Advertisement

ಬಳಕೆಯಾಗದ ಕೋಟಿ ವೆಚ್ಚದ ಸಿಮ್ಯುಲೇಟರ್‌

07:09 PM Sep 19, 2021 | Team Udayavani |

ವರದಿ: ಹೇಮರಡ್ಡಿ ಸೈದಾಪುರ

Advertisement

ಹುಬ್ಬಳ್ಳಿ: ಚಾಲಕರಿಗೆ ವೈಜ್ಞಾನಿಕವಾಗಿ ಚಾಲನಾ ತರಬೇತಿ ನೀಡುವುದಕ್ಕಾಗಿ ವಾಯವ್ಯ ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಸ್ಥಾಪಿಸಿರುವ ಚಾಲನಾ ಸಿಮ್ಯುಲೇಟರ್‌ ಬಳಕೆ ಸ್ಥಗಿತಗೊಂಡಿದೆ. ಜಾಗತಿಕ ಮಟ್ಟದ ಅತ್ಯಾಧುನಿಕ ಸಿಮ್ಯುಲೇಟರ್‌ ಇದಾಗಿದ್ದು, ಖರೀದಿ ಹಾಗೂ ಆರಂಭಕ್ಕೆ ತೋರಿದ ಕಾಳಜಿ ವಾರ್ಷಿಕ ನಿರ್ವಹಣೆಗೆ ಕೊರತೆ ಹಾಗೂ ಗೊಂದಲದ ಪರಿಣಾಮ ಕೋಟ್ಯಂತರ ರೂ. ವೆಚ್ಚದ ವ್ಯವಸ್ಥೆ ಚಾಲಕರಿಗೆ ದೊರೆಯದಂತಾಗಿದೆ.

ಸಂಸ್ಥೆಯ ಚಾಲಕರಿಗೆ ಉತ್ತಮ ಚಾಲನಾ ತರಬೇತಿ ನೀಡಬೇಕೆನ್ನುವ ಕಾರಣದಿಂದ ನಗರದ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಸುಮಾರು 1.20 ಕೋಟಿ ರೂ.ವೆಚ್ಚದ ವಿಶ್ವದರ್ಜೆಯ ಸಿಮ್ಯುಲೇಟರ್‌ ಅಳವಡಿಸಲಾಗಿದೆ. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಪೈಕಿ ಕೆಎಸ್‌ಆರ್‌ಟಿಸಿ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಮಾತ್ರ ಹೊಂದಿದ್ದು, ಇದನ್ನು ಹೊಂದಿರುವ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಪೈಕಿ ಕೆಲವು ಮಾತ್ರ. ಈ ಯಂತ್ರದ ಮೂಲಕ ಚಾಲಕರಿಗೆ ಉತ್ತಮ ತರಬೇತಿ, ಚಾಲಕನ ಚಾಲನಾ ಕೌಶಲವನ್ನು ಅಂಕಿ-ಅಂಶಗಳ ಮೂಲಕ ಗುರುತಿಸಬಹುದಾಗಿದೆ. ಇಂತಹ ವ್ಯವಸ್ಥೆಯನ್ನು ಸದ್ಭಳಕೆ ಮಾಡಿಕೊಳ್ಳುವ ಬದಲು ವಾರ್ಷಿಕ ನಿರ್ವಹಣೆ ಕೊರತೆ ಮತ್ತು ಯಾರು ನಿರ್ವಹಣೆ ಮಾಡಬೇಕು. ಇದು ಯಾರ ಆಸ್ತಿ ಎನ್ನುವ ಗೊಂದಲದಿಂದ ಸ್ಥಗಿತಗೊಂಡಿದೆ.

ಸುಮಾರು ಆರು ವರ್ಷಗಳ ಹಿಂದೆ ಚಾಲಕರಿಗೆ ರಕ್ಷಣಾತ್ಮಕ ಚಾಲನಾ ಕೌಶಲ್ಯದ ಬಗ್ಗೆ ತರಬೇತಿ ನೀಡುವ ಚಿಂತನೆಯನ್ನು ಕೆಎಸ್‌ಆರ್‌ಟಿಸಿಯ ಅಂದಿನ ವ್ಯವಸ್ಥಾಪಕ ನಿರ್ದೇಶಕರು ಹೊಂದಿದ್ದರು. ವಿಶ್ವಬ್ಯಾಂಕ್‌ ನೆರವಿನೊಂದಿಗೆ ಹಾಸನ-ಹುಬ್ಬಳ್ಳಿಯಲ್ಲಿ ಸ್ಥಾಪಿಸುವ ಪ್ರಸ್ತಾವನೆಯಿತ್ತು. ಆದರೆ ಇಷ್ಟೊಂದು ಮೊತ್ತದ ಸಿಮ್ಯುಲೇಟರ್‌ ಖರೀದಿಸಲು ಆರ್ಥಿಕ ಸಮಸ್ಯೆಯಿಂದ ವಾಯವ್ಯ ಸಾರಿಗೆ ಸಂಸ್ಥೆ ಹಿಂದೇಟು ಹಾಕಿತ್ತು. ಆದರೆ, ಆದಾಗಲೇ ಬಿಆರ್‌ಟಿಎಸ್‌ ಯೋಜನೆಯಲ್ಲಿ ಪ್ರಗತಿಯಲ್ಲಿದ್ದ ಪರಿಣಾಮ ಸ್ಥಳೀಯ ಸಾರಿಗೆ ಅಭಿವೃದ್ಧಿ ಯೋಜನೆಯ ನಿಧಿಯಡಿ ಇದನ್ನು ಖರೀದಿಸಿ ತರಬೇತಿ ಕೇಂದ್ರದಲ್ಲಿ 2018 ರಲ್ಲಿ ಅಳವಡಿಸಿದ್ದರು. ಒಂದು ವರ್ಷದ ನಂತರ ಇದರ ಬಳಕೆಗೆ ಅಷ್ಟಕ್ಕಷ್ಟೇ ಸೀಮಿತವಾಗಿ ಇದೀಗ ಸ್ಥಗಿತಗೊಂಡಿದೆ. ನಂತರ ಕೋವಿಡ್‌ ಹಿನ್ನೆಲೆಯಲ್ಲಿ ಇಲ್ಲೊಂದು ವ್ಯವಸ್ಥೆಯಿದೆ ಎಂಬುದೇ ಮರೆತು ಹೋದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next