Advertisement
ಸಮಸ್ಯೆಗಳ ಹೆದ್ದಾರಿ:
Related Articles
Advertisement
ಸಭೆಗೆ ಗೈರು:
ನಗರಕ್ಕೆ ಪ್ರವೇಶಕ್ಕೆ ಅವಕಾಶ ನೀಡುವ ಸಲುವಾಗಿ ಜಿಲ್ಲಾಧಿಕಾರಿಗಳು ಸಹಾಯಕ ಕಮಿಷನರ್ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿ ಸಭೆಗೆ ಈವರೆಗೂ ಹೆದ್ದಾರಿ ಪ್ರಾಧಿಕಾರದಿಂದ ಯೋಜನಾಧಿಕಾರಿ ಹಾಜರಾಗಲೇ ಇಲ್ಲ. ತಾಂತ್ರಿಕ ಕಾರಣ ನೀಡಿ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ ವಿನಾ ಬದಲಿ ಮಾರ್ಗ ಹುಡುಕುವ ಯತ್ನವನ್ನೇ ಮಾಡಿಲ್ಲ. ಕುಂದಾಪುರ ನಗರ ಎಂಬ ಫಲಕವನ್ನೂ ಅಳವಡಿಸಿಲ್ಲ. ಅಷ್ಟೂ ಅಸಡ್ಡೆ ಮಾಡಲಾಗಿದೆ. ಹಿಂದೊಮ್ಮೆ ಅಂಕದಕಟ್ಟೆ ಬಳಿ ಕುಂದಾಪುರ ಎಂಬ ಫಲಕವೂ ಇತ್ತು. ಅದಾದ ಬಳಿಕ ಈಗ ಹಂಗಳೂರಿನಲ್ಲಿದೆ. ಫ್ಲೈಓವರ್ ಸಮಾಚಾರ ಎಂದರೆ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ ಬೇಡದ ವಿಷಯವಾಗಿದೆ.
ಮನವಿ:
ಕುಂದಾಪುರದ ನಾಗರಿಕರು ನೂರಾರು ಮಂದಿಯ ಸಹಿ ಸಂಗ್ರಹಿಸಿ ಹೆದ್ದಾರಿ ಅವಸ್ಥೆ ಸರಿಪಡಿಸುವಂತೆ ಮನವಿ ನೀಡಿದ್ದಾರೆ. ಮನವಿಯ ಪ್ರತಿಯನ್ನು ನವಯುಗ ಸಂಸ್ಥೆಗೂ ನೀಡಿದ್ದು ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿದ್ದಾರೆ. ವಿನಾಯಕ ಥಿಯೇಟರ್‌ನಿಂದ ಕೆಎಸ್‌ಆರ್‌ಟಿಸಿವರೆಗೆ ಸರ್ವಿಸ್ ರಸ್ತೆ ಹದಗೆಟ್ಟಿದೆ. ಹೆದ್ದಾರಿಯಲ್ಲಿ ದೀಪಗಳಿಲ್ಲ. ಫ್ಲೈಓವರ್ ಸಮೀಪ ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡಗಳಿವೆ. ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ಇದು ತೊಂದರೆಯಾಗುತ್ತಿದೆ. ಆದ್ದರಿಂದ ಡಾಮರು ಹಾಕಿ ಹೊಂಡ ಮುಚ್ಚಿಸಿ ದೀಪ ವ್ಯವಸ್ಥೆ ಮಾಡಬೇಕೆಂದು ವಿವರಿಸಲಾಗಿದೆ.
ದಂಡ :
ನವಯುಗ ಸಂಸ್ಥೆ ಕಾಮಗಾರಿ ಸಕಾಲದಲ್ಲಿ ಪೂರೈಸದ ಕಾರಣ ಪ್ರಾಧಿಕಾರ ಸಂಸ್ಥೆಗೆ ದಂಡ ವಿಧಿಸಿದೆ. ಆದರೆ ದಂಡ ಕಟ್ಟಿರುವ ಸಂಸ್ಥೆ ಕಾಮಗಾರಿಯನ್ನಂತೂ ಮಾಡಿಲ್ಲ. ಟೋಲ್ ವಸೂಲಿ ನಡೆಯುತ್ತಿದೆ. ಇದಕ್ಕೂ ಸಿದ್ಧ ಉತ್ತರ ದೊರೆತಿದ್ದು, ನಗರ ವ್ಯಾಪ್ತಿಯ 2.5 ಕಿ.ಮೀ. ರಸ್ತೆಗೆ ಸುಂಕ ಪಡೆಯುತ್ತಿಲ್ಲ ಎಂದು. ಫ್ಲೈಓವರ್ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟ ಕ್ಷಣದಿಂದ ಮತ್ತೆ ಸುಂಕ ಏರಿಕೆಯಾಗಲಿದೆ ಎನ್ನುವುದಕ್ಕೆ ಇದು ಸೂಚನೆ.
ಕೇಸು :
ಬೆಂಗಳೂರಿನಲ್ಲಿ ಅಸಮರ್ಪಕ ಹೆದ್ದಾರಿ ಕಾಮಗಾರಿಯಿಂದ ಅಪಘಾತ ಸಂಭವಿಸಿದರೆ ಗುತ್ತಿಗೆದಾರ ಸಂಸ್ಥೆ ಮೇಲೆ ಕೇಸು ದಾಖಲಿಸುವುದಾಗಿ ಅಲ್ಲಿನ ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಕುಂದಾಪುರ ಫ್ಲೈಓವರ್‌ನ ಮೇಲೆ ನಡೆದ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತಗಳೂ ಕೆಲವು ನಡೆದಿವೆ. ಗುತ್ತಿಗೆದಾರರ ಮೇಲೆ ಕೇಸು ಮಾತ್ರ ಯಾರೂ ಹಾಕಿಲ್ಲ.
ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ನವಯುಗ ಕಂಪೆನಿಯವರಿಗೆ ಲಿಖೀತ ಮನವಿ ನೀಡಿದ್ದೇವೆ. ಎಪ್ರಿಲ್ ತಿಂಗಳಿನಿಂದ ಕಾಮಗಾರಿ ಸರಿಯಾಗಿ ನಡೆಸುತ್ತಾರೆ ಎಂದು ಕಾದು ಕಾದು ಸಾಕಾಯಿತು. ನಗರಕ್ಕೆ ಪ್ರವೇಶವನ್ನೂ ನೀಡಿಲ್ಲ, ಫ್ಲೈಓವರ್ ಕೆಳಗೆ ಪಾರ್ಕಿಂಗ್‌ಗೂ ಅವಕಾಶ ನೀಡಿಲ್ಲ. ಬೀದಿದೀಪಗಳನ್ನೂ ಅಳವಡಿಸಿಲ್ಲ. ಸರಕಾರದ ಅಂಕೆ ಇಲ್ಲದ ಸಂಸ್ಥೆಯಂತಿದೆ.–ಕೋಡಿ ಅಶೋಕ್ ಪೂಜಾರಿ ಸಾಮಾಜಿಕ ಕಾರ್ಯಕರ್ತರು