ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ನಾಲ್ಕು ದಿನಗಳ ಹಿಂದೆ ನಡೆದಿದ್ದ ಎರಡು ಕೋಮುಗಳ ನಡುವಿನ ಗಲಾಟೆ ಇಂದೂ ಮುಂದುವರಿದಿದೆ. ಬೈಕ್ ರ್ಯಾಲಿ ವೇಳೆ ಕೆಲ ಯುವಕರು ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಗಲಭೆಗೆ ಕಾರಣವಾಗಿದೆ.
ಕಾರಂಜಿ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆಗಳಿಂದ ಬೃಹತ್ ಬೈಕ್ ರ್ಯಾಲಿ ವೇಳೆ ಗಲಾಟೆ ನಡೆದಿದೆ. ಆಟೋ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದ್ದು, ಮಸೀದಿಗೆ ಕಲ್ಲು ತೂರಾಟ ನಡೆದಿದೆ. ಕೆಲ ಮಕ್ಕಳು ಹಾಗೂ ಮಹಿಳೆಯರಿಗೆ ಕಲ್ಲು ತೂರಾಟದಿಂದ ಗಾಯವಾಗಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಹಿನ್ನಲೆ ಪೋಲಿಸರಿಂದ ಹೈ ಅಲರ್ಟ್ ಘೋಷಿಸಿದ್ದಾರೆ.
ಇದನ್ನೂ ಓದಿ:ಇಬ್ಬರು ಮಹಿಳೆಯರ ಪತಿ ಒಬ್ಬನೇ…ಕೌಟುಂಬಿಕ ನ್ಯಾಯಾಲಯದಲ್ಲಿ ವಿಶಿಷ್ಟ “ರಾಜಿ ಸಂಧಾನ”!
ನಾಲ್ಕು ದಿನಗಳ ಹಿಂದೆ ಸಂಗೊಳ್ಳಿ ರಾಯಣ್ಣ ಮೂರ್ತಿ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ರಟ್ಟಿಹಳ್ಳಿಯಲ್ಲಿ ಗಲಾಟೆ ನಡೆದಿತ್ತು. ಕೈಯಲ್ಲಿ ಕಲ್ಲು ಹಿಡಿದು ನಿಂತಿದ್ದ ಯುವಕರು, ಬ್ಯಾರಿಕೇಡ್ ಕಿತ್ತೆಸೆದು ಮೆರವಣಿಗೆಗೆ ಅಡ್ಡಿಪಡಿಸಿದ್ದರು. ಗಲಾಟೆ ನಡೆದಿದ್ದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಇಂದು ಬೃಹತ್ ಬೈಕ್ ರ್ಯಾಲಿ ನಡೆಸಿದ್ದಾರೆ. ಬೈಕ್ ರ್ಯಾಲಿ ನಡೆಸುವ ಮಾರ್ಗದಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಲಾಗಿದೆ.