ಹೊಸದಿಲ್ಲಿ: ಮತದಾರರು ನೀಡುವ ಆಧಾರ್ ಮಾಹಿತಿ ಸೋರಿಕೆಯಾದರೆ ಕಠಿನ ಕ್ರಮ ನಿಶ್ಚಿತ ಎಂದು ಅಧಿಕಾರಿ ಗಳಿಗೆ ಚುನಾವಣ ಆಯೋಗ ತೀಕ್ಷ್ಣ ಎಚ್ಚರಿಕೆ ನೀಡಿದೆ. ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಲು ಅವಕಾಶ ಕೊಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ವಿಚಾರವಾಗಿ ಆಯೋಗ ಜು. 4ರಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿ
ಗಳಿಗೆ ಸೂಚನೆ ಪತ್ರ ಕಳುಹಿಸಿದೆ. ಚುನಾವಣ ಗುರುತಿನ ಪತ್ರಕ್ಕೆ ಆಧಾರ್ ಲಿಂಕ್ ಮಾಡುವುದು ಮತದಾರರ ಆಯ್ಕೆ. ಅದಕ್ಕೆ ಕ್ಲಸ್ಟರ್ ಮಟ್ಟಗಳಲ್ಲಿ ಅಧಿಕಾರಿಗಳು ಕ್ಯಾಂಪ್ ನಡೆಸಬಹುದು. ಹೊಸದಾಗಿ ಪರಿಚಯಿಸ ಲಾಗಿರುವ ಫಾರ್ಮ್-6ಬಿ ಬಳಸಿ ಆಧಾರ್ ಲಿಂಕ್ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ಆಧಾರ್ ಮಾಹಿತಿ ಸೋರಿಕೆ ಯಾಗುವಂತಿಲ್ಲ ಎಂದು ತಿಳಿಸಲಾಗಿದೆ.
ಆಧಾರ್ ಸಂಖ್ಯೆ ಪಡೆಯುವುದು ಮತ ದಾರರ ಪಟ್ಟಿಯ ದಾಖಲೆಗಳನ್ನು ದೃಢಪಡಿಸಿ ಕೊಳ್ಳಲು ಮತ್ತು ಉತ್ತಮ ಚುನಾವಣ ಸೇವೆ ನೀಡುವುದಕ್ಕೆ ಮಾತ್ರ ಎಂಬುದನ್ನು ಮತದಾರರಿಗೆ ಸ್ಪಷ್ಟಪಡಿಸಬೇಕು ಎಂದು ಆಯೋಗ ತಿಳಿಸಿದೆ.
ಒಂದು ವೇಳೆ ಮತಪಟ್ಟಿ ಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವಂತಹ ಸಮಯ ಬಂದರೆ ಆಗ ಆಧಾರ್ ಸಂಖ್ಯೆ ಕಾಣದಂತೆ ಮಾಡಿಯೇ ಬಹಿರಂಗ ಪಡಿಸಬೇಕು. ಅರ್ಜಿಗಳನ್ನು ಸಂಗ್ರಹಿಸಿಡು ವಾಗಲೂ ಆಧಾರ್ ಸಂಖ್ಯೆಯ ಮೊದಲ 8 ಅಂಕಿಗಳು ಕಾಣದಂತೆ ಮಾಡಬೇಕು. ಆ ರೀತಿಯ ಅರ್ಜಿಗಳನ್ನು ಡಿಜಿಟಲೈಸ್ ಮಾಡಿದ ಅನಂತರ ಚುನಾವಣ ಅಧಿಕಾರಿಗಳ ವಶದಲ್ಲಿ ಡಬಲ್ ಲಾಕ್ ಮಾಡಿ ಇರಿಸಬೇಕು. ಕಂಪ್ಯೂಟರ್ಗಳಲ್ಲೂ ಆಧಾರ್ ಸಂಖ್ಯೆಯನ್ನು ಚುನಾವಣ ಆಯೋಗದಿಂದ ಪರವಾನಗಿ ಪಡೆದಿರುವ “ಆಧಾರ್ ವಾಲ್ಟ್’ನಲ್ಲಿಯೇ ಸಂಗ್ರ ಹಿಸಿಡಬೇಕೆಂದು ಸೂಚಿಸಲಾಗಿದೆ.
Related Articles