Advertisement

ವಿವಿದ ಬೇಡಿಕೆಗೆ ಒತ್ತಾಯಿಸಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

10:50 AM Jul 01, 2022 | Team Udayavani |

ಕುಣಿಗಲ್:  ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ಕಸದ ವಾಹನ ಚಾಲಕರನ್ನು ಹಾಗೂ ಹೊರ ಗುತ್ತಿಗೆ ನೌಕರರನ್ನು ಪೌರ ಕಾರ್ಮಿಕ ರೀತಿಯಲ್ಲಿ ನೇಮಕ ಮಾಡಿಕೊಂಡು ನೇರ ವೇತನ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಗರಸಭೆ, ನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯ್ತಿ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಕೆಲಸವನ್ನು ಸ್ಥಗಿತಗೊಳಿಸಿ ಪುರಸಭೆ ಮುಂಭಾಗ ಶಾಮಿಯಾನ ಹಾಕಿಕೊಂಡು ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.

Advertisement

ಹಲವು ವರ್ಷಗಳಿಂದ ಕಸದ ಗಾಡಿ ಚಾಲಕರು, ವಾಟರ್ ಮ್ಯಾನ್, ಡಾಟಾ ಎಂಟ್ರಿ ಅಪರೇಟರ್ ಗಳು, ಒಳಚರಂಡಿ ಕಾರ್ಮಿಕರು, ಸ್ಮಶಾಣ ಕಾವಲುಗಾರರು ಸೇರಿದಂತೆ, ನಾನಾ ವಿಭಾಗದಲ್ಲಿ ಪೌರ ಕಾರ್ಮಿಕರೊಟ್ಟಿಗೆ ದುಡಿಯುತ್ತಿದ್ದಾರೆ. ಆದರೆ ಪೌರಕಾರ್ಮಿಕನ್ನು ಖಾಯಂಗೋಳಿಸಿ, ಇತರನ್ನು ಹೊರಗುತ್ತಿಗೆ ನೌಕರರೆಂದು ಗುರುತಿಸಿ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಸ್ವಚ್ಛತೆ ಕೆಲಸವನ್ನು ಸ್ಥಗಿತಗೊಳಿಸಿ ಸಂಘದ ಅಧ್ಯಕ್ಷ ಲೋಕೇಶ್ ಹಾಗೂ ಉಪಾಧ್ಯಕ್ಷ ಕೆ.ವೈ ಕೃಷ್ಣಮೂರ್ತಿ ಅವರ  ನೇತೃತ್ವದಲ್ಲಿ ಕಚೇರಿ ಮುಂಭಾಗ ಮುಷ್ಕರ ಆರಂಭವಾಗಿದೆ.

ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, 2017ರಲ್ಲಿ ಅಂದಿನ ಸರ್ಕಾರ ಪೌರಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧರಿಸಿದೆ. 30 ವರ್ಷಗಳಿಂದ ಪೌರಕಾರ್ಮಿಕರ ಜೊತೆ ಕೆಲಸ‌ ಮಾಡುತ್ತಿರುವ ಕಸದ ಗಾಡಿ ಚಾಲಕರು, ಸ್ಮಶಾಣ ಕಾವಲುಗಾರರು ಹಾಗೂ ಕಚೇರಿ ಡಾಟಾ ಎಂಟ್ರಿ ನೌಕರರು ನೀರಗಂಟಿಗಳನ್ನು ಖಾಯಂ ಮಾಡದೇ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಇದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ತಕ್ಷಣ ನಮ್ಮನು ಖಾಯಂಗೊಳಿಸಿ ನೇರ ವೇತನ ನೀಡಬೇಕೆಂದು ಒತ್ತಾಯಿಸಿದರು.

‌‌‌‌‌‌ಮುಷ್ಕರದಲ್ಲಿ ನೌಕರರಾದ ಕಲ್ಲೇಶ್, ಜಗದೀಶ್, ನಾಗರಾಜು, ಜಯರಾಮಯ್ಯ, ನಾರಾಯಣ್, ಸಾಗರ್,ಶಾಂತ, ಗೌರಮ್ಮ, ಕೊಟ್ರಮ್ಮ, ರತ್ನಮ್ಮ, ಶ್ರೀಕೃಷ್ಣ, ಶಿವರಾಜು ಇನ್ನಿತರರು ಭಾಗವಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next