Advertisement

ಉದ್ಘಾಟನೆಯಾಗಿ 5 ತಿಂಗಳು ಕಳೆದರೂ ಉರಿಯದ ಬೀದಿ ದೀಪ

10:35 AM Jul 30, 2022 | Team Udayavani |

ಬಂಟ್ವಾಳ: ಬಿ.ಸಿ.ರೋಡ್‌- ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೊಂಡು 5 ತಿಂಗಳು ಕಳೆದರೂ ಕೂಡ ಬಿ.ಸಿ.ರೋಡ್‌- ಜಕ್ರಿಬೆಟ್ಟು ಚತುಷ್ಪಥ ಕಾಂಕ್ರೀಟ್‌ ಹೆದ್ದಾರಿಯ ಮಧ್ಯೆ ಅಳವಡಿಸಲಾಗಿರುವ ಸುಮಾರು 80 ಬೀದಿದೀಪಗಳಿಗೆ ಇನ್ನೂ ಕೂಡ ಉರಿಯುವ ಭಾಗ್ಯ ದೊರಕಿಲ್ಲ.

Advertisement

ಹೆದ್ದಾರಿಯ ಒಟ್ಟು 19.85 ಕಿ.ಮೀ. ಅಂತರದ ಹೆದ್ದಾರಿ ಅಭಿವೃದ್ಧಿ ಸಂದರ್ಭ 3.85 ಕಿ.ಮೀ.ಹೆದ್ದಾರಿಯನ್ನು ಜಕ್ರಿಬೆಟ್ಟು ತನಕ ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಲಾಗಿದೆ. ಮಧ್ಯಕ್ಕೆ ಡಿವೈಡರ್‌ ನಿರ್ಮಿಸಿ ಎರಡೂ ಬದಿ ತಲಾ 7 ಮೀ. ಅಗಲದ ಕಾಂಕ್ರೀಟ್‌ ರಸ್ತೆ ನಿರ್ಮಿಸಿ ಡಿವೈಡರ್‌ ಮಧ್ಯೆ ಈ ಬೀದಿದೀಪಗಳನ್ನು ಅಳವಡಿಸಲಾಗಿದೆ.

ಪ್ರಸ್ತುತ ಹೆದ್ದಾರಿ ಕಾಮಗಾರಿ ಪೂರ್ಣ ಗೊಂಡು ಇಷ್ಟು ಸಮಯ ವಾದರೂ ಬೀದಿ ದೀಪಗಳು ಯಾಕೆ ಉರಿಯುತ್ತಿಲ್ಲ ಎಂಬ ಪ್ರಶ್ನೆ ಸಾರ್ವ ಜನಿಕರನ್ನು ಕಾಡುತ್ತಿದ್ದು, ಇದರ ಜತೆಗೆ ಒಂದಷ್ಟು ಬಾಕಿ ಇರುವ ಕಾಮಗಾರಿಯನ್ನೂ ಪೂರ್ಣಗೊಳಿಸುವ ಕುರಿತು ಕ್ರಮಕೈಗೊಳ್ಳಬೇಕಿದೆ.

ವಿವಿಧ ಹೆದ್ದಾರಿ ಕಾಮಗಾರಿಗಳ ಶಿಲಾನ್ಯಾಸಕ್ಕಾಗಿ ಫೆ. 28ರಂದು ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಘಡ್ಕರಿ ಮಂಗಳೂರಿನಿಂದಲೇ ಬಿ.ಸಿ.ರೋಡ್‌- ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನೂ ಉದ್ಘಾಟಿಸಿದ್ದರು. ಆದರೆ ಆ ಸಂದರ್ಭದಲ್ಲಿ ಹೆದ್ದಾರಿಯ ಕಾಮಗಾರಿ ಕೂಡ ಪೂರ್ಣಗೊಂಡಿರಲಿಲ್ಲ.

ಈ ಹೆದ್ದಾರಿ ಕಾಮಗಾರಿ ಉದ್ಘಾಟನೆ ಗೊಂಡ ಬಳಿಕ ಅದರ ಮುಂದುವರಿದ ಕಾಮಗಾರಿಯೂ ನಿಧಾನಗತಿಯಲ್ಲಿತ್ತು. ಈಗಲೂ ಕೆಲವೊಂದು ಕಾಮಗಾರಿ ಬಾಕಿ ಇದ್ದು, ಅದರ ಭಾಗವಾಗಿ ಬೀದಿದೀಪಗಳು ಉರಿಯುತ್ತಿಲ್ಲ. ಜತೆಗೆ ಡಿವೈಡರ್‌ ಮಧ್ಯೆ ಅಳವಡಿಸಿರುವ ತಡೆಬೇಲಿಯ ಬಣ್ಣ ಬಳಿಯುವ ಕಾಮಗಾರಿ ಸೇರಿ ಕೆಲವೆಡೆ ತಡೆ ಬೇಲಿ ಅಳವಡಿಕೆಯೂ ಬಾಕಿಯಾಗಿದೆ.

Advertisement

ಸುಸಜ್ಜಿತ ಎಲ್‌ಇಡಿ ಲೈಟ್‌

ಬಿ.ಸಿ.ರೋಡ್‌-ಜಕ್ರಿಬೆಟ್ಟು ಹೆದ್ದಾರಿಯ ಡಿವೈಡರ್‌ ಮಧ್ಯೆ ಸುಮಾರು 80ಕ್ಕೂ ಅಧಿಕ ಬೀದಿದೀಪಗಳನ್ನು ಅಳವಡಿಸಲಾಗಿದ್ದು, ಒಂದೊಂದು ಕಂಬದಲ್ಲಿ ಹೆದ್ದಾರಿ ಎರಡೂ ಬದಿಗಳಿಗೂ ಕಾಣುವಂತೆ ಪ್ರತ್ಯೇಕ ಲೈಟ್‌ ಗಳಿವೆ. ಈ ಲೈಟ್‌ಗಳು ಗುಣಮಟ್ಟದ ಎಲ್‌ ಇಡಿ ಲೈಟ್‌ಗಳಾಗಿವೆ.

ಪ್ರಸ್ತುತ 79 ಬೀದಿ ದೀಪಗಳನ್ನು ಅಳ ವಡಿಸಲಾಗಿದ್ದು, ಬಂಟ್ವಾಳ ಬೈಪಾಸ್‌ ಜಂಕ್ಷನ್‌ ಹಾಗೂ ಭಂಡಾರಿಬೆಟ್ಟು ಜಂಕ್ಷನ್‌ ನಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲಾಗಿದೆ. ಜತೆಗೆ ಕಾಂಕ್ರೀಟ್‌ ಕಾಮಗಾರಿ ವಿಳಂಬ ವಾಗಿ ನಡೆದಿರುವ ಬಂಟ್ವಾಳ ಬೈಪಾಸ್‌, ಭಂಡಾರಿಬೆಟ್ಟು ಹಾಗೂ ಕಾಮಾಜೆ ಕ್ರಾಸ್‌ ಬಳಿ ಡಿವೈಡರ್‌ ಮಧ್ಯೆ ಬೀದಿದೀಪ ಅಳವಡಿಕೆಗೂ ಬಾಕಿಯಿದೆ.

ಸಂಪರ್ಕ ನೀಡಿ ಹಸ್ತಾಂತರ: ಬೀದಿದೀಪಗಳಿಗೆ ವಿದ್ಯುತ್‌ ಸಂಪರ್ಕ ನೀಡಿ ಪುರಸಭೆಗೆ ಹಸ್ತಾಂತರ ಮಾಡು ತ್ತೇವೆ. ಅಂದರೆ ಅದರ ನಿರ್ವಹಣೆ ಹಾಗೂ ವಿದ್ಯುತ್‌ ಬಿಲ್‌ ಪಾವತಿಗೆ ನಮ್ಮಲ್ಲಿ ಅವಕಾಶವಿಲ್ಲ. ಇದರ ಕುರಿತು ಪುರಸಭೆಗೆ ಪತ್ರವನ್ನೂ ಬರೆದಿದ್ದೇವೆ. –ಕೃಷ್ಣ ಕುಮಾರ್‌, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next