ಬಾಗಲಕೋಟೆ: ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಜಿಲ್ಲೆಯ ಮಹಾಲಿಂಗಪುರದಲ್ಲಿ ಹಲವು ಮನೆಗಳ ಛಾವಣಿ ಶೀಟ್ ಗಳು ಹಾರಿ, ಕೆಲವು ಮನೆಗಳ ಮೇಲೆ ಮರ ಬಿದ್ದು ಜನರ ಬದುಕು ಜನರ ಬದುಕು ಬೀದಿಗೆ ಬಂದಿದೆ.
ಮಹಾಲಿಂಪುರದಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮಹಿಳೆ ಸೇರಿ ನಾಲ್ಕೈದು ಜನರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾಲಿಂಗಪೂರ ಪಟ್ಟಣದ ಕೆಂಗೇರಿ ಮಡ್ಡಿ ಓಣಿಯಲ್ಲಿ ಮಳೆಯಿಂದ ಅಪಾರ ಹಾನಿಯಾಗಿದ್ದು, ಅದೃಷ್ಟವಶಾತ್ ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಾವರ್ ಲೂಮ್ ಮಗ್ಗಗಳು, ಸೀರೆ, ಕಚ್ಚಾ ವಸ್ತುಗಳು ಸೇರಿ ನೇಕಾರಿಕೆ ವಸ್ತುಗಳು ಹಾನಿಗೊಂಡಿವೆ. ಪರಿಣಾಮವಾಗಿ ಕೆಂಗೇರಿ ಮಡ್ಡಿ ಓಣಿಯ ಜನರ ಬದುಕು ಅತಂತ್ರವಾಗಿದೆ.
Related Articles
ಮಳೆಯಿಂದ ಹಾನಿಗೆ ಒಳಗಾದ ಜನತೆಗೆ ತಕ್ಷಣ ಸರ್ಕಾರ ಪರಿಹಾರ ನೀಡುವಂತೆ ಜನ ಒತ್ತಾಯಿಸಿದ್ದಾರೆ.
ಘಟನೆ ಸ್ಥಳಕ್ಕೆ ತಹಶೀಲ್ದಾರ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.