Advertisement

ಬೀದಿಬದಿ ವರ್ತಕರು ಸಾಲ ಸೌಲಭ್ಯ ಬಳಸಿಕೊಳ್ಳಿ

08:04 PM Aug 07, 2022 | Team Udayavani |

ರಾಯಚೂರು: ಕೇಂದ್ರ ಸರ್ಕಾರ ಬೀದಿ ಬದಿಯ ವ್ಯಾಪಾರಿಗಳು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಾಲ ಸೌಲಭ್ಯ ಕಲ್ಪಿಸಿದ್ದು, ಇದನ್ನು ವ್ಯಾಪಾರಿಗಳು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಬಾಬು ಬಳಗಾನೂರು ತಿಳಿಸಿದರು.

Advertisement

ನಗರದ ನಗರಸಭೆಯಲ್ಲಿ ಶನಿವಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಕೌಶಲ ಮಿಶನ್‌ ಹಾಗೂ ಡೆ ನಲ್ಮ್ ಸಹಯೋಗದಲ್ಲಿ ಸ್ವ ನಿಧಿ-ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಾಲ ಮೇಳದಲ್ಲಿ ಮಾತನಾಡಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ಪ್ರೋತ್ಸಾಹಧನ ಮಾದರಿಯಲ್ಲಿ 10 ಸಾವಿರ ರೂ. ಬಡ್ಡಿ ರಹಿತ ಸಾಲ ಸೌಲಭ್ಯ ನೀಡುತ್ತಿದೆ. ಅದನ್ನು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಿದರೆ, 20 ಸಾವಿರ ರೂ. ಸಾಲ ಸೌಲಭ್ಯ ಸಿಗಲಿದೆ. ಇದೇ ರೀತಿ ಮರುಪಾವತಿ ಮಾಡಿದಂತೆಲ್ಲ ಅದಕ್ಕಿಂತ ಹೆಚ್ಚು ಸಾಲ ಸಿಗಲಿದೆ. ವ್ಯಾಪಾರಿಗಳು ಈ ಹಣವನ್ನು ಬಂಡವಾಳ ಮಾಡಿಕೊಂಡು ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳಬೇಕು ಎಂದರು.

ಕೆಲ ಬ್ಯಾಂಕ್‌ ವ್ಯವಸ್ಥಾಪಕರು ವ್ಯಾಪಾರಿಗಳಿಗೆ ಸರಿಯಾಗಿ ಸಾಲ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಯಾವುದೇ ಕಾರಣಕ್ಕೂ ಆ ರೀತಿ ಮಾಡುವುದು ಸರಿಯಲ್ಲ. ಅದರ ಜತೆಗೆ ಡಿಜಿಟಲ್‌ ಇಂಡಿಯಾ ಬಳಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವರ್ತಕರಿಗೆ ಮಾರ್ಗದರ್ಶನ ನೀಡಬೇಕು ಎಂದರು.

ಕಳೆದ ಸಾಲಿನಲ್ಲಿ 2300 ಜನರಿಗೆ ಸಾಲ ಸೌಲಭ್ಯ ನೀಡಲಾಗಿತ್ತು. ಅದರಲ್ಲಿ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದವರಿಗೆ 130 ಜನರಿಗೆ ಹೆಚ್ಚುವರಿ ಸಾಲ ಸೌಲಭ್ಯದ ಜತೆಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಬಾರಿ ಒಂದು ಸಾವಿರ ಜನರಿಗೆ ಪ್ರಮಾಣ ಪತ್ರ ಗುರಿ ಇರುವುದಾಗಿ ಅಧಿಕಾರಿಗಳು ತಿಳಿಸಿದರು.

Advertisement

ಸಭೆಯಲ್ಲಿ ನೆರೆದ ವ್ಯಾಪಾರಿಗಳು ಬ್ಯಾಂಕ್‌ ಗಳಿಂದ ತಮಗಾಗುತ್ತಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ವಿವರಿಸಿದರು. ಲಲಿತಾ ಕಡಗೋಲು, ನರಸಮ್ಮ ಮಾಡಗಿರಿ, ಸುರೇಶ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next