ಚಾಮರಾಜನಗರ: ಅಂತಾರಾಜ್ಯ ಸರಕು ಸಾಗಣೆ ವಾಹನ ಚಾಲಕರ ಕ್ವಾರಂ ಟೈನ್, ಅಂತರ ಜಿಲ್ಲೆ, ಅಂತಾರಾಜ್ಯ ಚೆಕ್ ಪೋಸ್ಟ್‌ಗಳ ಆರಂಭ, ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ ಸೇರಿದಂತೆ ವಿವಿಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಜಾರಿಗೊಳಿಸಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ತಮಿಳುನಾಡಿಗೆ ಹೋಗಿದ್ದ ಸರಕು ವಾಹನ ಚಾಲಕನ ಸಂಪರ್ಕಿತರಿಂದ ಹೆಚ್ಚು ಪ್ರಕರಣಗ ಳಾಗಿವೆ. ಪರಿಸ್ಥಿತಿ ನಿಭಾಯಿಸಿಲು ಕ್ರಮ ಕೈಗೊಳ್ಳುತ್ತಿದ್ದೇವೆ. ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಹೋಗುವ ವರ್ತಕರು, ವಾಹನ ಚಾಲಕರು ಜಿಲ್ಲೆಗೆ ಹಿಂದಿರುಗಿ ದಾಗ 3 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ಮತ್ತೆ ತೆರೆಯಲಾಗಿದೆ. ವಿಶೇಷವಾಗಿ ಮೈಸೂರು ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಗಡಿಗಳಲ್ಲಿ ಅಂತಾರಾಜ್ಯ ಚೆಕ್‌ಪೋಸ್ಟ್ ಕಾರ್ಯ ನಿರ್ವಹಿಸುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಚೆಕ್‌ಪೋಸ್ಟ್‌ಗಳು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ರಸ್ತೆಗಳು ಬಂದ್: ತಮಿಳು ನಾಡು ಪಾಲಾರ್ ಹಾಗೂ ನಾಲ್ ರೋಡ್ ಚೆಕ್‌ಪೋಸ್ಟ್ ಅನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಅಂತಾರಾಜ್ಯ ಪ್ರಯಣಿಸಲು ಸೇವಾ ಸಿಂಧುವಿನ ಮೂಲಕ ಹೆಸರು ನೋಂದಾಯಿಸಿ ಕೊಂಡು ಬಂದವರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಬೇಕಿದೆ. ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಮೊಬೈಲ್ ಸ್ವ್ಯಾಬ್: ಸೋಂಕಿತರಿಂದ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಗಂಟಲು ದ್ರವದ ಪರೀಕ್ಷೆಗಾಗಿ ಮೊಬೈಲ್ ಸ್ವ್ಯಾಬ್ ಕಲೆಕ್ಷನ್ ಯೂನಿಟ್ ಸ್ಥಾಪಿಸ ಲಾಗಿದೆ. ಇತರೆ ಕಾಯಿಲೆಗಳ 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಬಾಣಂತಿಯರಿಗೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಯುತ್ತಿದೆ ಎಂದು ಡೀಸಿ ಮನವಿ ಮಾಡಿದರು.