Advertisement

ಮಗು ಮೇಲೆ ಬೀದಿ ನಾಯಿಗಳ ದಾಳಿ

06:25 AM Mar 12, 2018 | Team Udayavani |

ಶಿರಾಳಕೊಪ್ಪ: ಮನೆಯಲ್ಲಿ ಮಲಗಿದ್ದ ಐದು ತಿಂಗಳ ಹಸುಗೂಸಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ
ಪರಿಣಾಮ ಮಗು ತೀವ್ರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

Advertisement

ಮಾರಣಾಂತಿಕ ಗಾಯಕ್ಕೊಳಗಾದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಟ್ಟಣದ ಮಿಡ್ಲ್ ಸ್ಕೂಲ್‌ ಹಿಂಭಾಗ ಈ ಘಟನೆ ನಡೆದಿದ್ದು, ಲಕ್ಷ್ಮಣ ಕಲಾಲ್‌ ಎಂಬುವರ ಮಗುವನ್ನು ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಮಗುವಿನ ಮುಖ, ಕಿವಿ, ಕುತ್ತಿಗೆ ಭಾಗದಲ್ಲಿ ಕಚ್ಚಿವೆ. ಅಲ್ಲಿಯೇ ಇದ್ದ ಮತ್ತೂಬ್ಬ ಪುಟ್ಟ ಬಾಲಕಿ ಅರ್ಪಿತಾ ಕಿರುಚಾಡಿ ನಾಯಿಯನ್ನು ಓಡಿಸಿದ್ದಾಳೆ.

ಲಕ್ಷ್ಮಣ ಕಲಾಲ್‌ ಅವರದ್ದು ಅವಿಭಕ್ತ ಕುಟುಂಬವಾಗಿದ್ದು ಮನೆಯಲ್ಲಿ ಸಾಕಷ್ಟು ಜನರಿದ್ದರು. ಆದರೆ ನಾಯಿ ದಾಳಿ
ವೇಳೆ ಪುಟ್ಟ ಬಾಲಕಿ ಹೊರತುಪಡಿಸಿ ಯಾರೂ ಇರಲಿಲ್ಲ. ಮಗುವಿನ ತಾಯಿ ಮನೆ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದು, ಮತ್ತಿಬ್ಬರು ಮಹಿಳೆಯರು ಕುಡಿಯುವ ನೀರು ತರಲು ಹೊರ ಹೋಗಿದ್ದರು. ಆದರೆ ಮನೆಯ ಮುಂದಿನ ಬಾಗಿಲು ತೆರೆದಿಟ್ಟಿದ್ದರಿಂದ ಈ ಅವಘಡ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next