Advertisement

ಹೆಣ್ಣು ಮಕ್ಕಳ ಶಿಕ್ಷಣ ಜಾಗೃತಿ ಬೀದಿ ನಾಟಕ

11:40 AM Feb 08, 2020 | Suhan S |

ನವಲಗುಂದ: ಹೆಣ್ಣು ಮಗಳು ಎಂದು ನಿರ್ಲಕ್ಷ್ಯ ಮಾಡದೇ ಅವಳಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಕುಟುಂಬದ ಜವಾಬ್ದಾರಿ ನಿಭಾಯಿಸುವಷ್ಟು ಸದೃಢಳಾಗಿ ಬೆಳೆಯುತ್ತಾಳೆ. ಸರಕಾರವು ವಿವಿಧ ಯೋಜನೆ ಮೂಲಕ ಹೆಣ್ಣು ಮಗಳಿಗೆ ಪ್ರಾಮುಖ್ಯತೆ ನೀಡಿದೆ. ಅವುಗಳ ಉಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಶಿವಮೊಗ್ಗದ ಸಮನ್ವಯ ಕಲಾತಂಡದವರು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.

Advertisement

ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಹಯೋಗದೊಂದಿಗೆ ಪಟ್ಟಣದ ವಿನಾಯಕ ಪೇಟೆಯಲ್ಲಿ ಬೀದಿ ನಾಟಕ ಪ್ರದರ್ಶನ ಮಾಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಕೊಳಲಿನ ಮಾತನಾಡಿ, ಬಾಲ್ಯ ವಿವಾಹ ಮಾಡುವುದು ಕಾನೂನಬಾಹಿರ ಕೆಲಸ. ಬಾಲ್ಯವಿವಾಹ ಮಾಡಿ ಹೆಣ್ಣು ಮಗಳ ಜೀವನ ಹಾಳು ಮಾಡಬಾರದು. ಪ್ರತಿ ಹೆಣ್ಣು ಮಕ್ಕಳಿಗೆ  ಶಿಕ್ಷಣ ಅವಶ್ಯವಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ನಾಗರತ್ನ ಯಲುವಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಶಂಕ್ರಮ್ಮ ಹಿರೇಮಠ, ಶಾಂತಾ ಸಕ್ರಪ್ಪನವರ, ಮಂಜುಳಾ ಒಂಟೇಲಿ, ಜಲಿನಾ ಬಾಗಲಕೋಟಿ, ಜಯಶ್ರೀ ಭೋವಿ, ಗಿರಿಜಾ ಹುಲ್ಲೂರ, ರೇಣುಕಾ ಒಂಟೇಲಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next