Advertisement

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ಪೊಲೀಸರ ವಶಕ್ಕೆ

10:15 PM Oct 24, 2020 | sudhir |

ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಕಳಕಟ್ಟೆ ಬಳಿ ಬಸ್ಸಿಗೆ‌ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಘಟನೆ ನಡೆದ ಗಂಟೆಯೊಳಗೆ ಪತ್ತೆ ಹಚ್ಚಿರುವ ಪೊಲೀಸರು ಓರ್ವ ಅರೋಪಿ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ಮತ್ತು ಇನ್ನೊರ್ವ ಆರೋಪಿ ಪರಾರಿಯಾಗಲು ಸಹಕರಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪಿ ಅಲ್ಫಾಝ್ ಕಲ್ಪಾದೆ ಪೊಲೀಸರ ವಶದಲ್ಲಿದ್ದು, ಇನ್ನೊರ್ವ ಆರೋಪಿ ಪೊಂಗ ಅಶ್ರಫ್ ಪರಾರಿಯಾಗಿದ್ದಾನೆ.

ಘಟನೆಯ ವಿವರ : ಮಂಗಳೂರಿನಿಂದ ವಿಟ್ಲ ಕಡೆ ಸಂಚರಿಸುತ್ತಿದ್ದ ಖಾಸಗಿ ಬಸ್ ಗೆ ಸೈಡ್ ಕೊಡುವ ವಿಚಾರದಲ್ಲಿ ನಿತ್ಯಾನಂದ ನಗರದಿಂದ ದೇರಳಕಟ್ಟೆ ವರೆಗೆ ಬೈಕ್ ಸವಾರರಿಗೆ ಮತ್ತು ಬಸ್ ಚಾಲಕನ ‌ಮಧ್ಯೆ ಮಾತಿನ ಚಕಮಕಿ‌ ನಡೆದಿತ್ತು.

ದೇರಳಕಟ್ಟೆ ಬಳಿ ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಲ್ಲು ಎಸೆದು ಪರಾರಿಯಾಗಿದ್ದರು. ಕಲ್ಲು ಬಸ್ ಚಾಲಕನ‌ ಕೆನ್ನೆ ಸವರಿ ಬಸ್ಸಿನೊಳಗೆ ಬಿದ್ದಿದ್ದು ಬಸ್ಸಿನ ಗಾಜು ಪುಡಿಯಾಗಿದೆ ಬಸ್ ನಲ್ಲಿ ಪ್ರಯಾಣಿಕರು ತುಂಬಿದ್ದು ಬಸ್ ಚಾಲಕನಿಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದೆ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲಿಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

Advertisement

ಘಟನೆ ಬಳಿಕ ಪೊಲೀಸರು ಸ್ಥಳೀಯ ಸಿಸಿಟಿವಿ ಮೂಲಕ ಘಟನೆಯ ದೃಶ್ಯಾವಳಿ ವೀಕ್ಷಿಸಿದ್ದು, ಪೊಲೀಸರು ಬೈಕ್ ಹೋದ ದಿಕ್ಕಿಗೆ ತೆರಳಿ ವಾಪಾಸ್ ದೇರಳಕಟ್ಟೆ ಬಂದಾಗ ಸಿಸಿಟಿವಿಯಲ್ಲಿ ದಾಖಲಾಗಿದ್ದ ಬೈಕ್ ಸ್ಥಳೀಯವಾಗಿ ಸುತ್ತಾಡುತ್ತಿದ್ದನ್ನು ಕಂಡು ಹಿಡಿಯಲೆತ್ನಿಸಿದ್ದಾರೆ ಆದರೆ ಬೈಕಿನಲ್ಲಿದ್ದ ಅಶ್ರಫ್ ಪೊಲೀಸರ ಕೈಯಿಂದ ಓಡಲು ಯತ್ನಿಸಿದ್ದಾನೆ ಈ ಸಂದರ್ಭದಲ್ಲಿ ಅಲ್ಲಿಯ ಸ್ಥಳೀಯ ಗುಂಪೊಂದು ಅಶ್ರಫ್ ನ್ನು ಪೊಲೀಸರಿಂದ ತಪ್ಪಿಸಲು ಸಹಕರಿಸಿದರೆನ್ನಲಾಗಿದೆ.

ಆದರೆ ಪೊಲೀಸರು ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ, ಜೊತೆಗೆ ಆರೋಪಿಗಳು ಪೋಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಸಹಕರಿಸಿದ ಹಾಗೂ ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಸ್ಥಳೀಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next