ರಾಜಸ್ಥಾನ: ಆಸ್ಪತ್ರೆಯಲ್ಲಿ ತಾಯಿ ಜೊತೆ ಬೆಡ್ ನಲ್ಲಿ ಮಲಗಿದ್ದ ಒಂದು ತಿಂಗಳ ಹಸುಗೂಸನ್ನು ಬೀದಿ ನಾಯಿಯೊಂದು ಎಳೆದೊಯ್ದು ಕಚ್ಚಿ ಕೊಂದಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ, ಸೋಮವಾರ ರಾತ್ರಿ ತಾಯಿ ಜೊತೆ ಮಲಗಿದ್ದ ಪುಟ್ಟ ಮಗು ಬೆಳಿಗ್ಗೆ ಎದ್ದು ನೋಡುವಾಗ ಆಸ್ಪತ್ರೆಯ ಹೊರಭಾಗದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆ ಕುರಿತು ಆಸ್ಪತ್ರೆಯ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಸೋಮವಾರ ತಡರಾತ್ರಿ ಎರಡು ಬೀದಿ ನಾಯಿಗಳು ಆಸ್ಪತ್ರೆಯ ಒಳ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ ಅಲ್ಲದೆ ನಾಯಿಯ ಬಾಯಿಯಲ್ಲಿ ಮಗುವಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅನಾರೋಗ್ಯದಿಂದ ಮಗುವಿನ ತಂದೆ ಆಸ್ಪತ್ರೆಗೆ ದಾಖಲಾಗಿದ್ದು ತಾಯಿ ತನ್ನ ಮಕ್ಕಳೊಂದಿಗೆ ಆಸ್ಪತ್ರೆಯಲ್ಲೇ ಇದ್ದರು ಎನ್ನಲಾಗಿದೆ ಅದರಂತೆ ಸೋಮವಾರ ರಾತ್ರಿ ಆಸ್ಪತ್ರೆಯಲ್ಲೇ ಮಕ್ಕಳೊಂದಿಗೆ ಮಲಗಿದ್ದರು ಈ ವೇಳೆ ನಿದ್ದೆಗೆ ಜಾರಿದ ಸಂದರ್ಭ ನಾಯಿ ಆಸ್ಪತ್ರೆ ಒಳಗೆ ಬಂದು ಮಗುವನ್ನು ಎಳೆದೊಯ್ದು ಕೊಂದು ಹಾಕಿದೆ ಎಂದು ಹೇಳಿದ್ದಾರೆ.
ಅಲ್ಲದೆ ಬೆಳಿಗ್ಗೆ ಮಗುವಿನ ಮೃತದೇಹ ಆಸ್ಪತ್ರೆಯ ಹೊರಗೆ ಪತ್ತೆಯಾದ ಬಳಿಕ ಆಸ್ಪತ್ರೆಯ ಸಿಬ್ಬಂದಿಗಳು ಪೊಲೀಸರ ಜೊತೆ ಸೇರಿಕೊಂಡು ಖಾಲಿ ಹಾಳೆಯಲ್ಲಿ ನಮ್ಮ ಸಹಿ ತೆಗೆದುಕೊಂಡು ನಮಗೆ ತಿಳಿಸದೆ ಅಂತಿಮ ವಿಧಾನಗಳನ್ನು ಪೂರೈಸಿದ್ದಾರೆ, ಮಗುವಿನ ಮುಖವನ್ನು ನೋಡಲು ಅವಕಾಶ ನೀಡಲಿಲ್ಲ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ.
ಆಸ್ಪತ್ರೆಯೊಳಗೆ ನಾಯಿಗಳು ಬರುತ್ತವೆ ಎಂದರೆ ಆಸ್ಪತ್ರೆಯಲ್ಲಿ ಯಾವ ರೀತಿ ಸಿಬ್ಬಂದಿಗಳು ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬನವಾಸಿಗೆ ಆಗಮಿಸಿದ ಸಿಎಂ ಬೊಮ್ಮಾಯಿ: ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಕಾಂಗ್ರೆಸ್ ಪ್ರಮುಖರು