Advertisement
ಬೀದಿನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಆಗಸ್ಟ್ ತಿಂಗಳೊಂದರಲ್ಲಿಯೇ ಪಾಲಿಕೆಗೆ ಬರೋಬ್ಬರಿ 82 ದೂರುಗಳು ಬಂದಿವೆ. ನಗರದ ಅನೇಕ ಕಡೆಗಳಲ್ಲಿ ಹಗಲು- ರಾತ್ರಿ ಎನ್ನದೆ ಬೀದಿ ನಾಯಿಗಳು, ವಾಹನ ಸವಾರರು ಸೇರಿದಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಂದಿಯಲ್ಲಿ ಭೀತಿಯುಂಟು ಮಾಡುತ್ತಿವೆ. ಆದರೆ, ಈ ರೀತಿ ಜನರಿಗೆ ಕಾಟ ನೀಡುತ್ತಿರುವ ಬೀದಿನಾಯಿಗಳನ್ನು ಹಿಡಿಯುವುದು ಅಥವಾ ಅವುಗಳ ನಿಯಂತ್ರಣ ಪಾಲಿಕೆಗೂ ಸವಾಲಾಗಿದೆ.Related Articles
ಬೀದಿ ನಾಯಿ ಉಪಟಳ ಜಾಸ್ತಿ ಇದೆ ಎಂದು ಬೀದಿ ನಾಯಿಗಳನ್ನು ಕೊಂದರೆ ಅದು ಶಿಕ್ಷಾರ್ಹ ಅಪರಾಧ. ಅಪರಾಧ ದೃಢಪಟ್ಟರೆ ಕಾನೂನಿನ ಪ್ರಕಾರ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ. ಸದ್ಯದ ನಿಯಮದ ಪ್ರಕಾರ ಆರೋಪ ಆಧಾರದ ಮೇಲೆ ಶಿಕ್ಷೆ ಪ್ರಮಾಣ ನಿಗದಿಯಾಗುತ್ತದೆ. ಬೀದಿ ನಾಯಿಗಳಿಗೆ ಗುಣಪಡಿಸಲಾಗದ ಕಾಯಿಲೆಗಳಿದ್ದರೆ. ತೀವ್ರವಾಗಿ ಗಾಯಗೊಂಡರೆ, ಇದನ್ನು ತಜ್ಞ ವೈದ್ಯರು ಖಚಿತಪಡಿಸಿದರೆ ಅಂತಹವುಗಳನ್ನು ಪ್ರಾಣಿಗಳ ಸಂತಾನಶಕ್ತಿ ನಿಯಂತ್ರಣ ನಿಯಮ-2001ರ ಅನ್ವಯ ದಯಾ ಮರಣಕ್ಕೆ ಒಳಪಡಿಸಬಹುದು.
Advertisement
ನಾಯಿಗಳ ಉಪಟಳ ಹೆಚ್ಚುನಗರದ ಕೊಟ್ಟಾರ ಚೌಕಿ, ಮೇರಿಹಿಲ್, ಬಿಜೈ, ದೇರೆಬೈಲ್, ಉರ್ವಸ್ಟೋರ್, ಯೆಯ್ನಾಡಿ, ಲ್ಯಾಂಡ್ ಲಿಂಕ್ಸ್, ಬೋಂದೆಲ್ ಸೇರಿದಂತೆ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಬೀದಿನಾಯಿಗಳ ಕಾಟ ಹೆಚ್ಚಿವೆ. ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ
ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳದ ಬಗ್ಗೆ ಟೋಲ್ ಫ್ರೀ ಸಂಖ್ಯೆ: 0824 2220306 ಕರೆ ಮಾಡಬಹುದು. ಕರೆ ಮಾಡಿದರೆ ಮೂರು ದಿನಗಳೊಳಗೆ ಎನಿಮಲ್ ಕೇರ್ ಸಂಸ್ಥೆ ಯ ಸಿಬಂದಿ ಆ ಪ್ರದೇಶಕ್ಕೆ ಬಂದು ನಾಯಿಗಳನ್ನು ಕೊಂಡೊಯ್ಯುತ್ತಾರೆ. ಒಂದು ವೇಳೆ ನಾಯಿ ಕಚ್ಚಿದರೆ ಅಥವಾ ಸಮಸ್ಯೆ ಉಲ್ಬಣವಿದ್ದರೆ ಕೂಡಲೇ ಆ ಪ್ರದೇಶಕ್ಕೆ ಎನಿಮಲ್ ಕೇರ್ ತಂಡ ತೆರಳುತ್ತದೆ. ಕಾರ್ಪೊರೇಷನ್ ಅಂತರ್ಜಾಲ ತಾಣದಲ್ಲಿ ಜನಹಿತ ಎಂಬ ಲಿಂಕ್ ನಲ್ಲಿಯೂ ದೂರು ದಾಖಲಿಸಬಹುದು. ಬೀದಿನಾಯಿ: ಮುನ್ನೆಚ್ಚರಿಕೆ ವಹಿಸಿ
. ಕಲ್ಲು ಹೊಡೆಯಬೇಡಿ.
. ಬಳಿಗೆ ತೆರಳಿ ಆಟವಾಡಬೇಡಿ.
. ಬೀದಿನಾಯಿ ಎದುರು ಓಡಬೇಡಿ, ಆ ಸಮಯದಲ್ಲಿ ನಮ್ಮನ್ನು ಅಟ್ಟಿಸುವ ಸಾಧ್ಯತೆ ಹೆಚ್ಚು.
. ವಾಹನಗಳನ್ನು ಅಟ್ಟಿಸಿದರೆ ವಾಹನ ನಿಧಾನ ಮಾಡಿ ಕಚ್ಚದಂತೆ ಎಚ್ಚರ ವಹಿಸಿ.
. ಮಕ್ಕಳು ಆಹಾರ ತಿನ್ನಿಸದಂತೆ ಹೆತ್ತವರು ಗಮನ ನೀಡಿ.
. ಮರಿಗಳೊಂದಿಗೆ ಇರುವಾಗ ಬಳಿ ಹೋಗಬೇಡಿ ದೂರು ಬಂದ ತತ್‌ಕ್ಷಣ ಕ್ರಮ
ಬೀದಿನಾಯಿಗಳ ಸಮಸ್ಯೆಗಳ ಬಗ್ಗೆ ಪಾಲಿಕೆ ಕರೆ ಬಂದರೆ ಕೂಡಲೇ ಎನಿಮಲ್ ಕೇರ್ ಅಧಿಕಾರಿಗಳಿಗೆ ತಿಳಿಸುತ್ತೇವೆ. ಸಮಸ್ಯೆಯನ್ನು ಅರಿತು ಕೂಡಲೇ ಆ ಪ್ರದೇಶಕ್ಕೆ ತಂಡ ತೆರಳಿ ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ನಗರದಲ್ಲಿ ಸದ್ಯ 6,079 ಬೀದಿನಾಯಿಗಳಿವೆ.
- ಡಾ| ಕಮಲಮ್ಮ, ಪಶುವೈದ್ಯಾಧಿಕಾರಿ, ಪಾಲಿಕೆ ನವೀನ್ ಭಟ್ ಇಳಂತಿಲ