Advertisement

ಜೋಹರ್‌ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ

11:41 AM Dec 03, 2021 | Team Udayavani |

ಪಿಥೋರಗಢ: ಭಾರತದ ಗಡಿ ಸಂರಕ್ಷಣೆ ದೃಷ್ಟಿಯಿಂದ, ಚೀನದ ಕಳ್ಳಾಟಗಳನ್ನು ತಡೆಯುವ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಮುನ್ಸಿಯಾರಿ -ಮಿಲಮ್‌ ರಸ್ತೆ ನಿರ್ಮಾಣ 2023ರ ಅಂತ್ಯದೊಳಗೆ ಮುಗಿಯಲಿದೆ ಎಂದು ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್‌ಒ) ತಿಳಿಸಿದೆ.

Advertisement

ಇದನ್ನೂ ಓದಿ:ವಿದ್ಯಾರ್ಥಿಗಳ ಹೊಡೆದಾಟ: ರಕ್ಷಣೆಗೆ ಬಂದ ಪೊಲೀಸರ ಮೇಲೂ ಹಲ್ಲೆ; ಹಲವರ ಬಂಧನ

ಈ ರಸ್ತೆ ನಿರ್ಮಾಣ ಮುಗಿದ ಮೇಲೆ ಉತ್ತರಾಖಂಡದ ಜೋಹರ್‌ ಕಣಿವೆಯಲ್ಲಿರುವ ಭಾರತ-ಚೀನ ಗಡಿ ಭಾಗದ ಕಡೆಯ ಪೋಸ್ಟನ್ನು ತಲುಪಲು ಭಾರತೀಯ ಸೈನಿಕರಿಗೆ ಸಾಧ್ಯವಾಗಲಿದೆ. ಅತ್ಯಂತ ಕನಿಷ್ಠ ತಾಪಮಾನದ ಈ ಭಾಗದಲ್ಲಿ ಇದುವರೆಗೆ ಭಾರತೀಯ ಸೇನೆ ಕಷ್ಟಪಡುತ್ತಿತ್ತು. ನಿರ್ಮಾಣ ಮುಗಿದ ಮೇಲೆ ಆ ರಗಳೆ ಇರುವುದಿಲ್ಲ.

ಮುನ್ಸಿಯಾರಿ ಭಾಗದಿಂದ ಈಗಾಗಲೇ 25 ಕಿ.ಮೀ. ರಸ್ತೆ ನಿರ್ಮಾಣ ಮುಗಿದಿದೆ. ಮಿಲಮ್‌ ಭಾಗದಲ್ಲಿ 9 ಕಿ.ಮೀ. ನಿರ್ಮಾಣವಾಗಿದೆ. ಇನ್ನೂ 15 ಕಿ.ಮೀ. ನಿರ್ಮಾಣ ಕಠಿನ ಹೆಬ್ಬಂಡೆಗಳಿರುವ ಪರ್ವತಪ್ರದೇಶದಲ್ಲಿ ಆಗುತ್ತಿರುವ ಕಾರಣ ತಡವಾಗಿದೆ. ಅಲ್ಲದೇ ಕಳೆದ  ವರ್ಷ ಕೊರೊನಾ ಲಾಕ್‌ಡೌನ್‌ನಿಂದಲೂ ನಿರ್ಮಾಣ ತಡವಾಗಿದೆ ಎಂದು ಬಿಆರ್‌ಒ ಮಾಹಿತಿ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next