Advertisement

ಸ್ವಿಗ್ಗಿ, ಝೊಮ್ಯಾಟೋದಲ್ಲಿ ಸಿಗಲಿದೆ ಬೀದಿಬದಿ ಆಹಾರ

10:04 AM Jul 06, 2022 | Team Udayavani |

ಬೆಂಗಳೂರು: ಸ್ಟಾರ್‌ ಹೋಟೆಲ್‌ಗ‌ಳು, ಹೈ-ಫೈ ರೆಸ್ಟಾರೆಂಟ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಆನ್‌ ಲೈನ್‌ ಆಹಾರ ಮಾರಾಟಕ್ಕೆ ಬೀದಿ ಬದಿ ಆಹಾರ ಮಾರಾಟಗಾರರು ಪ್ರವೇಶಿಸಲು ಬಿಬಿಎಂಪಿ ನೆರವು ನೀಡಲು ಮುಂದಾಗಿದೆ.

Advertisement

ಅನೇಕ ಮಂದಿಗೆ ಬೀದಿ ಬದಿಯಲ್ಲಿ ಸಿಗುವ ಆಹಾರ ತಿನ್ನಲು ಆಸೆಯಿದ್ದರೂ ಅಲ್ಲಿಗೆ ಹೋಗಿ ಆಹಾರ ಸೇವಿಸಲು ಮುಜುಗರ ಇರುತ್ತದೆ. ಅಂತಹವರು ಇನ್ನು ಮುಂದೆ ಸ್ವಿಗ್ಗಿ, ಝೊಮ್ಯಾಟೋದಂತಹ ಆಹಾರ ಸರಬರಾಜು ಆ್ಯಪ್‌ಗಳ ಮೂಲಕ ಬೀದಿ ಬದಿ ಆಹಾರ ಮಾರಾಟಗಾರರಿಂದ ತಮಗೆ ಇಷ್ಟವಾದಂತಹ ಆಹಾರ ತರಿಸಿಕೊಳ್ಳಬಹುದಾಗಿದೆ. ಅಂತಹದ್ದೊಂದು ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದ್ದು, ಸ್ವಿಗ್ಗಿ, ಝೊಮ್ಯಾಟೋ ಸೇರಿ ಇನ್ನಿತರ ಆಹಾರ ಸರಬರಾಜು ಆ್ಯಪ್‌ಗಳ ಬೀದಿ ಬದಿ ಆಹಾರ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾ ರದ ದೀನದಯಾಳ್‌ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌ (ಡೆ-ನಲ್ಮ್)ಅಡಿಯಲ್ಲಿ ಬೀದಿ ಬದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಲು ಬಿಬಿಎಂಪಿ ಮುಂದಾಗಿದೆ. ಅದರಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಯಮದಂತೆ ತರಬೇತಿ ನೀಡಲಾಗುತ್ತದೆ. ಮಾರಾಟ ಗಾರರಿಗೆ ಆಹಾರ ತಯಾರಿಕೆ ವೇಳೆ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡುವುದು, ಗ್ರಾಹಕರಿಗೆ ಆಹಾರ ನೀಡಬೇಕಾದಾಗ ಅನುಸರಿಸಬೇಕಾದ ಸ್ವಚ್ಛತಾ ಕ್ರಮಗಳ ಬಗ್ಗೆ 7 ದಿನಗಳ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿ ನೀಡಲು ಪ್ರತಿಯೊಬ್ಬರಿಗೆ ಬಿಬಿಎಂಪಿ 3,425 ರೂ. ವ್ಯಯಿಸಲಿದೆ. ಆ ಹಣವನ್ನು ಕೇಂದ್ರ ಸರ್ಕಾರ ಡೆ-ನಲ್ಮ್ ಅಡಿಯಲ್ಲಿ ನೀಡಲಾಗಿರುವ ಅನುದಾನ ದಿಂದ ಪಡೆಯಲಾಗುತ್ತದೆ.

ಆನ್ಲೈನ್ಮಾರಾಟಕ್ಕೆ ಒತ್ತು

ತರಬೇತಿ ಸಂದರ್ಭದಲ್ಲಿ ಆನ್‌ಲೈನ್‌ ಆಹಾರ ಸರಬರಾಜು ಮೊಬೈಲ್‌ ಆ್ಯಪ್‌ಗಳುಳ್ಳವರನ್ನು ಕರೆಸಿ ಬೀದಿಬದಿ ಆಹಾರ ಮಾರಾಟಗಾರರಿಗೆ ಆನ್‌ಲೈನ್‌ನಲ್ಲಿ ಗ್ರಾಹಕರಿಂದ ಆರ್ಡರ್‌ ಪಡೆಯುವುದು. ಅದನ್ನು ಗ್ರಾಹಕರಿಗೆ ಕಳುಹಿಸುವ ಕುರಿತು ತಿಳಿಸಿಕೊಡಲಾಗುತ್ತದೆ. ಜತೆಗೆ ಆಹಾರ ಸರಬರಾಜು ಆ್ಯಪ್‌ಗಳ ಜತೆಗೆ ಆಹಾರ ಮಾರಾಟಗಾರರು ಒಪ್ಪಂದ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ನಗರದಲ್ಲಿ 40 ಸಾವಿರ ಬೀದಿಬದಿ ಅಹಾರ ಮಾರಾಟಗಾರರು ಇರುವುದಾಗಿ ಅಂದಾಜಿಸಲಾಗಿದೆ. ಆದರೆ, ನಿಖರ ಮಾಹಿತಿ ಅರಿಯಲು ಬಿಬಿ ಎಂಪಿಯಿಂದ ಬೀದಿಬದಿ ಆಹಾರ ಮಾರಾಟಗಾರರ ಸರ್ವೆ ನಡೆಸಲು ನಿರ್ಧರಿಸಲಾಗಿದೆ. ಜತೆಗೆ ಆಹಾರ ಮಾರಾಟಗಾರರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಈ ಎಲ್ಲ ಕಾರ್ಯಗಳನ್ನು ಆ. 15ರೊಳಗೆ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಮಂಗಳೂರು: ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ

ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರಿ ವಲಯ ನಿಗದಿ ಮಾಡಬೇಕು ಎಂಬುದು ಹಿಂದಿನಿಂದಲೂ ಕೇಳಿಬರುತ್ತಿತ್ತು. ಇದೀಗ ಅದನ್ನು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ಬಿಬಿಎಂಪಿ 8 ವಲಯಗಳಲ್ಲಿನ ಪ್ರಮುಖ ಸ್ಥಳಗಳನ್ನು ಗುರುತಿಸಿ ಅಲ್ಲಿ ವ್ಯಾಪಾರಿ ವಲಯ ಎಂದು ನಿಗದಿ ಮಾಡಲಾಗುತ್ತದೆ. ಅದಕ್ಕಾಗಿ ವಲಯ ಜಂಟಿ ಆಯುಕ್ತರು ಸೇರಿ ಇನ್ನಿತರ ಅಧಿಕಾರಿಗಳಿಂದ ವ್ಯಾಪಾರಿ ವಲಯ ಮಾಡಬಹುದಾದಂತಹ ಸ್ಥಳಗಳ ಪಟ್ಟಿ ನೀಡುವಂತೆ ಸೂಚಿಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.

ಸಾಲ ಸೌಲಭ್ಯಕ್ಕೆ ಚಿಂತನೆ ತರಬೇತಿ, ಮಾರಾಟ ವಿಸ್ತರಿಸಲು ಅವಕಾಶ ನೀಡುವುದರ ಜತೆಗೆ ಬೀದಿಬದಿ ಆಹಾರ ಮಾರಾಟಗಾರರಿಗೆ ಬಿಬಿಎಂಪಿಯಿಂದ ಸಾಲವನ್ನೂ ಕೊಡಿಸಲಾಗುತ್ತದೆ. ಪಾಲಿಕೆ ಈಗಾಗಲೆ ನಿಗದಿ ಮಾಡಿರುವ ಬ್ಯಾಂಕ್‌ಗಳಿಂದ ಬೀದಿಬದಿ ಆಹಾರ ಮಾರಾಟಗಾರ ರಿಗೆ 2 ಲಕ್ಷ ರೂ. ಸಾಲ ಕೊಡಿಸಲಾಗುತ್ತದೆ. ಅದನ್ನು ವ್ಯಾಪಾರಿಗಳು ಹಂತ ಹಂತವಾಗಿ ತೀರಿಸಬೇಕಿದೆ.ಬೀದಿ ಬದಿ ಆಹಾರ ಮಾರಾಟಗಾರರ ಆಹಾರವನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಲು ಆಹಾರ ಸರಬರಾಜು ಆ್ಯಪ್‌ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ರಾಮಪ್ರಸಾದ್ಮನೋಹರ್‌, ಬಿಬಿಎಂಪಿ ವಿಶೇಷ ಆಯುಕ್ತ

ಗಿರೀಶ್ಗರಗ

Advertisement

Udayavani is now on Telegram. Click here to join our channel and stay updated with the latest news.

Next