Advertisement

ಬೀದಿನಾಯಿಗಳ ಹಾವಳಿ: ಆತಂಕದಲಿ ಸಾರ್ವಜನಿಕರು

04:01 PM May 18, 2022 | Team Udayavani |

ಅರಸೀಕೆರೆ: ನಗರದ ಬಹುತೇಕ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ವಯೋವೃದ್ಧರು, ಮಹಿಳೆಯರು, ಮಕ್ಕಳು ಹಾಗೂ ಜಾನುವಾರುಗಳು ನಗರದ ರಸ್ತೆಗಳಲ್ಲಿ ಭಯ ಮುಕ್ತವಾಗಿ ಓಡಾಡಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ನಗರಸಭೆ ಆಡಳಿತ ಸಾರ್ವಜನಿಕರ ಈ ಸಮಸ್ಯೆಗೆ ಅತ್ಯಂತ ತ್ವರಿತವಾಗಿ ಪರಿಹಾರ ನೀಡಲು ಮುಂದಾಗಬೇಕಾಗಿದೆ.

Advertisement

ನಗರದ ಬಹುತೇಕ ವಾರ್ಡುಗಳಲ್ಲಿ 10 ರಿಂದ20ಕ್ಕೂ ಹೆಚ್ಚಿನ ಬೀದಿ ನಾಯಿಗಳು ಗುಂಪು-ಗುಂಪಾಗಿ ತಿರುಗಾಡುತ್ತಿದ್ದು, ರಸ್ತೆಗಳಲ್ಲಿ ವಯೋವೃದ್ಧರು, ಮಹಿಳೆಯರು ಹಾಗೂಮಕ್ಕಳು ತಿರುಗಾಡುವ ಸಂದರ್ಭದಲ್ಲಿಬೀದಿನಾಯಿಗಳ ಗುಂಪು ದಿಢೀರ್‌ ದಾಳಿಮಾಡಲು ಮುಂದಾಗುತ್ತಿರುವುದು ಜನರಲ್ಲಿ ಭಯದ ವಾತವರಣ ನಿರ್ಮಿಸಿದೆ. ಹಾಡುಹಗಲೇವಿದ್ಯಾನಗರದ ಬಡಾವಣೆಗಳಲ್ಲಿ ನಾಯಿಗಳ ಹಿಂಡು ಮನೆ ಮುಂದಿದ್ದ ಮೇಕೆ ಮೇಲೆ ದಾಳಿ ಮಾಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ನಾಯಿಗಳ ದಿಢೀರ್‌ ದಾಳಿ: ಬೀದಿ ನಾಯಿಗಳು ರಕ್ತ ಮತ್ತು ಮಾಂಸದ ರುಚಿ ಕಂಡಿ ರುವ ಕಾರಣ ವಯೋವೃದ್ಧರು ಮತ್ತು ಮಕ್ಕಳು ಹಾಗೂ ಮಹಿಳೆಯರ ಮೇಲೆ ದಾಳಿ ನಡೆಸಲು ಮುಂದಾಗುತ್ತಿವೆ. ಇಂತಹ ಗಂಭೀರ ಸಮಸ್ಯೆ ಕೇವಲಒಂದು ವಾರ್ಡ್‌ಗೆ ಮಾತ್ರ ಸೀಮಿತವಾಗದೆನಗರದ ಬಹುತೇಕ ವಾರ್ಡ್‌ಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ.

ಸಮಸ್ಯೆ ಪರಿಹರಿಸಿ: ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಧಿಕಾರಿಗಳು ಹೆಚ್ಚಿನಜವಾಬ್ದಾರಿ ವಹಿಸುವ ಮೂಲಕ ಸೂಕ್ತಕ್ರಮಕೈಗೊಂಡು ಬೀದಿ ನಾಯಿಗಳ ಹಾವಳಿಗೆಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಾಣಿದಯಾ ಸಂಘದ ಪದಾಧಿಕಾರಿ ಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಇಂತಹ ಗಂಭೀರಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಲು ಮುಂದಾಗಬೇಕಾಗಿದೆ. ತಪ್ಪಿದಲ್ಲಿ ಜನರ ಪ್ರತಿರೋಧ ಎದುರಿಸಬೇಕಾಗುತ್ತದೆ.

ನಗರಸಭೆ ಅಧ್ಯಕ್ಷರು ಏನಂತಾರೆ?: ನಗರಸಭೆಆಡಳಿತಕ್ಕೆ ಬೀದಿ ನಾಯಿಗಳ ಹಾವಳಿ ದಿನದಿಂದದಿನಕ್ಕೆ ತಲೆನೋವಾಗಿ ಪರಿಣಮಿಸಿದೆ. ಬೀದಿನಾಯಿಗಳನ್ನು ಸಾಯಿಸಲು ಅಥವಾ ಸ್ಥಳಾಂತರಕ್ಕೆಕಾನೂನಿನಲ್ಲಿ ಅವಕಾ ಶವಿಲ್ಲ. ಹಾಗಾಗಿ ಈ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆಗೆ ಮೂರುಬಾರಿ ಟೆಂಡರ್‌ ಕರೆಯಲಾಗಿದೆ. ಆದರೆ ಯಾರೂಟೆಂಡರ್‌ನಲ್ಲಿ ಭಾಗವಹಿಸದ ಕಾರಣ ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Advertisement

ಸಮಸ್ಯೆ ಪರಿಹಾರ ಮುಖ್ಯ: ನಗರಸಭೆ ಆಡಳಿತ ಬೀದಿ ನಾಯಿಗಳನ್ನು ನಿಯಂತ್ರಿಸಲು ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನು ಬೀದಿನಾಯಿಗಳಿಗೆ ಮಾಡಿಸುವುದು ಅನಿವಾರ್ಯ ಮಾರ್ಗವಾಗಿದೆ. ಆದರೆ ನಾವು ಟೆಂಡರ್‌ಕರೆದಿದ್ದೇವೆ, ಯಾರು ಟೆಂಡರ್‌ ಹಾಕಿಲ್ಲ ಎನ್ನುವ ನಗರಸಭೆ ಆಡಳಿತದ ಉತ್ತರದಿಂದ ಸಮಸ್ಯೆಗೆಸೂಕ್ತ ಪರಿಹಾರ ನೀಡಲು ಸಾಧ್ಯವಿಲ್ಲ,ಪರ್ಯಾಯ ಮಾರ್ಗದ ಬಗ್ಗೆ ಅತ್ಯಂತತ್ವರಿತವಾಗಿ ಕ್ರಮಕೈಗೊಳ್ಳುವ ಮೂಲಕ ಸಮಸ್ಯೆಗೆ ಇತಿಶ್ರೀ ಹೇಳಬೇಕೆಂದು ರೈತ ಸಂಘದ ಮುಖಂಡ ಪ್ರಸನ್ನ ಕುಮಾರ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next