Advertisement

ಕೋಲಾರದಲ್ಲಿ ದತ್ತಮಾಲಧಾರಿಗಳಿದ್ದ ಬಸ್ ಮೇಲೆ ಕಲ್ಲು ತೂರಾಟ!

11:18 AM Nov 14, 2021 | Team Udayavani |

ಕೋಲಾರ: ಮದುವೆಗೆ ಬಂದವರ ಗುಂಪುಗಳ ನಡುವೆ ಘರ್ಷಣೆ ನಡೆದು ಅದೇ ಸಮಯಕ್ಕೆ ಅದೇ ರಸ್ತೆಯ ಮೂಲಕ ಬಂದ ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಕೋಲಾರ ನಗರದಲ್ಲಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಜರುಗಿದೆ.

Advertisement

ಚಿಕ್ಕಮಗಳೂರಿನ ಬಾಬಾಬುಡ್ಡನಗಿರಿಯ ದತ್ತಪೀಠಕ್ಕೆ ಹೊರಟಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದು ಕೋಲಾರ ನಗರದಲ್ಲಿ ವಾತಾವರಣ ಬಿಗಿಗೊಳಿಸುವಂತೆ ಮಾಡಿದೆ.

ಶನಿವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಕೋಲಾರದ ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಒಂದು ಮಿನಿ ಬಸ್​ನಲ್ಲಿ ಹೊರಟಿದ್ದರು. ಬಸ್​ನಲ್ಲಿ ಜೈ ಶ್ರೀರಾಮ್​ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿಕೊಂಡು ಹೊರಟಿದ್ದರು.

ಇದನ್ನೂ ಓದಿ:ಗೋ ಮೂತ್ರ, ಸಗಣಿಯಿಂದ ಆರ್ಥಿಕತೆ ಬಲಪಡಿಸಬಹುದು: ಶಿವರಾಜ್ ಸಿಂಗ್ ಚೌಹಾಣ್

ಈ ವೇಳೆ ಕೋಲಾರದ ಕ್ಲಾಕ್​ ಟವರ್​ ಬಳಿಯ ವಿಶಾಲ್​ ಮಾರ್ಟ್​ ಎದುರು ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದು ವಸೀಂ ಬೇಗ್ ಎಂಬುವನಿಗೆ ರೌಡಿ ಶೀಟರ್​ಗಳಾದ ಅಕ್ಬರ್​, ಎಜಾಜ್, ಮತ್ತು ಜುಮ್ಮು ಎಂಬುವವರಿಂದ ಚಾಕು ಇರಿತವಾಗಿತ್ತು.

Advertisement

ಈ ಸಂಬಂಧ ಮೂರು ಜನಕ್ಕೆ ಗಾಯಗಳಾಗಿ ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಸ್ಥಳದಲ್ಲಿ ಮಾತ್ರ ಜನರ ಗುಂಪುಗಳಿತ್ತು. ಈ ವೇಳೆ ಘೋಷಣೆಗಳನ್ನು ಕೂಗುತ್ತಾ ದತ್ತಮಾಲಾಧಾರಿಗಳಿದ್ದ ಬಸ್​ ಅದೇ ಮಾರ್ಗವಾಗಿ ತೆರಳುತ್ತಿತ್ತು. ಆಗ ಅಲ್ಲಿದ್ದ ಕೆಲವು ಕಿಡಿಗೇಡಿಗಳು ಇದ್ದಕ್ಕಿದಂತೆ ಬಸ್​ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಬಸ್​ ಅಡ್ಡಗಟ್ಟಿದ್ದಾರೆ ಈ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದತ್ತಮಾಲಾಧರಿಗಳಿದ್ದ ಬಸ್​ ಅಲ್ಲಿಂದ ತಕ್ಷಣ ಹೊರಟಿತ್ತು ಆದರೂ ಬಸ್​ನಲ್ಲಿದ್ದ ಮೂವರಿಗೆ ಗಾಯಗಳಾಗಿತ್ತು. ಈ ವಿಷಯ ತಿಳಿದ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರಾದರೂ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ದತ್ತಮಾಲಾಧಾರಿಗಳು ಕೋಲಾರ ನಗರ ಠಾಣೆ ಎದುರು ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.

ಅಲ್ಲದೆ ಇಡೀ ನಗರದಾದ್ಯಂತ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು. ನಂತರ ಆರೋಪಿಗಳನ್ನು ಬಂಧಿಸುವ ಭರವಸೆ ಕೊಟ್ಟನಂತರ ಪ್ರತಿಭಟನೆ ಕೈಬಿಟ್ಟ ಪ್ರತಿಭಟನಾಕಾರರು ಬೇರೊಂದು ವಾಹನದಲ್ಲಿ ದತ್ತ ಪೀಠದತ್ತ ಹೊರಟರು.

ಎಸ್ಪಿ ಕಿಶೋರ್​ಬಾಬು ಹಾಗೂ ಜಿಲ್ಲಾಧಿಕಾರಿ ಸೆಲ್ವಮಣಿ ನಗರದಲ್ಲಿ ರೌಂಡ್ಸ್​ ಮಾಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next