Advertisement

ಧೂಮಪಾನ ವಿರುದ್ಧ ಆ್ಯಪ್‌ನಲ್ಲೇ ದೂರು ನೀಡಿ

01:42 PM Mar 01, 2023 | Team Udayavani |

ಬೆಂಗಳೂರು: ಆರೋಗ್ಯ ಸಚಿವರ ನಿರ್ದೇಶನದ ಮೇರೆಗೆ “ಸ್ಟಾಪ್‌ ಟೊಬ್ಯಾಕೋ ಆ್ಯಪ್‌’ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್‌ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರ ವಿರುದ್ಧ ದೂರು ನೀಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್‌ ತಿಳಿಸಿದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಹಾಗೂ ರಾಜ್ಯ ತಂಬಾಕು ಘಟಕವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ತಂಬಾಕು ಮುಕ್ತ ತಲೆಮಾರು-ಮಾಧ್ಯಮ ಕಾರ್ಯಾಗಾರ’ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ, ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಕಂಡು ಬಂದರೆ ಈ ಕುರಿತು ಫೋಟೋ ತೆಗೆದು “ಸ್ಟಾಪ್‌ಟೊಬ್ಯಾಕೋ’ ಆ್ಯಪ್‌ಗೆ ಕಳುಹಿಸಬಹುದು. ಬಳಿಕ ಸಂಬಂಧಿತ ಜಿಲ್ಲಾ ಮತ್ತು ತಾಲೂಕು ಮಟ್ಟದ ತನಿಖಾ ತಂಡವು ದೂರು ತಲುಪಿದ 6 ದಿನದೊಳಗೆ ಆ್ಯಪ್‌ನಲ್ಲಿ ಫೋಟೊ ತೆಗೆದಿರುವ ನಿರ್ದಿಷ್ಟ ಪ್ರದೇಶಕ್ಕೆ ಭೇಟಿ ನೀಡಲಿದೆ. ಸಂಬಂಧಿಸಿದ ವ್ಯಕ್ತಿಗಳಿಗೆ ಕೋಟ್ಪಾ ನಿಯಮಾನುಸಾರ ದಂಡ ವಿಧಿಸಿ ಮನವರಿಕೆ ಮಾಡಲಿದೆ. ಬಳಿಕ ಪ್ರಕರಣದ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಆ್ಯಪ್‌ ನಿಯಂತ್ರಣ ಕೊಠಡಿಯಿಂದ ದೂರುದಾರರಿಗೆ ಸಂದೇಶ ಹೋಗಲಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ತಂಬಾಕು ಉತ್ಪನ್ನ ಸೇವನೆ ಹಾಗೂ ಮಾರಾಟಕ್ಕೆ ನಿಯಮಗಳಿವೆ. ಆದರೆ, ಆ ನಿಯಮಗಳು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ಬರುವಂತೆ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಕೆಲವು ಗ್ರಾಮಗಳು ತಂಬಾಕು ಮುಕ್ತವಾಗಿರು ವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಹುಕ್ಕಾಬಾರ್‌ ವಿರುದ್ಧ ಕ್ರಮ: ಹೊಸದಾಗಿ ತಲೆ ಎತ್ತುತ್ತಿರುವ ಹುಕ್ಕಾಬಾರ್‌ಗಳ ಬಗ್ಗೆ ದೂರುಗಳು ಬಂದಿವೆ. ಅಪ್ರಾಪ್ತರು ಹುಕ್ಕಾಬಾರ್‌ಗೆ ಅನಧಿಕೃತವಾಗಿ ಹೋಗುತ್ತಿರುವ ಸುಳಿವು ಸಿಕ್ಕಿದೆ. ಹೀಗಾಗಿ ಬಿಬಿಎಂಪಿ ಸಹಯೋಗದೊಂದಿಗೆ ಮೊದಲು ಬೆಂಗಳೂರು ಹಾಗೂ ತದ ನಂತರ ರಾಜ್ಯಾದ್ಯಂತ ಹುಕ್ಕಾಬಾರ್‌ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ತಿಳಿಸಿದರು. ವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣ್‌ ಕುಮಾರ್‌, ಆರೋಗ್ಯ ಇಲಾಖೆಯ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಡಾ.ಸೆಲ್ವರಾಜನ್‌ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಅರ್ಧಕ್ಕರ್ಧ ಮಂದಿ ತಂಬಾಕು ಉತ್ಪನ್ನ ಬಳಕೆದಾರರು! : ಕರ್ನಾಟಕದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯ ಪೈಕಿ 3 ಕೋಟಿ ಮಂದಿ ತಂಬಾಕು ಉತ್ಪನ್ನ ಬಳಸುತ್ತಾರೆ. ಶೇ.22.8 ವಯಸ್ಕರ ಪೈಕಿ ಶೇ.8.8 ಧೂಮಪಾನಿಗಳು, ಶೇ.16.3 ಇತರ ತಂಬಾಕು ಉತ್ಪನ್ನ ಬಳಕೆದಾರರಿದ್ದಾರೆ. ತಂಬಾಕು ಬಳಕೆಯು ಕ್ಯಾನ್ಸರ್‌, ಶ್ವಾಸಕೋಶ, ಪಿತ್ತಕೋಶ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣಾವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಏನಿದು “ಸ್ಟಾಪ್‌ಟೊಬ್ಯಾಕೋ’ ಆ್ಯಪ್‌? : ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿರುವ ಪ್ಲೇಸ್ಟೋರ್‌ ನಲ್ಲಿ “ಸ್ಟಾಪ್‌ಟೊಬ್ಯಾಕೋ’ ಆ್ಯಪ್‌ ಅನ್ನು ಯಾರು ಬೇಕಾದರೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಸಾರ್ವಜನಿಕರ ಪ್ರದೇಶಗಳಲ್ಲಿ ಧೂಮಪಾನ ಮಾಡಿದರೆ, ತಂಬಾಕು ಉತ್ಪನ್ನಗಳ ಜಾಹೀರಾತು ನೀಡಿದರೆ, ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಕೊಟ್ಟರೆ, ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡಿದರೆ, ಶಾಲಾ ವಠಾರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ನಿಮ್ಮ ಗಮನಕ್ಕೆ ಬಂದರೆ ಫೋಟೋ ತೆಗೆದು ಈ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿ ದೂರು ನೀಡಬಹುದಾಗಿದೆ.

ಏನಿದು “ಸ್ಟಾಪ್‌ ಟೊಬ್ಯಾಕೋ’ ಆ್ಯಪ್‌?: ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿರುವ ಪ್ಲೇಸ್ಟೋರ್‌ ನಲ್ಲಿ “ಸ್ಟಾಪ್‌ಟೊಬ್ಯಾಕೋ’ ಆ್ಯಪ್‌ ಅನ್ನು ಯಾರು ಬೇಕಾದರೂ ಡೌನ್‌ಲೋಡ್‌ ಮಾಡಿಕೊಳ್ಳಬ ಹುದು. ಸಾರ್ವಜನಿಕರ ಪ್ರದೇಶಗಳಲ್ಲಿ ಧೂಮಪಾನ ಮಾಡಿದರೆ, ತಂಬಾಕು ಉತ್ಪನ್ನಗಳ ಜಾಹೀರಾತು ನೀಡಿದರೆ, ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಕೊಟ್ಟರೆ, ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡಿದರೆ, ಶಾಲಾ ವಠಾರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ನಿಮ್ಮ ಗಮನಕ್ಕೆ ಬಂದರೆ ಫೋಟೋ ತೆಗೆದು ಈ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿ ದೂರು ನೀಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next