ಹಾಸನ: ಲಾಕ್‌ಡೌನ್ ಜಾರಿಯ ಮುನ್ನಾ ದಿನವಾದಭಾನುವಾರ ಸಾರ್ವಜನಿಕರು ಅಗತ್ಯ ವಸ್ತುಗಳನ್ನುತರಾತುರಿಯಲ್ಲಿ ಖರೀದಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಇದ್ದ ಅವಕಾಶದಲ್ಲಿ ದಿನಸಿಅಂಗಡಿಗಳು, ತರಕಾರಿ ಮಾರುಕಟ್ಟೆಯಲ್ಲಿ ಜನರುತರಾತುರಿಯಲ್ಲಿ ಖರೀದಿಯಲ್ಲಿ ತೊಡಗಿದ್ದರು.
ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆಸೋಮವಾರದಿಂದ ಕಟ್ಟುನಿಟ್ಟಾಗಿ ಲಾಕ್‌ಡೌನ್‌ಜಾರಿಮಾಡಲು ಅಧಿಕಾರಿಗಳು ಅಣಿಯಾಗಿದ್ದು,ಹಾಸನ ನಗರದ ಕಟ್ಟಿನಕೆರೆ ಮಾರುಕಟೆ rಯನ್ನು 14ದಿನ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದು,ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆಯ ನಡುವೆ ತರಕಾರಿ ಮಾರಾಟಕ್ಕೆ ಹಾಸನ ನಗರ ಬಸ್‌ನಿಲ್ದಾಣ, ಜಿಲ್ಲಾ ಕ್ರೀಡಾಂಗಣದಲ್ಲಿ ತಾತ್ಕಾಲಿಕವ್ಯವಸ್ಥೆಯನ್ನು ಮಾಡಿದ್ದಾರೆ.
ಕಟ್ಟಿನಕೆರೆ ಮಾರುಕಟ್ಟೆಯನ್ನು ಬಂದ್ ಮಾಡುವನಿರ್ಧಾರ ಪ್ರಕಟವಾಗುತ್ತಿದ್ದಂತೆ ವ್ಯಾಪಾರಿಗಳುಹಾಸನ ನಗರ ಬಸ್‌ನಿಲ್ದಾಣ ಮತ್ತು ಜಿಲ್ಲಾಕ್ರೀಡಾಂಗಣದ ಅವರಣದಲ್ಲಿ ತಮ್ಮ ಅಂಗಡಿಗಳನ್ನುತೆರೆಯುವ ಸಿದ್ಧತೆಯನ್ನು ಭಾನುವಾರವೇ ಮಾಡಿಕೊಂಡರು.
ತಮ್ಮ ವ್ಯಾಪಾರಕ್ಕೆ ಜಾಗಗುರ್ತಿಸಿಕೊಳ್ಳಲು ಮುಗಿಬಿದ್ದು ವ್ಯಾಪಾರಿಗಳುಪ್ಲಾಸ್ಟಿಕ್, ಗೋಣಿ ತಾಟುಗಳನ್ನು ಕಟ್ಟುವಾಗ ಕೆಲವರುಕಿತ್ತಾಡಲು ಮುಂದಾದ ಪ್ರಸಂಗ ನಡೆಯಿತು.ಸೋಮವಾರದಿಂದ ಬೆಳಗ್ಗೆ 6 ರಿಂದ 10ಗಂಟೆಯ ನಡುವೆ ಮಾತ್ರ ತರಕಾರಿ ಸೇರಿದಂತೆಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು,ಖರೀದಿಗೆ ಬರುವ ಗ್ರಾಹಕರು ನಡೆದುಕೊಂಡೇಬರಬೇಕು. ವಾಹಗಳಲ್ಲಿ ಬರುವಂತಿಲ್ಲ.ವಾಹನಗಳಲ್ಲಿ ಬಂದರೆ ವಾಹನಗಳನ್ನುವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು.