Advertisement

ಹುಣಸೂರಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್: ಬೀದಿಗಿಳಿದ ವಾಹನಗಳು ಸೀಜ್

09:07 AM May 10, 2021 | Team Udayavani |

ಹುಣಸೂರು: ರಾಜ್ಯದಾದ್ಯಂತ ಇಂದಿನಿಂದ ( ಮೇ.10) 14 ದಿನಗಳ ಕಾಲ ಲಾಕ್​ಡೌನ್​ ಜಾರಿ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಆದೇಶಿಸಿದೆ. ಹೀಗಾಗಿ ನಗರದಲ್ಲಿ ಬೆಳ್ಳಂಬೆಳಗ್ಗೆ ತಹಸೀಲ್ದಾರ್ ಹಾಗೂ ಪೊಲೀಸರು ಫೀಲ್ಡ್​ಗಿಳಿದಿದ್ದು, ಪ್ರತಿ ವಾಹನ ತಪಾಸಣೆ ಮಾಡುತ್ತಿದ್ದಾರೆ.

Advertisement

ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದ್ದು, ಅವಶ್ಯಕತೆ ಹೊರತು ಪಡಿಸಿ ಅನಗತ್ಯವಾಗಿ ರಸ್ತೆಗಳಿಯುತ್ತಿರುವ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.

ಕೋವಿಡ್ ಮಹಾಮಾರಿ ಸರಪಳಿ ತುಂಡರಿಸಲು ಸರಕಾರ ಕಠಿಣ ಕ್ರಮ ಕೈಗೊಂಡಿದ್ದರೂ ಬೇಕಾಬಿಟ್ಟಿಯಾಗಿ ಬೈಕ್ ಓಡಿಸುತ್ತಿದ್ದವರಿಗೆ ತಹಸೀಲ್ದಾರ್ ಬಸವರಾಜು ನೆತೃತ್ವದ ತಂಡ ಬೈಕ್ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ ನೀಡಿದೆ.

ಹುಣಸೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಬೈಕ್ ವಶಕ್ಕೆ ಪಡೆದು ದಂಡ ವಿಧಿಸಿ ಕಳುಹಿಸಿದ್ದ ಪೊಲೀಸರು ಇದೀಗ ತಹಸೀಲ್ದಾರ್ ಐ.ಇ. ಬಸವರಾಜ್ ನೇತೃತ್ವದಲ್ಲಿ ಮುಂಜಾನೆಯೇ ಕಾರ್ಯಚರಣೆ ನಡೆಸಿ ನಗರ ಸೇರಿದಂತೆ ಗ್ರಾಮಾಂತರ. ಬಿಳಿಕೆರೆ ಠಾಣೆಗಳಿಂದ ನೂರಕ್ಕೂ ಹೆಚ್ಚು ಬೈಕ್ ಗಳನ್ನು ಸೀಜ್ ಪಡೆದರು.

ಕಾರ್ಯಾಚರಣೆಯಲ್ಲಿ ಸಿಪಿಐ ರವಿ, ಎಸ್ಐ ಲತೇಶ್ ಕುಮಾರ್ ಸೇರಿದಂತೆ 15ಕ್ಕೂ ಹೆಚ್ಚು ಪೋಲೀಸರು, ಗೃಹರಕ್ಷಕರು, ನಗರಸಭೆ ಆರೋಗ್ಯ ನಿರೀಕ್ಷಕರಾದ ಸತೀಶ್ ಶಶಿ ಹಾಗೂ ಸುಬ್ಬಂದಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next