Advertisement

ಉರ್ವಸ್ಟೋರ್ ನಲ್ಲಿ  ಉರಿಯಿತು ಬೀದಿ ದೀಪ 

12:04 PM Aug 27, 2018 | |

ಮಹಾನಗರ: ನಗರದ ಉರ್ವಸ್ಟೋರ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವು ತಿಂಗಳಿನಿಂದ ಬೀದಿ ದೀಪ ಕೆಟ್ಟು ಹೋಗಿದ್ದು, ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು. ಇದೀಗ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಬೀದಿ ದೀಪಗಳ ದುರಸ್ತಿ ಕಾರ್ಯ ನಡೆಸಿದೆ.

Advertisement

ಉರ್ವಸ್ಟೋರ್‌ ಪ್ರದೇಶದಲ್ಲಿ ರಾತ್ರಿಯಾದರೆ ಬೀದಿ ದೀಪ ಉರಿಯುತ್ತಿಲ್ಲ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ‘ದುರಸ್ತಿಯಾಗದ ಬೀದಿ ದೀಪ: ಉರ್ವಸ್ಟೋರ್‌ ಕತ್ತಲಲ್ಲಿ !’ ಎಂಬ ಶೀರ್ಷಿಕೆಯಲ್ಲಿ ಆ. 20ರಂದು ಸುದಿನ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ಮಹಾನಗರ ಪಾಲಿಕೆ ಕೂಡಲೇ ಬೀದಿ ದೀಪಗಳ ದುರಸ್ತಿ ಕಾಮಗಾರಿ ಕೈಗೊಂಡಿದೆ.

ಅಂದಹಾಗೆ, ಬೀದಿ ದೀಪ ಕೆಟ್ಟು ಹೋಗಿರುವುದು ಕೇವಲ ಉರ್ವಸ್ಟೋರ್‌ ಬಳಿ ಮಾತ್ರವಲ್ಲ. ಇನ್ಫೋಸಿಸ್‌ ಹಿಂಭಾಗದ ಸಂಕೇಶ ಮೊದನೇ ಕ್ರಾಸ್‌, ಕೊಟ್ಟಾರ ಕ್ರಾಸ್‌, ಲಾಲ್‌ಬಾಗ್‌, ಬಿಜೈ, ಚಿಲಿಂಬಿ ಸಹಿತ ಇನ್ನಿತರ ಪ್ರದೇಶಗಳಲ್ಲಿನ ಬೀದಿ ದೀಪಗಳು ಕೆಟ್ಟು ಹೋಗಿವೆ. ಅವುಗಳನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೂಡಲೇ ದುರಸ್ತಿಗೊಳಿಸಬೇಕು ಎಂಬುವುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next