Advertisement

ಪಕ್ಷ ಸಂಘಟನೆಗೆ ಸದೃಢರಾಗಿ : ಸೊರಕೆ

03:45 AM Jul 05, 2017 | |

ಕಾಪು: ರಾಜ್ಯ ಸರಕಾರ ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಇತೀ¤ಚೆಗೆ ರೈತರ ಸಾಲ ಮನ್ನಾ ಕಾರ್ಯಕ್ರಮದಿಂದ ರಾಜ್ಯದ 22 ಲಕ್ಷ ರೈತರಿಗೆ 8,165 ಕೋ. ರೂ. ಮನ್ನಾ ಮಾಡಿದೆ. ಆದರೆ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಮಾಡಿದ ಸಾಲವನ್ನು ಮನ್ನಾ ಮಾಡಲಿ, ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಇದನ್ನು ಕೂಡಲೇ ಮಾಡಿಸುವಂತೆ ಬಿಜೆಪಿ ನಾಯಕರಿಗೆ ಮಾಜಿ ಸಚಿವ / ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಸವಾಲು ಎಸೆದರು.
ಜು. 2ರಂದು ಕಾಪು ರಾಜೀವ ಭವನದಲ್ಲಿ ನಡೆದ ಕಾಪು ಬ್ಲಾಕ್‌ ಕಾಂಗ್ರೆಸ್‌ ಸಮಿತಿ (ದಕ್ಷಿಣ)ಇದರ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಬಿಜೆಪಿಗರು ಯಾವುದೇ ಕೆಲಸಗಳನ್ನು ಮಾಡದೇ ಸಣ್ಣ ಪುಟ್ಟ ವಿಷಯಗಳಿಗೆ ಪ್ರತಿಭಟನೆ ಮಾಡಿ ಪುಕ್ಕಟೆ ಪ್ರಚಾರದಿಂದ ಪಕ್ಷ ಕಟ್ಟುತ್ತಿದ್ದಾರೆ. ಕಾಂಗ್ರೆಸಿಗರು ಸರಕಾರ ಮಾಡಿದ ಜನಹಿತ ಕಾರ್ಯಗಳನ್ನು ಜನಮನಕ್ಕೆ ಮುಟ್ಟಿಸಿ ಪಕ್ಷ ಕಟೋrಣ, ಅದಕ್ಕಾಗಿ ಕಾರ್ಯಕರ್ತರು ಕೂಡಲೇ ಸಜ್ಜಾಗಬೇಕು ಎಂದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಕಾಪು ದಿವಾಕರ್‌ ಶೆಟ್ಟಿ ಮುಂಬರುವ ಚುನಾವಣೆ ತಯಾರಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಜಿ. ಪಂ. ಸದಸ್ಯ ವಿಲ್ಸನ್‌ ರೊಡ್ರಿಗಸ್‌, ಎಪಿಎಂಸಿ ಸದಸ್ಯ ನವೀನ್‌ಚಂದ್ರ ಸುವರ್ಣ, ಪ‌ಕ್ಷದ ಮುಖಂಡರಾದ ದೇವಿಪ್ರಸಾದ್‌ ಶೆಟ್ಟಿ, ಮನ್ನಾರ್‌ ಇಬ್ರಾಹಿಂ, ಶೀÅಕರ ಸುವರ್ಣ, ವಿಶ್ವಾಸ್‌ ಅಮೀನ್‌, ಗೋಪಾಲ ಪೂಜಾರಿ, ದೀಪಕ್‌ ಕುಮಾರ್‌ ಎರ್ಮಾಳ್‌, ಎಚ್‌. ಅಬ್ದುಲ್ಲಾ, ಕೇಶವ ಸಾಲ್ಯಾನ್‌, ಉಸ್ಮಾನ್‌ ಕಾಪು, ನವೀನ್‌ ಶೆಟ್ಟಿ, ಹರೀಶ್‌ ಶೆಟ್ಟಿ ಪಾಂಗಾಳ, ದೇವಪುತ್ರನ್‌ ಕೋಟ್ಯಾನ್‌, ಚುನಾಯಿತ ಜನಪ್ರತಿನಿಧಿಗಳು, ಗ್ರಾಮೀಣ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ, ಕಾಂಗ್ರೆಸ್‌ ಕಾರ್ಯಕರ್ತರು, ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಅಬ್ದುಲ್‌ ಅಜೀಜ್‌ ಹೆಜ್ಮಾಡಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next