Advertisement
“ಚೈತ್ರಾ, ನನ್ನ ಮನೆಯ ಗೃಹಪ್ರವೇಶಕ್ಕೆ ನೀನು ಬರುವುದಿಲ್ಲ ಎಂದರೆ ಹೇಗಾಗುತ್ತದೆ! ಅದು ನನಗೆ ಬಹಳ ಪ್ರಮುಖ ದಿನ. ನೀನು ಬರಲೇಬೇಕು’ ಮಾಲತಿ ಒತ್ತಾಯಿಸಿದಳು. ಆಗ ಚೈತ್ರಾ ಗಳಗಳನೆ ಅಳಲು ಪ್ರಾರಂಭಿಸಿದಳು. “ನನಗೆ ಬರಲು ಸಾಧ್ಯವೇ ಇಲ್ಲ. ಅದು ನಿನಗೆ ಅರ್ಥವಾಗುವುದಿಲ್ಲ. ಯಾವುದೇ ಸಮಾರಂಭಕ್ಕೆ ಹೋಗುವುದು ಎಂದರೆ ನನಗೆ ಹೆದರಿಕೆಯಾಗುತ್ತದೆ.
Related Articles
Advertisement
ಯುರೋಗೈನೆಕಾಲಜಿಸ್ಟ್ ಎಂದರೆ ಮಹಿಳೆಯರ ಮೂತ್ರ, ಮೂತ್ರಾಂಗ ಸಂಬಂಧಿ ಸಮಸ್ಯೆಗಳ ತಜ್ಞರು ಎಂದರ್ಥ. ಮೂತ್ರದ್ವಾರದ ಪೆಲ್ವಿಕ್ ಲಿಗಮೆಂಟ್‌ಗಳನ್ನು ವಿಸ್ತರಿಸುವ, ಕೆಲವೊಮ್ಮೆ ಅಲ್ಲಿ ಗಾಯಕ್ಕೆ ಕಾರಣವಾಗುವ ಹೆರಿಗೆ ಒತ್ತಡ ನಿಯಂತ್ರಣ ರಾಹಿತ್ಯಕ್ಕೆ ಪ್ರಧಾನ ಕಾರಣಗಳಲ್ಲೊಂದು. ಶಿಶು ಜನನ ಸಂಬಂಧಿ ವಿಚಾರಗಳನ್ನು ನಿಭಾಯಿಸುವಲ್ಲಿ ಈ ವೈದ್ಯರು ಪರಿಣಿತರಾಗಿರುತ್ತಾರೆ. ಹೀಗಾಗಿ ಆಕೆ ಯುರೋಗೈನೆಕಾಲಜಿಸ್ಟ್ ಸಹಾಯ ಪಡೆಯಲು ನಿರ್ಧರಿಸಿದಳು.
ಮುಂದಿನ ದೊಡ್ಡ ಸವಾಲು ಇದ್ದದ್ದು ಆಸ್ಪತ್ರೆಗೆ ಹೋಗಲು ಚೈತ್ರಾಳ ಮನವೊಲಿಸುವುದು; ಜತೆಗೆ ಆಕೆಯ ಪತಿಗೆ ಮತ್ತು ಅತ್ತೆಗೆ ವಿಷಯ ತಿಳಿಸುವುದು ಕೂಡ ಸಮಸ್ಯೆಯೇ ಆಗಿತ್ತು. ಆದರೆ ಮಾಲತಿ ಎಂಥದ್ದೇ ಸವಾಲು ಇದ್ದರೂ ಅದನ್ನು ಎದುರಿಸಿ ಚೈತ್ರಾಗೆ ಸಹಾಯ ಮಾಡಲು ನಿರ್ಧರಿಸಿದ್ದಳು. ಹೀಗಾಗಿ ಗೆಳತಿಯನ್ನು ವೈದ್ಯರಲ್ಲಿಗೆ ಕರೆದೊಯ್ಯುವುದು ಆಕೆಗೆ ಸಾಧ್ಯವಾಯಿತು.
ವೈದ್ಯರು ಚೈತ್ರಾಳ ಸಮಸ್ಯೆ ಹೇಗೆ ಆರಂಭವಾಯಿತು, ಹೇಗೆ ಬೆಳೆಯಿತು, ಅದರ ತೀವ್ರತೆ ಮತ್ತಿತರ ವಿವರಗಳನ್ನು ಸಂಗ್ರಹಿಸಿದರು. ಚೈತ್ರಾ ಸ್ಟ್ರೆಸ್ ಯೂರಿನರಿ ಇನ್‌ಕಂಟಿನೆನ್ಸ್ (ಎಸ್‌ಯುಐ) ಅಥವಾ ಒತ್ತಡದಿಂದ ಮೂತ್ರ ನಿಯಂತ್ರಣರಾಹಿತ್ಯ ಸಮಸ್ಯೆಯಿಂದ ಬಳಲುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಕೆಲವು ಪರೀಕ್ಷೆಗಳನ್ನೂ ನಡೆಸಿದರು
ಇದೊಂದು ಸಾಮಾನ್ಯ ಸಮಸ್ಯೆ, ಹೆರಿಗೆಯಾಗಿರುವ ಎಲ್ಲ ಹೆಂಗಸರಿಗೂ ಈ ಸಮಸ್ಯೆ ಉಂಟಾಗುತ್ತಿದ್ದು, ಕಾಲಕ್ರಮೇಣ ಸರಿಹೋಗುತ್ತದೆ ಎಂಬುದಾಗಿ ಗೆಳತಿಯರು ಅಥವಾ ಕುಟುಂಬದ ಇತರ ಸದಸ್ಯ ಮಹಿಳೆಯರು ಹೇಳಿರುವುದು ಒಂದು ಕಾರಣ. ವೈದ್ಯರು ಅಥವಾ ಇನ್ನೊಬ್ಬರಲ್ಲಿ ಹೇಳಿಕೊಳ್ಳಲು ಮುಜುಗರ ಇನ್ನೊಂದು ಕಾರಣ. ಈ ಎಲ್ಲ ಹೇಳಿಕೆಗಳು, ಕಾರಣಗಳು ಸಂಪೂರ್ಣ ತಪ್ಪು. ಪರಿಹಾರ ಪಡೆಯದೆ ನಿರ್ಲಕ್ಷಿಸಿದರೆ ಈ ಸಮಸ್ಯೆ ಕಡಿಮೆಯಾಗುವುದಿಲ್ಲ; ಬದಲಾಗಿ ಉಲ್ಬಣಿಸುತ್ತದೆ. ಋತುಚಕ್ರ ನಿಂತ ಬಳಿಕ ಅದು ಇನ್ನಷ್ಟು ತೀವ್ರವಾಗುತ್ತದೆ. ಈ ಸಮಸ್ಯೆಯಿಂದ ಪೀಡಿತರಾಗಿರುವ ಇನ್ನೊಂದು ವರ್ಗದ ಮಹಿಳೆಯರಿಗೆ ಇದು ಒಂದು ಆರೋಗ್ಯ ಸಮಸ್ಯೆ ಎಂಬುದು ತಿಳಿದಿರುತ್ತದೆ; ಆದರೆ ಇದಕ್ಕೆ ವೈದ್ಯಕೀಯ ಚಿಕಿತ್ಸೆ ಇದೆ ಎಂಬುದು ಗೊತ್ತಿರುವುದಿಲ್ಲ. ಇನ್ನು ಕೆಲವರಿಗೆ ವೈದ್ಯರ ಬಳಿಗೆ ಹೋಗುವುದಕ್ಕೆ ಮುಜುಗರ ಅಡ್ಡಿಯಾಗುತ್ತದೆ.
ಈ ಸಮಸ್ಯೆಗೆ ಅನೇಕ ಪರಿಹಾರಗಳು ಲಭ್ಯವಿವೆ. ಸಮಸ್ಯೆಯ ತೀವ್ರತೆ ಮತ್ತು ದೈನಂದಿನ ಗುಣಮಟ್ಟದ ಜೀವನಕ್ಕೆ ಇದು ಎಷ್ಟು ಪ್ರಮಾಣದ ಅಡ್ಡಿಯನ್ನು ಉಂಟು ಮಾಡುತ್ತದೆ ಎಂಬುದನ್ನು ಆಧರಿಸಿ ನಿರ್ದಿಷ್ಟ ಚಿಕಿತ್ಸಾ ಆಯ್ಕೆಗಳನ್ನು ನೀಡಲಾಗುತ್ತದೆ. ಸಣ್ಣ ಪ್ರಮಾಣದ, ಯಾವಾಗಾದರೊಮ್ಮೆ ಉಂಟಾಗುವ ಮೂತ್ರ ಸೋರುವಿಕೆಯನ್ನು ಪೆಲ್ವಿಕ್ ಪ್ರದೇಶದ ವ್ಯಾಯಾಮಗಳ ಮೂಲಕ ಚಿಕಿತ್ಸೆಗೆ ಒಳಪಡಿಸಬಹುದು. ಪರಿಣಾಮಕಾರಿ ಫಲಿತಾಂಶಕ್ಕಾಗಿ ಈ ವ್ಯಾಯಾಮಗಳನ್ನು ಗುಣಮಟ್ಟದ ವಿಧಾನದಲ್ಲಿ ಕಲಿತು, ಅನುಸ ರಿಸಬೇಕಾಗುತ್ತದೆ. ಕೆಲವು ರೋಗಿಗಳಿಗೆ ಬಾಯಿಯ ಮೂಲಕ ಸೇವಿಸುವ ಔಷಧಗಳು ಮತ್ತು ಮುಲಾಮುಗಳನ್ನು ನೀಡಲಾಗುತ್ತದೆ. ಶಸ್ತ್ರಚಿಕಿತ್ಸಾ ವಿಧಾನವೂ ಇದೆ. ಆದರೆ ಶಸ್ತ್ರಚಿಕಿತ್ಸೆಯನ್ನು ಎಚ್ಚರಿಕೆಯ ಮತ್ತು ಕೂಲಂಕಷ ತಪಾಸಣೆಯ ಬಳಿಕ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಸಣ್ಣ ಮಟ್ಟದ್ದಾಗಿದ್ದರೂ ಕನಿಷ್ಠ 3ದಿನ ಆಸ್ಪತ್ರೆ ಯಲ್ಲಿ ದಾಖಲಾಗಿರಬೇಕಾಗುತ್ತದೆ. ಮೊದಲ ದಿನ ಅರಿವಳಿಕೆ ಮತ್ತು ಶಸ್ತ್ರಚಿಕಿತ್ಸೆಗೆ ರೋಗಿ ಸಿದ್ಧಳಿದ್ದಾಳೆಯೇ ಎಂಬುದನ್ನು ತಪಾಸಿ ಸಲಾಗುತ್ತದೆ.
ಎರಡನೆಯ ದಿನ ಅರಿವಳಿಕೆ ನೀಡಿ ಶಸ್ತ್ರಕ್ರಿಯೆಯನ್ನು ನಡೆಸಲಾಗುತ್ತದೆ, ಇದಕ್ಕೆ ಸುಮಾರು 15-30 ನಿಮಿಷ ತಗಲುತ್ತದೆ. ಶಸ್ತ್ರಚಿಕಿತ್ಸೆಯನ್ನು ಅರಿವಳಿಕೆ ನೀಡಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ನಡೆಸುವುದರಿಂದ ರೋಗಿಗೆ ನೋವು ಅನುಭವಕ್ಕೆ ಬರುವುದಿಲ್ಲ. ಮಾರನೆಯ ದಿನ ರೋಗಿ ಬಿಡುಗಡೆಗೊಳ್ಳಲು ಸಿದ್ಧಳಾಗಿರುತ್ತಾಳೆ ಹಾಗೂ ಆಕೆ ದೈನಿಕ ಕೆಲಸಗಳಲ್ಲಿ ತೊಡಗಬಹುದಾಗಿದೆ.
ಒತ್ತಡದಿಂದ ಮೂತ್ರ ನಿಯಂತ್ರಣ ರಾಹಿತ್ಯವು ಚಿಕಿತ್ಸೆಗೆ ಒಳಪಡಿಸಿ ಗುಣಪಡಿಸಬಹುದಾದ ಒಂದು ಆರೋಗ್ಯ ಸಮಸ್ಯೆ ಎಂಬುದನ್ನು ಚೈತ್ರಾ ಅರಿತುಕೊಂಡಳು. ಸ್ವತಃ ಚಿಕಿತ್ಸೆಯನ್ನು ಪಡೆದುಕೊಂಡು ಸಮಸ್ಯೆಯಿಂದ ಮುಕ್ತಳಾದ ಆಕೆ ಈಗ ಖುಷಿ ಮತ್ತು ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿದ್ದಾಳೆ. ಮಾಲತಿಯಂತಹ ಗೆಳತಿಯಿರುವುದು ಆಕೆಯ ಸೌಭಾಗ್ಯ.ಇಂತಹ ಮೂತ್ರ ಸ್ರಾವದ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಎಚ್ಚೆತು ¤ ಕೊಳ್ಳಬೇಕು. ನಿಮ್ಮ ಮಾಲತಿ ನೀವೇ ಆಗಿ; ತಜ್ಞ ವೈದ್ಯರಿಂದ ಸಹಾಯ ಪಡೆದುಕೊಂಡು ಸಮಸ್ಯೆಯಿಂದ ಹೊರಬನ್ನಿ.
ಒತ್ತಡದಿಂದ ಮೂತ್ರ ನಿಯಂತ್ರಣ ರಾಹಿತ್ಯ ಎಂದರೆ ವ್ಯಾಯಾಮ, ಕೆಮ್ಮುವುದು, ಸೀನುವುದು, ನಗುವುದು ಅಥವಾ ಭಾರ ಎತ್ತುವಂತಹ ಸಂದರ್ಭಗಳಲ್ಲಿ ಅನಿಯಂತ್ರಿತವಾಗಿ ಮೂತ್ರ ಸ್ರಾವವಾಗುವುದು. ಸ್ಥೂಲವಾಗಿ, ಮಗುವಿಗೆ ಜನ್ಮ ನೀಡಿರುವ ಪ್ರತೀ ಮೂರರಲ್ಲಿ ಓರ್ವ ಮಹಿಳೆ ಈ ಸಮಸ್ಯೆಗೆ ತುತ್ತಾಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ. ಆದರೂ ವಿವಿಧ ಕಾರಣಗಳಿಂದಾಗಿ ಈ ಸಮಸ್ಯೆಗೆ ತುತ್ತಾಗಿರುವ ಮಹಿಳೆಯರು ಪರಿಹಾರಕ್ಕಾಗಿ ವೈದ್ಯರ ನೆರವನ್ನು ಪಡೆಯಲು ಮುಂದಾಗುವುದಿಲ್ಲ.
– ಡಾ| ದೀಕ್ಷಾ ಪಾಂಡೆ, ಡಾ| ಶ್ರೀಪಾದ ಹೆಬ್ಟಾರ್
ಒಬಿಜಿವೈಎನ್ ವಿಭಾಗ, ಕೆಎಂಸಿ ಮಣಿಪಾಲ.