Advertisement

ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸಿ

06:21 PM May 09, 2021 | Team Udayavani |

ಹಾಸನ: ಕೊರೊನಾ 2ನೇ ಅಲೆಯನ್ನು ತಡೆಗಟ್ಟುವನಿಟ್ಟಿನಲ್ಲಿ ಸರ್ಕಾರವು ಮೇ 10ರಿಂದ 24ರ ವರೆಗೆಸಂಪೂರ್ಣ ಲಾಕ್‌ಡೌನ್‌ ಘೋಷಿಸಿದ್ದು, ಜಿಲ್ಲೆಯಲ್ಲಿಕಟ್ಟುನಿಟ್ಟಾಗಿ ಲಾಕ್‌ಡೌನ್‌ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲತಾಲೂಕುಗಳ ತಹಶೀಲ್ದಾರ್‌ ಹಾಗೂ ಇತರೆ ಅಧಿಕಾರಿಗಳೊಂದಿಗೆ ಶನಿವಾರ ವಿಡಿಯೋ ಸಂವಾದ ನಡೆಸಿದಅವರು, ಬೆಂಗಳೂರಿನಿಂದ ಬರುವ ಸೋಂಕಿತರಿಗೆ ಸೀಲ್‌ಹಾಕಿ ಹೋಂ ಕ್ವಾರಂಟೈನ್‌ ಮಾಡುವಂತೆ ಸೂಚಿಸಿದರು.

ಮನೆಯಲ್ಲೇ ಪ್ರತ್ಯೇಕವಾಗಿಚಿಕಿತ್ಸೆ ಪಡೆಯತ್ತಿರುವ ಕೊರೊನಾಸೋಂಕಿತರ ಮೇಲೆ ಹೆಚ್ಚಿನ ನಿಗಾವಹಿಸಲುಆಶಾ, ಅಂಗನವಾಡಿ ಕಾರ್ಯಕರ್ತೆಯರುಹಾಗೂ ಗ್ರಾಪಂ ಸಿಬ್ಬಂದಿಗಳಿಗೆ ಸೂಚಿಸಿಎಂದು ಅಧಿಕಾರಿಗಳಿಗೆ ತಿಳಿಸಿದರು.ಲಾಕ್‌ಡೌನ್‌ ವೇಳೆ ಜೀವನಾವಶ್ಯಕವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10ಗಂಟೆಯವರೆಗೆ ಅವಕಾಶರುತ್ತದೆ. ಹೋಟೇಲ್‌ಗ‌ಳಲ್ಲಿಪಾರ್ಸಲ್‌ಗ‌ಳಿಗೆ ಮಾತ್ರ ಅವಕಾಶವಿದ್ದು ಯಾವುದೇವಾಹನದಲ್ಲಿ ಜನರು ವಾಹನಗಳಲ್ಲಿ ಬರುವಂತಿಲ್ಲ ಎಂದರು.

ಸರ್ಕಾರದ ನಿಯಮಾವಳಿಗಳನ್ನ ಅತ್ಯಂತಗಂಭೀರವಾಗಿ ಪರಿಗಣಿಸಿ ಪರಿಣಾಮಕಾರಿಯಾಗಿಅನುಷ್ಠಾನ ಮಾಡಲು ಕ್ರಮ ಕೈಗೊ ಳ್ಳುವಂತೆ ಎಲ್ಲತಹಶೀಲ್ದಾರ್‌ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳಿಗೆಡೀ ಸಿ ಸೂಚಿಸಿದರು..ಸಮುದಾಯ ಆರೋಗ್ಯಕೇಂದ್ರದಲ್ಲಿ ಕೊರೊನಾ ಕೇರ್‌ಕೇಂದ್ರಗಳನ್ನು ತೆರೆದು ಅಗತ್ಯ ಚಿಕಿತ್ಸೆನೀಡುವುದರ ಜೊತೆಗೆ ಪೌಷ್ಟಿಕಾಂಶಗಳಆಹಾರ ನೀಡಲು ಕ್ರಮ ಕೈಗೊಳ್ಳಬೇಕು.ಆಸ್ಪತ್ರೆಗಳಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಗೌರವಧನದ ಆಧಾರದಲ್ಲಿತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಬೇಕು.

ಕಾಳಸಂತೆಯಲ್ಲಿ ರೆಮ್‌ಡೆಸಿವಿಯರ್‌ಚುಚ್ಚುಮದ್ದನ್ನು ಮಾರಾಟ ಮಾಡುತ್ತಿರುವ ದೂರುಗಳಿದ್ದುಅಂತಹವರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಕೊರೊನಾ ವಾರ್‌ ರೂಂ ನಿರ್ವಹಣೆಯಮೇಲುಸ್ತುವಾರಿಗೆ ನೋಡಲ್‌ ಅಧಿಕಾರಿಯಾಗಿ ಹಾಸನಉಪವಿಭಾಗಾಧಿಕಾರಿ ಬಿ.ಎ ಜಗದೀಶ್‌ ಅವರನ್ನು ನೇಮಕಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಹೊಳೆನರಸೀಪುರದಿಂದ ವಿಡಿಯೋ ಸಂವಾದದಲ್ಲಿಪಾಲ್ಗೊಂಡು ಮಾತನಾಡಿದ ಶಾಸಕ ಎಚ್‌.ಡಿ ರೇವಣ್ಣಅವರು, ಕಾಳಸಂತೆಯಲ್ಲಿ ರೆಮ್‌ಡೆಸಿವಿಯರ್‌ಮಾರಾಟವಾ ಗುತ್ತಿ ರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.

Advertisement

ವೈದ್ಯರು ಮತ್ತು ಸಿಬ್ಬಂದಿ ವರ್ಗದವರುಕೇಂದ್ರ ಸ್ಥಾನದಲ್ಲೆ ಇದ್ದು ಕರ್ತವ್ಯ ನಿರ್ವಹಿಸುವಂತೆನಿರ್ದೇಶನ ನೀಡ ಬೇಕೆಂದು ಡೀಸಿಯನ್ನು ಒತ್ತಾಯಿಸಿದರು.ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಅವರುಮಾತನಾಡಿ ಅರಕಲಗೂಡಿನಲ್ಲಿ ಕೊರೋನಾ ಸೊಂಕುತಡೆಗಟ್ಟಲು 70 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದ್ದು,ಖಾಸಗಿಯವರಿಂದ 60 ಜಂಬೂ ಖಾಲಿ ಸಿಲಿಂಡರ್‌ಗಳನ್ನುಸಂಗ್ರಹಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಕವಿತಾರಾಜಾರಾಂ, ಡಿಎಚ್‌ಒ ಡಾ.ಸತೀಶ್‌, ಉಪವಿಭಾಗಾಧಿಕಾರಿಗಳಾದ ಬಿ.ಎ ಜಗದೀಶ್‌, ಗಿರೀಶ್‌ ನಂದನ್‌, ಆರ್‌ಸಿಎಚ್‌ ಅಧಿಕಾರಿ ಕಾಂತರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next