ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತರೊಬ್ಬರಿಗೆ ಬೀದಿ ನಾಯಿ ಕಡಿದ ಘಟನೆ ಗುರುವಾರ ಸಂಭವಿಸಿದೆ.
Advertisement
ಡಾ| ರವಿ ಕಕ್ಕೆಪದವು ಸೇರಿದಂತೆ ಇತರರು ಗಾಯಾಳುವನ್ನು ಕಡಬ ಆಸ್ಪತ್ರೆಗೆ ದಾಖಲಿಸಿದರು. ಬುಧವಾರ ನಾಯಿ ಅಡ್ಡಬಂದ ಪರಿಣಾಮ ಅಟೋ ರಿಕ್ಷಾವೊಂದು ಪಲ್ಟಿಯಾಗಿ ಹಾನಿಗೀಡಾಗಿದೆ.
ಸುಬ್ರಹ್ಮಣ್ಯದಲ್ಲಿ ಬೀದಿ ನಾಯಿ ಹಾವಳಿ ಬಗ್ಗೆ ಈ ಹಿಂದೆಯೇ ದೂರು ವ್ಯಕ್ತವಾಗಿತ್ತು. ಜಾತ್ರೆಯ ಪೂರ್ವಭಾವಿ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾವಗೊಂಡಾಗ ಬೀದಿ ನಾಯಿ, ಅಲೆಮಾರಿ ಜಾನುವಾರುಗಳನ್ನು ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.