Advertisement

ಸ್ವಚ್ಛ ಭಾರತಕ್ಕೆ ಕಠಿನ ಕಾನೂನು ಶೀಘ್ರ?

12:30 AM Feb 14, 2019 | Team Udayavani |

ಹೊಸದಿಲ್ಲಿ: ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಕಾನೂನಿ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳಲು ಸಂಸತ್‌ನ ಸ್ಥಾಯಿ ಸಮಿತಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಯೋಚನೆಯಲ್ಲಿರುವಾಗಲೇ ಸಮಿತಿ ಈ ಶಿಫಾರಸು ಮಾಡಿದೆ. ಕೆಲವೊಂದು ಸ್ಥಳೀಯ ಸಂಸ್ಥೆಗಳಲ್ಲಿ ದಂಡ ವಿಧಿಸುವುದು ಸೇರಿದಂತೆ ಹಲವು ಕ್ರಮಗಳನ್ನು ವಿಧಿಸಲಾಗಿದ್ದರೂ, ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿಲ್ಲ. ಸ್ವಚ್ಛ ಭಾರತ ಮಿಷನ್‌ (ಎಸ್‌ಬಿಎಂ) ಜಾರಿಗೆ ಸಂಸತ್‌ ಸಮಿತಿ ಕಠಿಣ ಕಾನೂನು ಜಾರಿಗೆ ಶಿಫಾರಸು ಮಾಡಿದ್ದರೂ, ಶುಚಿತ್ವ ಎನ್ನುವ ವಿಚಾರ ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುವ ವಿಷಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next