Advertisement

ಕಿವೀಸ್ ಮೇಲೆರೆಗಿದ ಸ್ಟಾರ್ಕ್: ಸೆಮೀಸ್ ಸಂಕಷ್ಟದಲ್ಲಿ ವಿಲಿಯಮ್ಸನ್ ಪಡೆ

11:44 AM Jun 30, 2019 | keerthan |

ಲಾರ್ಡ್ಸ್: ಘಾತಕ ವೇಗಿ ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್ ಗೆ ಕಿವೀಸ್ ವಿಲವಿಲ ಒದ್ದಾಡಿದೆ. ಶನಿವಾರ ನಡೆದ ಇನ್ನೊಂದು ಪಂದ್ಯದಲ್ಲಿ ಆಸೀಸ್ 86 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

Advertisement

ಕ್ರಿಕೆಟ್ ಕಾಶಿ ಲಾರ್ಡ್ಸನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿದರು. ಆದರೆ ನಿರೀಕ್ಷಿತ ಆರಂಭ ಸಿಗಲಿಲ್ಲ. 92 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಕಾಂಗರೂಗಳಿಗೆ ನೆರವಾಗಿದ್ದು ಉಸ್ಮಾನ್ ಖ್ವಾಜಾ ಮತ್ತು ಕೀಪರ್ ಅಲೆಕ್ಸ್ ಕ್ಯಾರಿ. ಖ್ವಾಜಾ 88 ರನ್ ಗಳಿಸಿದರೆ, ಕ್ಯಾರಿ 71 ರನ್ ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಮತ್ತೆ ಕೊನೆಯಲ್ಲಿ ಬೌಲ್ಟ್ ಮಾರಕ ದಾಳಿಗೆ ಬೆಚ್ಚಿದ ಆಸೀಸ್ 243 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು. ಬೌಲ್ಟ್ ಹ್ಯಾಟ್ರಿಕ್ ಪಡೆದು ಮಿಂಚಿದರು.

ಸ್ಟಾರ್ಕ್ ಸ್ಪಾರ್ಕ್
ಸಾಧಾರಣ ಮೊತ್ತ ಬೆನ್ನತ್ತಿದ ಕಿವೀಸ್ ಕಿವೀಸ್ ಕೂಡಾ ಉತ್ತಮ ಆರಂಭ ಪಡೆಯುಲಿಲ್ಲ. ತಂಡದ ಮೊತ್ತ 29 ಆಗುತ್ತಿದ್ದಂತೆ 8 ರನ್ ಗಳಿಸಿದ್ದ ಹೆನ್ರಿ ನಿಕೋಲ್ಸ್ ಔಟಾದರು. ನಾಯಕ ವಿಲಿಯಮ್ಸನ್ ಮತ್ತು ಅನುಭವಿ ರಾಸ್ ಟೇಲರ್ ಉತ್ತಮ ಆಟವಾಡಿದರು. ಕೆನ್ 40 ಮತ್ತು ಟೇಲರ್ 30 ರನ್ ಗಳಿಸಿದರು. ಆದರೆ ನಂತರ ನಡೆದಿದ್ದು ಸ್ಟಾರ್ಕ್ ಮ್ಯಾಜಿಕ್.

ಕೇವಲ 26 ರನ್ ಗಳನ್ನು ನೀಡಿ ಐದು ವಿಕೆಟ್ ಪಡೆದ ಸ್ಟಾರ್ಕ್, ಕಿವೀಸ್ ಅನ್ನು ಹೀನಾಯ ವಾಗಿ ಸೋಲುವಂತೆ ಮಾಡಿದರು. ವಿಲಿಯಮ್ಸನ್ ಪಡೆ 157 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡರೆ, ಆಸೀಸ್ 86 ರನ್ ಗಳ ಜಯ ಸಾಧಿಸಿತು.

11 ಅಂಕ ಹೊಂದಿದ್ದರೂ ಸೆಮಿ ಫೈನಲ್ ಗೆ ಇನ್ನು ಎಂಟ್ರಿ ನೀಡದ ಕಿವೀಸ್ ಗೆ ಇನ್ನೊಂದು ಪಂದ್ಯ ಮಾತ್ರ ಉಳಿದಿರುವುದು. ಅದು ಕೂಡ ಇಂಗ್ಲೆಂಡ್ ವಿರುದ್ಧ. ಸೆಮಿ ಫೈನಲ್ ತಲುಪಬೇಕಾದರೆ ಇಬ್ಬರಿಗೂ ಆ ಪಂದ್ಯ ಗೆಲ್ಲಲೇ ಬೇಕಾದ ಒತ್ತಡವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next