ರಾಜ್ಯ ಆರೋಗ್ಯ ಇಲಾಖೆಯ ವರದಿ ಪ್ರಕಾರ 2023ರ ಜ. 1ರಿಂದ ನ. 27ರ ವರೆಗೆ 2.15 ಲಕ್ಷ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಇವರಲ್ಲಿ ಶೇ. 90ರಷ್ಟು ಮಂದಿ ಬೀದಿನಾಯಿ ಕಡಿತಕ್ಕೆ ತುತ್ತಾಗಿ ದ್ದಾರೆ. 2021ರಲ್ಲಿ1.59 ಲಕ್ಷ, 2022ರಲ್ಲಿ 1.62 ಲಕ್ಷ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.
Advertisement
ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ವಾರಕ್ಕೆ ಸರಾಸರಿ 5 ಸಾವಿರ, ದಿನವೊಂದಕ್ಕೆ 700 ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡದಲ್ಲಿ 11,500, ಉಡುಪಿಯಲ್ಲಿ 11 ಸಾವಿರ, ಚಿತ್ರದುರ್ಗದಲ್ಲಿ 10 ಸಾವಿರ, ಧಾರವಾಡದಲ್ಲಿ 6 ಸಾವಿರ ಮತ್ತು ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 500ರಿಂದ 5 ಸಾವಿರ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.
ದಶಕಗಳ ಹಿಂದೆ ಎಲ್ಲೆಂದರಲ್ಲಿ ಆಹಾರ ತ್ಯಾಜ್ಯ ವನ್ನು ಎಸೆಯಲಾಗುತ್ತಿತ್ತು. ಅವುಗಳನ್ನು ಬೀದಿ ನಾಯಿಗಳು ಸೇವಿಸುತ್ತಿದ್ದವು. ಆದರೆ ಪ್ರಸ್ತುತ ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುತ್ತಿರುವುದರಿಂದ ಬೀದಿಗೆ ಆಹಾರ ತ್ಯಾಜ್ಯ ಎಸೆಯುವುದು ಕಡಿಮೆಯಾಗಿದೆ. ಇದರಿಂದ ಬೀದಿ ನಾಯಿಗಳಿಗೆ ಆಹಾರದ ಕೊರತೆ ಎದುರಾಗಿದೆ. ಶ್ವಾನ ಪ್ರಿಯರು ಒದಗಿಸುವ ಆಹಾರ ಎಲ್ಲ ಬೀದಿ ನಾಯಿಗಳಿಗೆ ಸಿಗುವುದಿಲ್ಲ. ಇದರಿಂದಾಗಿ ಆಹಾರಕ್ಕಾಗಿ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಚಿತ್ರದುರ್ಗ: ಬೀದಿನಾಯಿ ಕಚ್ಚಿದ್ದ ಬಾಲಕ ಸಾವು
ತಾಲೂಕಿನ ಮೆದೇಹಳ್ಳಿ ಗ್ರಾಮದಲ್ಲಿ ಬೀದಿ ನಾಯಿ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ತರುಣ್ (10) ಎಂಬ ಬಾಲಕ ಅಸುನೀಗಿದ್ದಾನೆ. ಹದಿನೈದು ದಿನಗಳ ಹಿಂದೆ ಆತ ಶಾಲೆಗೆ ಹೋಗುವ ಸಂದರ್ಭ ದಲ್ಲಿ ಬೀದಿ ನಾಯಿ ದಾಳಿ ನಡೆಸಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿತ್ತು. ಆತನನ್ನು ತತ್‌ಕ್ಷಣ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾನೆ.
Related Articles
Advertisement