Advertisement

ಮಾರ್ಗಸೂಚಿ ಉಲ್ಲಂಘಿಸಿದರೆ ಕಠಿಣ ಕ್ರಮ

12:01 PM Apr 02, 2021 | Team Udayavani |

ದಾವಣಗೆರೆ: ಅತಿ ಹೆಚ್ಚು ಜನಸಂದಣಿಯಸ್ಥಳಗಳಲ್ಲಿ ಕಟ್ಟುನಿಟ್ಟಾಗಿ ಕೋವಿಡ್‌ ಮಾರ್ಗಸೂಚಿ ಅನುಸರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದುಎಂದು ಜಿಲ್ಲಾಧಿ ಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆನೀಡಿದ್ದಾರೆ.ಗುರುವಾರ ತುಂಗಭದ್ರಾ ಸಭಾಂಗಣದಲ್ಲಿವ್ಯಾಪಾರ ವಹಿವಾಟು, ಕಲ್ಯಾಣ ಮಂಟಪ,ಶೈಕ್ಷಣಿಕ ಸಂಸ್ಥೆ ,ಆರ್ಥಿಕ ಚಟುವಟಿಕೆ ನಡೆಸುವಮಾಲೀಕರುಗಳಿಗೆ ಕೋವಿಡ್‌ ಮಾರ್ಗಸೂಚಿಗಳಕಟ್ಟುನಿಟ್ಟಿನ ಅನುಸರಣೆ ಕುರಿತು ತಿಳಿಸಲುಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು.

Advertisement

ದೊಡ್ಡ ಅಂಗಡಿ,ವ್ಯಾಪಾರ ವಹಿವಾಟು ಕೇಂದ್ರ, ಮದುವೆ ಮಂಟಪ,ಎಪಿಎಂಸಿ, ಥಿಯೇಟರ್‌, ವಸತಿ ಶಾಲೆಗಳುಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕೋವಿಡ್‌ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕುಎಂದು ಸೂಚಿಸಿದರು.ಹೆಚ್ಚಾಗಿ ಜನ ಸೇರುವ ಅಂಗಡಿಗಳು, ಕೇಂದ್ರಗಳನ್ನೇ ಸೂಪರ್‌ ಸ್ಪೆಡರ್‌ ಎಂದು ಕರೆಯಲಾಗುತ್ತಿದೆ.ಅಂತಹ ಕಡೆ ಕೊರೊನಾ ನಿಯಂತ್ರಣ ಅಗತ್ಯವಾಗಿದೆ.ಹಾಗಾಗಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿಪಾಲಿಸಬೇಕು.

ಕಳೆದ ಮಾರ್ಚ್‌ನಲ್ಲಿ ಕೇವಲ 2ಪ್ರಕರಣಗಳಿದ್ದವು. ಲಾಕ್‌ಡೌನ್‌ ತಯಾರಿ ಆಗಿತ್ತು.ಜನರು ಅತ್ಯಂತ ಎಚ್ಚರಿಕೆಯಿಂದ ಇದ್ದರು. ಈಗ 156ಪ್ರಕರಣಗಳಿದ್ದರೂ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಉಡಾಫೆಯಿಂದ ಎಲ್ಲಿ ಬೇಕೆಂದರಲ್ಲಿ ಓಡಾಡುತ್ತಿದ್ದು,ಮಾಸ್ಕ್ ಧರಿಸುತ್ತಿಲ್ಲ, ಅಂತರ ಕಾಪಾಡುತ್ತಿಲ್ಲ ಎಂದುಬೇಸರ ವ್ಯಕ್ತಪಡಿಸಿದರು.ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ.ಕೋವಿಡ್‌ ವೈರಾಣು ರೂಪಾಂತರಗೊಂಡಿದ್ದುಎರಡನೇ ಅಲೆಯಲ್ಲಿ ಅತ್ಯಂತ ವೇಗವಾಗಿಹರಡುತ್ತಿದೆಯಾದ್ದರಿಂದ ಯಾರೂ ಕೋವಿಡ್‌ಅನ್ನು ಹಗುರವಾಗಿ ಪರಿಗಣಿಸಬಾರದು.ವ್ಯಾಪಾರ, ವಹಿವಾಟು, ಮದುವೆ ಮನೆ, ಶೈಕ್ಷಣಿಕಸಂಸ್ಥೆಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ.

ಮೈಮರೆತಿರುವುದು ಸಲ್ಲದು ಎಂದರು.ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ರಾಘವನ್‌ಮಾತನಾಡಿ, ಕಳೆದ ಮಾ. 4 ರಿಂದ ಕೋವಿಡ್‌ನಿಯಂತ್ರಣ ಚಟುವಟಿಕೆಯನ್ನು ಸರ್ಕಾರ ಅತ್ಯಂತಕಟ್ಟುನಿಟ್ಟಾಗಿ ಆರಂಭಿಸಿದೆ. ಜಿಲ್ಲೆಯಲ್ಲಿ ಈವರೆಗೆ27,605 ಪಾಸಿಟಿವ್‌ ಪ್ರಕರಣ ಬಂದಿದ್ದು, ಒಟ್ಟು264 ಸಾವು ಸಂಭವಿಸಿದೆ. ಆಗಸ್ಟ್‌ನಲ್ಲಿ ಅತಿ ಹೆಚ್ಚುಪಾಸಿಟಿವಿಟಿ ದರ ಶೇ. 16.30 ಇತ್ತು. ಸೋಂಕುಹರಡುವ ಕೊಂಡಿ ತುಂಡು ಮಾಡುವ ಕಾರ್ಯಮಾಡುತ್ತಾ ಬಂದಿದ್ದು, ಮಾರ್ಚ್‌ನಲ್ಲಿ ಪಾಸಿಟಿವಿಟಿದರ 0.29 ಇದೆ. ಪ್ರಸ್ತುತ 160 ಪಾಸಿಟಿವ್‌ಪ್ರಕರಣಗಳಲ್ಲಿ ದಾವಣಗೆರೆ ತಾಲೂಕಿನದ್ದೇ 124ಪ್ರಕರಣಗಳಿವೆ.

ದಾವಣಗೆರೆ ನಗರದಲ್ಲಿ 106 ಪ್ರಕರಣಇದ್ದು ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆಎಂದು ಹೇಳಿದರು.ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯಮಾತನಾಡಿ, ಕೋವಿಡ್‌ ನಿಯಂತ್ರಣಹಿನ್ನೆಲೆಯ ಸರ್ಕಾರದ ಮಾರ್ಗಸೂಚಿಗಳನ್ನುನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಸ್ವಯಂನಿಯಂತ್ರಣ ಅತಿ ಮುಖ್ಯ. ವೈಯಕ್ತಿಕವಾಗಿಕೋವಿಡ್‌ ವಿರುದ್ಧ ಹೋರಾಡಬೇಕಿರುವ ಇಂದಿನಸ್ಥಿತಿಯಲ್ಲಿ ವ್ಯಾಪಾರ-ವಹಿವಾಟು ಇತರೆ ಸಂಸ್ಥೆಗಳುಸಹಕರಿಸಬೇಕು. ಮಾರ್ಗಸೂಚಿ ಉಲ್ಲಂಘಿಸಿದರೆಕ್ರಮ ನಿಶ್ಚಿತ.

Advertisement

ಶೀಘ್ರದಲ್ಲೇ ವಾರ್ಡುವಾರು ಮಾರ್ಷಲ್‌ಗಳನ್ನು ನೇಮಕ ಮಾಡಿ ಮಾಸ್ಕ್ ಧರಿಸದಿದ್ದರೆ 250,ನಿಗದಿತ ಜನರಿಗಿಂತ ಹೆಚ್ಚು ಸೇರಿದರೆ ಹಾಲ್‌,ಮಂದಿರಗಳ ಮಾಲಿಕರಿಗೆ, ಆಯೋಜಕರಿಗೆ 5 ರಿಂದ10 ಸಾವಿರ ದಂಡ ಜೊತೆಗೆ ವಿಪತ್ತು ನಿರ್ವಹಣಾಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದುಎಂದರು.ಜಿಪಂ ಸಿಇಒ ಡಾ| ವಿಜಯ ಮಹಾಂತೇಶದಾನಮ್ಮನವರ್‌ ಮಾತನಾಡಿ, ಗಡಿ ಜಿಲ್ಲೆಗಳಲ್ಲಿಕೋವಿಡ್‌ ಪ್ರಕರಣಗಳ ಸಂಖ್ಯೆ ವೇಗವಾಗಿಹೆಚ್ಚುತ್ತಿದೆ.

ಜತೆಗೆ ಸಾವುಗಳೂ ಸಂಭವಿಸುತ್ತಿವೆ.ಮಧ್ಯ ಕರ್ನಾಟಕದಲ್ಲಿ ಇನ್ನೂ ಅಷ್ಟು ಪ್ರಕರಣ ಇಲ್ಲ.ಮೊದಲೇ ನಮಗೆ ಸೂಚನೆ ಸಿಕ್ಕಿದೆ. ಹಾಗಾಗಿ ನಾವೆಲ್ಲಎಚ್ಚೆತ್ತುಕೊಳ್ಳಬೇಕು. ಕೇವಲ ವ್ಯಾಪಾರ ವಹಿವಾಟು,ಕೆಲಸದ ಸ್ಥಳಗಳಲ್ಲಿ ಮಾತ್ರವಲ್ಲ ಮನೆಗಳಲ್ಲೂಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿಅನುಸರಿಸಬೇಕು ಎಂದು ಮನವಿ ಮಾಡಿದರು.ಏ. 1 ರಿಂದ 45 ವರ್ಷ ತುಂಬಿದವರೆಲ್ಲಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು. ಹಳೇದಾವಣಗೆರೆ ಭಾಗದಲ್ಲೇ ಹೆಚ್ಚು ಪ್ರಕರಣಗಳುಇತ್ತು. ಜನರೇ ಲಸಿಕೆಗೆ ಮುಂದಾಗುತ್ತಿಲ್ಲ. ಅಲ್ಲಿನಸ್ಥಳೀಯ ನಾಯಕರು ಲಸಿಕೆ ಪಡೆಯಲು ಜನರಮನವೊಲಿಸಿಬೇಕು ಎಂದರು. ವಿವಿಧ ಇಲಾಖೆಗಳಅಧಿಕಾರಿಗಳು, ಕಲ್ಯಾಣ ಮಂಟಪ, ಅಂಗಡಿಮಾಲೀಕರು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next