Advertisement
ಹಾಗೆಯೇ ನನ್ನ 4 ವರ್ಷದ ಮಗಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ ಎನ್ನುತ್ತಾರೆ ಇನ್ನೋರ್ವರು’. ಹೌದು, ದೊಡ್ಡಬಳ್ಳಾಪುರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಏರಿಕೆ ಕಂಡು ಬಂದಿದ್ದು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಿರುವ ಪರಿಯಿದು.!.
Related Articles
Advertisement
ನಿತ್ಯ 10-15 ನಾಯಿ ಕಚ್ಚಿದ ಪ್ರಕರಣ: ನಗರದ ನಂದಿ ಆಸ್ಪತ್ರೆ ಹಿಂಭಾಗ ಮಂಜುಳಾ ಎನ್ನುವ ಮಹಿಳೆ ಕೈಗೆ ನಾಯಿ ಕಚ್ಚಿದೆ. ನಿತ್ಯ ಸರ್ಕಾರಿ ಆಸ್ಪತ್ರೆಗೆ 10ರಿಂದ 15 ನಾಯಿ ಕಚ್ಚಿದ ಪ್ರಕರಣ ಬರುತ್ತಿದ್ದು ಕಳೆದ ತಿಂಗಳು ಸುಮಾರು 500ಕ್ಕೂ ಹೆಚ್ಚು ಪ್ರಕರಣಗಳಾಗಿವೆ. ಕೆಲವರು ತೀವ್ರ ಗಾಯಗೊಂಡು ನರಗಳಿಗೆ ಹಾನಿಯಾಗಿದ್ದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಲಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಕ್ರಮ ವಹಿಸಬೇಕಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಯಾದ ಡಾ.ಪರಮೇಶ್ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಬೀದಿ ನಾಯಿಗಳು ಹೆಚ್ಚಾಗುತ್ತಿರುವ ಬಗ್ಗೆ ನಾಗರಿಕರಿಂದ ದೂರು ಬರುತ್ತಿದ್ದು ನಗರಸಭೆ ಗಂಭೀರವಾಗಿ ಪರಿಗಣಿಸಿದೆ. ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಟೆಂಡರ್ ಕರೆದು ಒಂದೂವರೆ ತಿಂಗಳಾಗಿದ್ದು ಇಂದಿನಿಂದಲೇ ಕಾರ್ಯಾರಂಭವಾಗಲಿದೆ. ● ಈರಣ್ಣ, ಎಇಇ, ಪರಿಸರ ವಿಭಾಗ, ನಗರಸಭೆ
ಮೊನ್ನೆ 20 ಮಂದಿಗೆ ನಾಯಿ ಕಡಿತ ನಗರದಲ್ಲಿ ತಿಂಗಳಲ್ಲೇ 500ಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣ ಕಂಡು ಬಂದಿದ್ದು ಹಾಗೆಯೇ ನಗರದ ವಿವಿಧ ಭಾಗಗಳಲ್ಲಿ ಸೋಮವಾರ ರಾತ್ರಿ 9 ಮಂದಿ ಹಾಗೂ ಮಂಗಳವಾರ ಬೆಳಗ್ಗೆ 11 ಮಂದಿ ನಾಯಿ ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಕೋರ್ಟ್ ರಸ್ತೆ, ಜಿ.ರಾಮೇಗೌಡ ವೃತ್ತದ ಬಳಿ, ಪ್ರಿಯಾಂಕ ಹೋಟೆಲ್ ಬಳಿ, ಡಿ.ಕ್ರಾಸ್ ಬಸ್ ನಿಲ್ದಾಣದ ಬಳಿ ಹೀಗೆ ಹಲವು ಕಡೆ ನಾಯಿಗಳು ದಾಳಿ ನಡೆಸುತ್ತಿದ್ದು ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.
– ಶ್ರೀಕಾಂತ ಡಿ.