ಹೊಸದಿಲ್ಲಿ: ಮೂರು ದಿನಗಳ ಅವಧಿಯಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ ಸಹೋದರರಿಬ್ಬರು ಬಲಿಯಾದ ಘಟನೆ ದೆಹಲಿಯ ವಸಂತ್ ಕುಂಜ್‌ನಲ್ಲಿ ನಡೆದಿದೆ.
Advertisement
ಶುಕ್ರವಾರ ಸಿಂಧಿ ಕ್ಯಾಂಪ್‌ನಲ್ಲಿ ಬೀದಿನಾಯಿಗಳು 7 ವರ್ಷದ ಬಾಲಕ ಆನಂದ್‌ನನ್ನು ಅಟ್ಟಾಡಿಸಿಕೊಂಡು ಹೋಗಿ ಕೊಂದು ಹಾಕಿದ್ದವು. ಬಾಲಕನ ಕುಟುಂಬವು ಈ ಆಘಾತದಿಂದ ಕಂಗಾಲಾಗಿರುವಂತೆಯೇ, ಭಾನುವಾರ ಮೂತ್ರ ವಿಸರ್ಜಿಸಲು ಮನೆ ಹೊರಗೆ ಬಂದಿದ್ದ ಆನಂದ್‌ನ ತಮ್ಮ ಆದಿತ್ಯ(5)ನ ಮೇಲೂ ಬೀದಿನಾಯಿಗಳು ದಾಳಿ ನಡೆಸಿವೆ. ಕೆಲವೇ ಕ್ಷಣಗಳಲ್ಲಿ ಬಾಲಕ ಅಸುನೀಗಿದ್ದಾನೆ. ಈ ಘಟನೆಯು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.