Advertisement

ಮೌಡ್ಯಕ್ಕೆ ಕಟ್ಟು ಬೀಳುವುದು ನಿಲ್ಲಲಿ

09:26 AM Jan 16, 2019 | |

ಬೀದರ: ದೇವಾಲಯದ ಮುಂದೆ ನಿಲ್ಲುವ ನಮ್ಮ ಹೆಣ್ಣುಮಕ್ಕಳ ಸಾಲು ಯಾವತ್ತು ಗ್ರಂಥಾಲಯದ ಮುಂದೆ ನಿಲ್ಲುತ್ತದೆಯೋ ಅವತ್ತು ನಮ್ಮ ದೇಶ ಮುಂದುವರೆದಂತೆ ಎಂದು ಡಾ| ಅಂಬೇಡ್ಕರ್‌ ಅವರು ಹೇಳಿರುವ ಮಾತನ್ನು ಯುವಕರು ಅರಿಯಬೇಕು ಎಂದು ಚಿತ್ರಕಲಾ ಶಿಕ್ಷಕ ಶ್ರೀಕಾಂತ ಬಿರಾದಾರ ಹೇಳಿದರು.

Advertisement

ನಗರದಲ್ಲಿ ಜನಪ್ರಿಯ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ವೈಚಾರಿಕತೆ ಉಪನ್ಯಾಸ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮೂಢನಂಬಿಕೆಗಳಿಗೆ ಬಲಿಯಾಗದಂತೆ ಶಾಲಾ ಶಿಕ್ಷಕರು ಹಾಗೂ ಪಾಲಕರು ಎಚ್ಚರಿಕೆ ವಹಿಸಬೇಕು. ಇಂದಿನ ವಿದ್ಯಾರ್ಥಿಗಳು ನಮ್ಮ ಹಳೆಯ ಸಂಪ್ರದಾಯಗಳಿಗೆ ದಾಸರಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಇಂದಿನ ಶಿಕಕ್ಷ ಮತ್ತು ಪಾಲಕರ ಮೇಲಿದ್ದು, ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕು ಎಂದು ಹೇಳಿದರು.

ಸಾಹಿತಿ ಹಣಮಂತಪ್ಪ ವಲ್ಲೆಪೂರೆ ಮಾತನಾಡಿ, ನಾವು ನಮ್ಮ ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ನೀಡುವ ಕೆಲಸ ಮಾಡಬೇಕು. ಜೊತೆಗೆ ವಿಜ್ಞಾನ ಮತ್ತು ವೈಚಾರಿಕ ನಿಲುವುಗಳನ್ನು ಮನದಟ್ಟಾಗುವಂತೆ ತಿಳಿಸಬೇಕು. ಪಠ‌್ಯಕ್ರಮದ ಜೊತೆಗೆ ಸಾಮಾಜಿಕ ಚಿಂತನೆ, ನಾಡ ಪ್ರೇಮ, ದೇಶ ಪ್ರೇಮವೂ ಬೆಳೆಸುವಂತೆ ಪ್ರೇರಣೆ ನೀಡಬೇಕು. ಅಲ್ಲದೆ ಮೌಡ್ಯಕ್ಕೆ ಅಂಟಿಕೊಳ್ಳದಂತೆ ಜಾಗೃತಿ ವಹಿಸಬೇಕು. ಶಿಕ್ಷಕ ಮತ್ತು ಪಾಲಕರಾದವರು ಮಕ್ಕಳಲ್ಲಿ ಸಮಾಜಮುಖೀಯಾದ‌ ಚಿಂತನೆಗಳನ್ನು ತುಂಬುತ್ತ ಅವರು ದಾರಿ ತಪ್ಪದಂತೆ ನೊಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜನಪ್ರಿಯ ಟ್ರಸ್ಟ್‌ನ ಅಧ್ಯಕ್ಷ ನಾಗಶೆಟ್ಟಿ ಪಾಟೀಲ ಗಾದಗಿ ಮಾತನಾಡಿ, ಮೂಢನಂಬಿಕೆ ಮತ್ತು ಅಂಧಾಚರಣೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಮನೆ ಮಾಡಿರುವ ಭಯ ಮಿಶ್ರಿತ ವಾತಾವರಣವನ್ನು ಮೊದಲು ತಿಳಿಗೊಳಿಸಬೇಕು. ಹಾಗಾದಾಗ ಮಾತ್ರ ಅವರಲ್ಲಿ ಬೇರು ಬಿಟ್ಟಿರುವ ಮೌಢ್ಯಾಚರಣೆಗಳ ಅಜ್ಞಾನದ ಕತ್ತಲು ಸರಿದು ಜ್ಞಾನದ ಬೆಳಕು ಚೆಲ್ಲಲ್ಲು ಸಾಧ್ಯವಾಗುತ್ತದೆ ಎಂದರು. ಪರೀಕ್ಷೆ ಬರೆಯಲು ಹೋಗುವಾಗ ಚೆನ್ನಾಗಿ ಓದಿಕೊಳ್ಳದೇ ಹರಕೆ ಹೊತ್ತು ಹೋಗುವ ರೂಢಿ ಬದಲಾಗಬೇಕು. ಮೌಡ್ಯ, ಕಂದಾಚಾರ ಸೇರಿದಂತೆ ವಿಭಿನ್ನ ರೀತಿಯ ಹಲವಾರು ಕಾರ್ಯಕ್ರಮ, ಉಪನ್ಯಾಸಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಏರ್ಪಡಿಸುವುದಾಗಿ ಹೇಳಿದರು.

Advertisement

ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶಾಮರಾವೆ ನೆಲವಾಡೆ ಮಾತನಾಡಿ, ಮಕ್ಕಳಲ್ಲಿ ಅಷ್ಟೇ ಅಲ್ಲ ಪಾಲಕ, ಪೋಷಕರಲ್ಲಿಯೂ ಸಹ ಮೂಢನಂಬಿಕೆಗಳು ಸಾಕಷ್ಟಿವೆ. ನಾವು ಸಹ ಇನ್ನೂ ಸಂಪೂರ್ಣವಾಗಿ ಮೂಢಾಚರಣೆಗಳಿಂದ ಹೊರ ಬಂದಿಲ್ಲ. ಒಂದು ಕ್ಷಣ ನಾವೇ ಆತ್ಮಾವಲೋಕನ ಮಾಡಿಕೊಂಡು ಬದಲಾವಣೆಗೆ ಮುನ್ನಡಿ ಬರೆಯಬೇಕು ಎಂದರು.

ರಾಜಕುಮಾರ ಮಡಕಿ, ಗೋಪಾಲರೆಡ್ಡಿ, ಸುರೇಶ ಕುಲಕರ್ಣಿ, ಮಚೇಂದ್ರ, ಓಂಕಾರ ಪಾಟೀಲ, ರಾಜಕುಮಾರ ಉದಗಿರೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next