ ಸಂಚಾರ ಎಂದಿನಂತೆಯೇ ಸಂಚರಿಸಿ ದವು. ಬಹುತೇಕ ಸರಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಅಂಗಡಿ-ಮುಂಗಟ್ಟು, ಮಾರುಕಟ್ಟೆಗಳು ಕಾರ್ಯಾಚರಿಸಿದ ಪರಿಣಾಮ ಮುಷ್ಕರದ ಬಿಸಿ ಯಾರಿಗೂ ತಟ್ಟಿಲ್ಲ.
ಕೇರಳದಲ್ಲಿ ಬಂದ್ ಇದ್ದ ಕಾರಣದಿಂದ ಮಂಗಳೂರಿನಿಂದ ಕಾಸರಗೋಡಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿಯ ಎರಡೂ ರಾಜ್ಯಗಳ ಬಸ್‌ಗಳ ಸಂಚಾರ ಬಂದ್ ಆಗಿತ್ತು. ಕಾಸರಗೋಡು ಭಾಗಕ್ಕೆ ತೆರಳುವ ಹಾಗೂ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಸಮಸ್ಯೆಯಾಯಿತು. ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರು ಮುಷ್ಕರ ಬೆಂಬಲಿಸಿದ ಪರಿಣಾಮ ಬಂದರು ಮಾರುಕಟ್ಟೆ ಬುಧವಾರ ಬಿಕೋ ಎನ್ನುತ್ತಿತ್ತು. ಬಂದರು ವ್ಯಾಪ್ತಿಯ ಹಲವು ಅಂಗಡಿಗಳು ಮುಚ್ಚಿದ್ದವು. ಮಂಗಳೂರು ಸೇರಿದಂತೆ ಜಿಲ್ಲೆಯ ಕೆಲವು ಬ್ಯಾಂಕ್‌ಗಳ ಸಿಬಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಬ್ಯಾಂಕ್‌ಗಳಲ್ಲಿ ಸಿಬಂದಿ ಕೊರತೆ ಎದ್ದುಕಾಣುತ್ತಿತ್ತು. ಎಲ್‌ಐಸಿ ಸೇರಿದಂತೆ ಕೆಲವು ಕಚೇರಿಗಳಲ್ಲಿ ವ್ಯವಹಾರ ಕಡಿಮೆ ಇತ್ತು.
Related Articles
ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಬುಧವಾರ ಮಂಗಳೂರು ಪುರಭವನದ ಆವರಣದಲ್ಲಿ ಪ್ರತಿಭಟನ ಪ್ರದರ್ಶನ ನಡೆಯಿತು.
Advertisement
ಉಡುಪಿಯ ಮುಖ್ಯ ರಸ್ತೆಯಲ್ಲಿ ಸಿಐಟಿಯು ಸಂಯೋಜಿತ ಕಾರ್ಮಿಕ ಸಂಘಟನೆಗಳು ಕೇಂದ್ರ ಸರಕಾರದ ನೀತಿ ವಿರುದ್ಧ ನಗರದ ಪ್ರತಿಭಟನೆ ಮೆರವಣಿಗೆ ನಡೆಸಿದವು.
ಸಂಘಟನೆಗಳ ಮುಖಂಡರು ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.