Advertisement

ಕಬ್ಬಿನ ಬಾಕಿ ನೀಡದಿದ್ದರೆ ಕಠಿಣ ಕ್ರಮ: ಡಿಸಿ

10:48 AM Jun 02, 2018 | Team Udayavani |

ಕಲಬುರಗಿ: ಕಬ್ಬು ಬೆಳೆಗಾರರ ಬಾಕಿ ಉಳಿಸಿಕೊಂಡಿರುವುದನ್ನು ಜೂನ್‌ 15ರೊಳಗೆ ಪಾವತಿಸದಿದ್ದರೆ ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಎಚ್ಚರಿಕೆ ನೀಡಿದರು.

Advertisement

ಶುಕ್ರವಾರ ರೈತ ಮುಖಂಡರ ಹಾಗೂ ರೇಣುಕಾ ಶುಗರ್ಸ್‌, ಉಗಾರ ಶುಗರ್ಸ್‌, ಎನ್‌.ಎಸ್‌.ಎಲ್‌ ಹಾಗೂ ಕೋರ್‌ ಗ್ರೀನ್‌ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆ ನಡೆಸಿದ ಅವರು, ಹಲವಾರು ಬಾರಿ ಈ ಕುರಿತು ಎಚ್ಚರಿಕೆ ನೀಡಲಾಗಿದೆ. ಇನ್ಮುಂದೆ ಕ್ರಮ ಜಾರಿಯಾಗುತ್ತದೆ ಎಂದರು.

ರೈತರ ಬೆಳೆ ಸಾಲ ಮನ್ನಾ ಕುರಿತು ರಾಷ್ಟ್ರೀಕೃತ ಬ್ಯಾಂಕ್‌ ಗಳು, ಸಹಕಾರಿ ಬ್ಯಾಂಕ್‌ಗಳಿಗೆ ಅನ್ವಯವಾಗುವ ಎಲ್ಲ ಸವಲತ್ತುಗಳನ್ನು ಎಚ್‌ಡಿಎಫ್‌ಸಿ, ಆಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಹಾಗೂ ಇತರ ವಾಣಿಜ್ಯ ಬ್ಯಾಂಕ್‌ಗಳಿಗೂ ಅನ್ವಯವಾಗುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರೈತ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪುರ, ರಾಜ್ಯ ಕಾರ್ಯದರ್ಶಿ ದತ್ತಾತ್ರೇಯ ಕುಲಕರ್ಣಿ, ಮುಖಂಡರಾದ ಶರಣಕುಮಾರ ಬಿಲ್ಲಾಡ, ರಮೇಶ ಹೂಗಾರ, ಶಾಂತವೀರಪ್ಪ ಕಲಬುರಗಿ, ನಾಗೇಂದ್ರರಾವ ದೇಶಮುಖ, ಶಾಂತವೀರ ಪಾಟೀಲ ಮುಂತಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next