Advertisement

ಬಿಹಾರದಲ್ಲಿ ಮತ್ತೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ

04:49 PM Jan 21, 2023 | Team Udayavani |

ಕತಿಹಾರ್ : 20 ದಿನಗಳ ಒಳಗೆ ಬಿಹಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಶನಿವಾರ ಕಲ್ಲು ತೂರಾಟ ನಡೆದ ಎರಡನೇ ಘಟನೆ ನಡೆದಿದ್ದು, ರೈಲ್ವೆ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

Advertisement

ಕತಿಹಾರ್ ಜಿಲ್ಲೆಯ ಬಲರಾಮ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲು ಸಂಖ್ಯೆ 22302 ರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಿ6 ಸಂಖ್ಯೆಯ ಬೋಗಿಯ ಕಿಟಕಿ ಗಾಜುಗಳು ಜಖಂಗೊಂಡಿವೆ. ರೈಲಿನ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು.

ಕಲ್ಲು ತೂರಾಟದಿಂದ ಯಾವುದೇ ವ್ಯಕ್ತಿಗೆ ಗಾಯಗಳು ಸಂಭವಿಸಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next