Advertisement

ಮತಾಂತರ ವಿರುದ್ಧ ಕಠಿಣ ಕಾನೂನು ಜಾರಿ ಅವಶ್ಯ 

01:24 PM Oct 02, 2021 | Team Udayavani |

ಹುಬ್ಬಳ್ಳಿ: ಕಳೆದ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ ಅವರು ತಮ್ಮ ತಾಯಿಯ ಮತಾಂತರದ ಬಗ್ಗೆ ಪ್ರಸ್ತಾಪ ಮಾಡಿದಾಗ ಸದನದಲ್ಲಿದ್ದ ಎಲ್ಲರಿಗೂ ನೋವಾಗಿದೆ. ಇತ್ತೀಚೆಗೆ ಕೆಲವು ಕ್ರಿಶ್ಚಿಯನ್ನರು ಮತಾಂತರ ಕಾರ್ಯದಲ್ಲಿ ಹೆಚ್ಚು ತೊಡಗಿಕೊಂಡಿರುವುದು ಕೂಡ ನಿಜ. ಹೀಗಾಗಿ ಬಲವಂತವಾಗಿ ಹಾಗೂ ಆಮಿಷವೊಡ್ಡಿ ಮತಾಂತರ ಮಾಡುವವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದು ಅವಶ್ಯ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಶ್ಚಿಯನ್ನರ ಮತಾಂತರಕ್ಕೆ ಹೆಚ್ಚು ದಲಿತ ಸಮುದಾಯದ ಜನತೆ ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಲಿಂಗಾಯತರು ಕೂಡ ಮತಾಂತರವಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಕಳೆದ ಅಧಿವೇಶನದಲ್ಲಿ ಗೃಹ ಸಚಿವರು ಕೂಡ ಇದರ ಬಗ್ಗೆ ದೂರು ಬರುತ್ತಿವೆ, ಈ ಕುರಿತು ಒಂದು ಕಟ್ಟುನಿಟ್ಟಿನ ಕಾನೂನು ತರುತ್ತೇವೆ ಎಂದು ತಿಳಿಸಿದ್ದಾರೆ. ನಮ್ಮ ಅಭಿಪ್ರಾಯ ಸಹ ಅದೇ ಆಗಿದೆ ಎಂದರು.

ಜನರು ತಾವೇ ಒಪ್ಪಿಕೊಂಡು ಬೇರೆ ಧರ್ಮಕ್ಕೆ ಹೋಗುವುದು ಬೇರೆಯಾಗುತ್ತದೆ. ಆದರೆ ಇಲ್ಲಿ ಬಲವಂತವಾಗಿ ಕೆಲವು ಆಮಿಷಗಳನ್ನು ತೋರಿಸಿ ಮತಾಂತರ ಮಾಡಲಾಗುತ್ತಿದೆ. ಬೀದರ ಸೇರಿದಂತೆ ಬೇರೆ ಕಡೆ ನಾವು ಹೋದಾಗ ಈ ಬಗ್ಗೆ ನಮ್ಮಗೂ ದೂರುಗಳು ಬಂದಿವೆ. ಹೀಗಾಗಿ ಗೃಹ ಮಂತ್ರಿಗಳು ಇದರ ಬಗ್ಗೆ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಶೆಟ್ಟರ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next