Advertisement

ಕೆನಡಾದ ರಸ್ತೆಗೆ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಹೆಸರು

07:50 PM Aug 29, 2022 | Team Udayavani |

ಒಟ್ಟಾವಾ: ಕೆನಡಾದ ಮರ್ಖಮ್‌ ನಗರದ ರಸ್ತೆಯೊಂದಕ್ಕೆ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರ ಹೆಸರನ್ನಿಡಲಾಗಿದೆ.

Advertisement

ಈ ವಿಚಾರವಾಗಿ ಸಂತಸ ವ್ಯಕ್ತಪಡಿಸಿರುವ ರೆಹಮಾನ್‌, ಅಲ್ಲಿನ ಮೇಯರ್‌ ಫ್ರಾಂಕ್‌ ಸ್ಕಾರ್ಪಿಟ್ಟಿ, ಅಲ್ಲಿನ ಭಾರತೀಯ ಕೌನ್ಸಿಲ್‌ ಹಾಗೂ ಜನರಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.

“ಕರುಣಾಮಯಿ ಎನ್ನುವುದು ನನ್ನ ಹೆಸರಿನ ಅರ್ಥ. ಈಗ ರಸ್ತೆಗೆ ನನ್ನ ಹೆಸರನ್ನಿಟ್ಟು ಗೌರವಿಸಲಾಗಿದೆ. ಅಲ್ಲಿ ನನ್ನ ಹೆಸರು ಸೂಚಿಸುವಂತೆಯೇ ಸದಾ ಶಾಂತಿ ನೆಲೆಸಲಿ, ಸಮೃದ್ಧಿಯಾಗಲಿ ಎಂದು ಆಶಿಸುತ್ತೇನೆ.

ಈ ರೀತಿಯ ಗೌರವವು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಮತ್ತು ಎಂದಿಗೂ ಈ ಕ್ಷೇತ್ರವನ್ನು ಬಿಡದೆಯೇ ಕೆಲಸ ಮಾಡುವಂತೆ ಪ್ರೇರೇಪಿಸಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next