ಧಾರವಾಡ : ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಮೃತಪಟ್ಟ ಘಟನೆ ಇಲ್ಲಿನ ನವಲೂರಿನ ರೈಲ್ವೆ ಗೇಟ್ ಬಳಿ ನಡೆದಿದೆ.
ದುಮ್ಮವಾಡ ಗ್ರಾಮದ ಪ್ರಥಮ ನೀರಲಕಟ್ಟಿ (11) ಮೃತಪಟ್ಟ ಬಾಲಕ.
ರಜೆಗೆಂದು ನವಲೂರಿಗೆ ಬಂದಿದ್ದ ಬಾಲಕ ಅಜ್ಜನಿಗೆ ಊಟ ಕೊಡಲೆಂದು ತೋಟಕ್ಕೆ ಹೋಗುತ್ತಿದ್ದ ಸಮಯದಲ್ಲಿ ಬೀದಿ ನಾಯಿಗಳು ದಾಳಿಯಿಟ್ಟಿವೆ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಅಸುನೀಗಿದ್ದಾನೆ.
Related Articles
ರ್‍ವೆಲ್ವೆ ಗೇಟ್ ಬಳಿಯೇ ಬೀದಿ ನಾಯಿಗಳ ದಾಳಿಗೆ ಮಕ್ಕಳು ಬಲಿಯಾಗುತ್ತಿರುವುದು ಇದು ೩ನೇ ಪ್ರಕರಣವಾಗಿದೆ.
ಇದನ್ನೂ ಓದಿ : ರಾಷ್ಟ್ರಪತಿ ಹುದ್ದೆ ಬೇಡ, ನಾನು ಪ್ರಧಾನಿಯಾಗೋ ಕನಸು ಕಾಣುತ್ತಿದ್ದೇನೆ:ಅಖಿಲೇಶ್ ಗೆ ಮಾಯಾವತಿ