Advertisement
ಲಕ್ಷ್ಮೀ ಅಗರವಾಲ್. ದೆಹಲಿಯ ಮಧ್ಯಮ ಕುಟುಂಬದಲ್ಲಿ ಹುಟ್ಟಿದ ಲಕ್ಷ್ಮೀ ಸಣ್ಣ ವಯಸ್ಸಿನಿಂದಲೇ ಪುಸ್ತಕದ ಅಂಗಡಿಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡು ಹಣ ಸಂಪಾದಿಸಲು ಆರಂಭಿಸುತ್ತಾಳೆ. ಮುಂದೊಂದು ದಿನ ತಾನು ಒಬ್ಬ ಹಾಡುಗಾರ್ತಿ ಆಗಬೇಕೆನ್ನುವ ಕನಸು ಹೊತ್ತುಕೊಂಡಿದ್ದ ಲಕ್ಷ್ಮೀ ಅದಕ್ಕಾಗಿ ತನ್ನದೇ ರೀತಿಯಲ್ಲಿ ತಯಾರಿಯನ್ನು ನಡೆಸಿಕೊಂಡು ಇರುತ್ತಾಳೆ.
Related Articles
Advertisement
ಲಕ್ಷ್ಮೀ ಎರಡು ತಿಂಗಳು ತನ್ನ ಮುಖವನ್ನು ಮುಟ್ಟದೇ ಆಸ್ಪತ್ರೆಯ ಬೆಡ್ ನಲ್ಲಿ ತನಗಾದ ಆಘಾತದ ಭೀಕರತೆಯನ್ನು ನೆನೆಯುತ್ತಾ ಇರುತ್ತಾಳೆ. ಆಸ್ಪತ್ರೆಯಿಂದ ಮನೆಗೆ ಬಂದ ಮಗಳಿಗೆ ಮನೆಯಲ್ಲಿ ಒಂದೇ ಒಂದು ಕನ್ನಡಿಯನ್ನು ಇಟ್ಟುಕೊಳ್ಳದೇ ಪೋಷಕರು ನೋಡಿಕೊಳ್ಳುತ್ತಾರೆ.
ನೋವು ಮಾಸಲು ನ್ಯಾಯದ ಮೆಟ್ಟಿಲು ಹತ್ತಿದ ಲಕ್ಷ್ಮೀ : ಆ್ಯಸಿಡ್ ನಿಂದ ಕಳೆದುಕೊಂಡ ಅಂದ ಮಾಸಿದ ಮುಖವನ್ನು ಜನ ನೋಡಲು ಭಯ ಪಡುತ್ತಿದ್ದರು. ಮಕ್ಕಳು ಹೆದರುತ್ತಾರೆ ಹೊರಗೆ ಬರಬೇಡ ಅನ್ನುವ ಉಪದೇಶ, ಹೀಗೆ ಎಲ್ಲಾ ಬಗೆಯ ಅವಮಾನವನ್ನು ಸಹಿಸಿಕೊಂಡು ಕೊನೆಗೆ ಮೌನ ಸ್ಫೋಟಗೊಂಡ ಮನಸ್ಸಿನ ನಿರ್ಧಾರವನ್ನು 2005 ರಲ್ಲಿ ಸುಪ್ರೀಂಕೋರ್ಟ್ ನಲ್ಲಿ ಪಿ.ಐ.ಎಲ್ ಸಲ್ಲಿಸಿ ಭಾರತದಲ್ಲಿ ಆ್ಯಸಿಡ್ ಮಾರಾಟ ಮಾಡಬಾರದು ಎನ್ನುವ ಮನವಿಯನ್ನು ಮಾಡುತ್ತಾರೆ.
ಈ ಪಿ.ಐ.ಎಲ್ ಚರ್ಚೆ ಸುದೀರ್ಘವಾಗಿ ನಡೆದು 2013 ರಲ್ಲಿ ಸುಪ್ರೀಂಕೋರ್ಟ್ ಆ್ಯಸಿಡ್ ಮಾರಾಟದ ಬಗ್ಗೆ ಕಠಿಣ ನಿಬಂಧನೆಯನ್ನು ಹಾಕುತ್ತದೆ ಜೊತೆಗೆ ಲಕ್ಷ್ಮೀ ಗೆ ಈ ದುರ್ಗತಿಯನ್ನು ಮಾಡಿದ ವ್ಯಕ್ತಿಗಳನ್ನು ಜೈಲು ಶಿಕ್ಷೆಯನ್ನು ನೀಡುತ್ತದೆ. ಇದು ಲಕ್ಷ್ಮೀ ಗೆಲ್ಲುವುದಕ್ಕೆ ಸಾಕಿತ್ತು. ಆದರೆ ಲಕ್ಷ್ಮೀಗೆ ಬೇಕಿದದ್ದು ತಾನು ಈ ರೀತಿಯಾದ್ರೆ ತನ್ನ ಹಾಗೆ ಇರುವ ಇಂಥವರನ್ನು ಧೈರ್ಯ ತುಂಬಬೇಕು ಸಮಾಜಕ್ಕೆ ನಾವು ಮಾದರಿ ಆಗಿ ನಿಲ್ಲಬೇಕೆನ್ನುವ ಹಟ.
ಬೀದಿಗಿಳಿದ ಸಂತ್ರಸ್ತರ ದನಿ : ಲಕ್ಷ್ಮೀ ತನ್ನ ಜೊತೆಗಾದ ಕೃತ್ಯಕ್ಕೆ ಸಮಾಜದಲ್ಲಿ ಇನ್ಯಾರು ಇದನ್ನು ಅನುಭವಿಸಬಾರದೆನ್ನುವ ನಿರ್ಧಾರದದಿಂದ ‘ ಸ್ಟಾಪ್ ಆ್ಯಸಿಡ್ ಅಟ್ಯಾಕ್’ ಹಾಗೂ ‘ಸ್ಟಾಪ್ ಸೇಲ್ ಆ್ಯಸಿಡ್’ ಎನ್ನುವ ಅಭಿಯಾನವನ್ನು ಆ್ಯಸಿಡ್ ದಾಳಿ ಪೀಡಿತರೊಂದಿಗೆ ಶುರು ಮಾಡುತ್ತಾರೆ. ನೋಡ ನೋಡುತ್ತಿದ್ದಂತೆ ಇವರ ಒಂದು ಕರೆಗೆ ನೂರಾರು ಜನರ ಬೆಂಬಲ ಸಿಗುತ್ತದೆ. ಶಾಲಾ- ಕಾಲೇಜಿನ ಆವರಣದಲ್ಲಿ ಈ ಅಭಿಯಾನಕ್ಕೆ ಅಪಾರ ಬೆಂಬಲ ಸಿಗುತ್ತದೆ.
ಇದೇ ಸಮಯದಲ್ಲಿ ಲಕ್ಷ್ಮೀಯ ತಮ್ಮ ರಾಹುಲ್ ಅಗರವಾಲ್ ಟಿಬಿ ಕಾಯಿಲೆಯಿಂದ ಬಳಲುತ್ತಾನೆ. ಇದರ ಆಘಾತದಿಂದ ಲಕ್ಷ್ಮೀಯ ತಂದೆ ಹೃದಯಘಾತದಿಂದ ಇಹಲೋಕ ತ್ಯಜಿಸುತ್ತಾರೆ. ನಂತರ ವೈದ್ಯರ ಹೇಳಿಕೆಯಂತೆ ಲಕ್ಷ್ಮೀಯ ತಮ್ಮ ಕೆಲವೇ ವರ್ಷದಲ್ಲಿ ಸಾವನ್ನಪ್ಪುತ್ತಾನೆ. ಈ ನೋವುಗಳಿಂದ ಬೇಸತ್ತ ಲಕ್ಷ್ಮೀ ಬ್ಯೂಟಿಷಿಯನ್ ಕೆಲಸಕ್ಕೆ ಹೋಗಿ ಹಣಗಳಿಸಲು ಆರಂಭಿಸುತ್ತಾಳೆ. ಸತ್ತ ತನ್ನ ಅಂದವನ್ನು ಮರೆತು ಇನ್ನೊಬ್ಬರ ಅಂದಕ್ಕೆ ಕನ್ನಡಿಯಾಗುವ ಕಾಯಕವನ್ನು ಮಾಡುತ್ತಾಳೆ.
ಮುನ್ನುಗ್ಗಿದ ದಿಟ್ಟೆ : ಲಕ್ಷ್ಮೀ ತನ್ನ ನೋವಿನಗಾಥೆಯನ್ನು, ಹೋರಾಡಿದ ದಿನವನ್ನು, ಅನುಭವನ್ನು ಖಾಸಗಿ ವಾಹಿನಿಯೊಂದರ ‘ಉಡಾನ್’ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುತ್ತಾರೆ ಜೊತೆಗೆ ಆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಟೆಡ್ ಎಕ್ಸ್, ದೂರದರ್ಶನ ಹಾಗೂ ಇತರ ಕಡೆಯಲ್ಲಿ ಲಕ್ಷ್ಮೀಯ ಸಂದರ್ಶನಗಳು ಪ್ರಸಾರವಾಗಿದೆ. ತನ್ನ ಜೀವನದ ಹೋರಾಟವನ್ನು ಲಕ್ಷ್ಮೀ ಯಾವ ಮುಚ್ಚು ಮರೆ ಇಲ್ಲದೆ ಮುಕ್ತವಾಗಿ ಹೇಳಿಕೊಂಡು ಸ್ಪೂರ್ತಿಯ ಮಾದರಿ ಆಗುತ್ತಾರೆ.
2014 ರ ವೇಳೆ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಅಲೋಕ್ ದೀಕ್ಷಿತ್ ಜೊತೆಗಿನ ಸ್ನೇಹ ಆತ್ಮೀಯವಾಗಿ ಬೆರೆಯುತ್ತದೆ. ಮದುವೆ ಆಗುವ ನಿರ್ಧಾರ ಮಾಡಿದ್ದರೂ ಅದರಿಂದ ದೂರ ಉಳಿದು ಲಿವಿಂಗ್ ರಿಲೇಶನ್ ಶೀಪ್ ನಲ್ಲಿ ಜೊತೆ ಆಗಿ ಇರುತ್ತಾರೆ. 2015 ರಲ್ಲಿ ಈ ಇಬ್ಬರಿಗೆ ಒಂದು ಹೆಣ್ಣು ಮಗು ಹುಟ್ಟುತ್ತದೆ. ಇಬ್ಬರೂ ಜತೆಗೂಡಿ ‘ಚಾವ್’ ಫೌಂಡೇಷನ್ ಎನ್ನುವ ಆ್ಯಸಿಡ್ ಪೀಡಿತರಿಗೆ ಧ್ವನಿಯಾಗುವ ಸಂಸ್ಥೆಯನ್ನು ಸ್ಥಾಪಿಸುತ್ತಾರೆ.
ಮುಖದ ಮೇಲಿನ ಕಲೆ, ಧೈರ್ಯದ ನೆಲೆ ಆಯಿತು : ಲಕ್ಷ್ಮೀ ತನ್ನ ಹೋರಾಟದ ಧ್ವನಿಯಿಂದ ಜಗತ್ತಿಗೆ ಪರಿಚಯವಾಗುತ್ತಾಳೆ. 2014 ರಲ್ಲಿ ಅಮೇರಿಕಾದ ಮಿಶೆಲ್ ಒಬಾಮಾ, ಲಕ್ಷ್ಮೀ ಅವರಿಗೆ ಧೈರ್ಯವಂತ ಮಹಿಳೆ ಎನ್ನುವ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಾರೆ. ನಾನಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಲಕ್ಷ್ಮೀ 2016 ರಲ್ಲಿ ಲಂಡನ್ ಫ್ಯಾಶನ್ ವೀಕ್ ನಲ್ಲಿ ವೇದಿಕೆ ಮೇಲೆ ಹೆಜ್ಜೆ ಇಡುತ್ತಾರೆ. ಪ್ರಸ್ತುತ ಇವರ ಜೀವನ ಆಧಾರಿತದ ಮೇಲೆ ಬಾಲಿವುಡ್ ನಿರ್ದೇಶಕಿ ಮೇಘಾನ ಗುಲ್ಜಾರ್ ‘ ಚಪಾಕ್’ ಎನ್ನುವ ಚಿತ್ರವನ್ನು ಮಾಡಲು ರೆಡಿ ಆಗಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು.
-ಸುಹಾನ್ ಶೇಕ್