Advertisement

ಮೆಡಿಕಲ್‌ ಕಾಲೇಜು ಕಾಮಗಾರಿಗೆ ಶಂಕುಸ್ಥಾಪನೆ

04:34 PM Jan 03, 2021 | Team Udayavani |

ಯಾದಗಿರಿ: ಜಿಲ್ಲಾ ಕೇಂದ್ರದ ಹೊರವಲಯದಲ್ಲಿಸುಸಜ್ಜಿತವಾಗಿ ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆಉದ್ಘಾಟನೆ ಮತ್ತು ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆಶಂಕು ಸ್ಥಾಪನೆಗೆ ಕೊನೆಗೂ ಜ.6ರಂದು ಮುಹೂರ್ತ ನಿಗದಿಯಾಗಿದೆ.

Advertisement

300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿಯೇ ಸದ್ಯಕ್ಕೆ ಮೆಡಿಕಲ್‌ ಕಾಲೇಜುಕಾರ್ಯಾರಂಭವಾಗಲಿದ್ದು, 300 ಹಾಸಿಗೆಯ ಆಸ್ಪತ್ರೆಯು ಅಂದಾಜು 52 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ಸೇವೆಗೆ ಸಿದ್ಧವಾಗಿದೆ. ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.

ನಿರೀಕ್ಷೆಯಂತೆ 2020ರ ಜನೆವರಿಯಲ್ಲಿ ಉದ್ಘಾಟನೆಯಾಗಬೇಕಿದ್ದ ನೂತನ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ವರ್ಷ ತಡವಾಗಿ ಉದ್ಘಾಟನೆ ಭಾಗ್ಯಕೂಡಿ ಬಂದಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 5 ಕಿ.ಮೀ.ದೂರದಲ್ಲಿ ಭವ್ಯ ಸುಸಜ್ಜಿತ ಕಟ್ಟಡ ಕಾಮಗಾರಿಪೂರ್ಣಗೊಂಡಿದ್ದು, ಸದ್ಯ ನಿರ್ಮಾಣವಾಗಿರುವಕಟ್ಟಡ ನೆಲ ಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡ ಸುತ್ತ ಸಸಿ ನೆಟ್ಟು ಉತ್ತಮ ಪರಿಸರ ನಿರ್ಮಿಸಲು ಉದ್ದೇಶಿಸಲಾಗಿದೆ.

ಒಂದು ಕಡೆ ತುರ್ತು ಚಿಕಿತ್ಸಾ ವಿಭಾಗ, ಒಂದು ಬಾರಿಗೆ 20 ಜನರು ತೆರಳುವ ಸಾಮರ್ಥ್ಯದನಾಲ್ಕು ಲಿಫ್ಟ್‌ಗಳನ್ನು ನಿರ್ಮಿಸಲಾಗಿದ್ದು, ರ್‍ಯಾಂಪ್‌ ವ್ಯವಸ್ಥೆಯೂ ಇದೆ. ಆಡಳಿತ ವರ್ಗದ ಪ್ರತ್ಯೇಕ ಬ್ಲಾಕ್‌ ಹೊಂದಿದ್ದು, ಶವಗಾರ, ಶಸ್ತ್ರ ಚಿಕಿತ್ಸಾ ವಿಭಾಗ ಸೇರಿದಂತೆ ಆಸ್ಪತ್ರೆ ವೈದ್ಯರಿಗಾಗಿ 8 ವಸತಿ ಗೃಹ, 12 ಶುಶ್ರೂಷಕಿಯರು ಹಾಗೂ 8 “ಡಿ’ ದರ್ಜೆಯ ನೌಕರರ ವಸತಿ ಗೃಹಗಳ ನಿರ್ಮಾಣವೂ ಆಸ್ಪತ್ರೆಯ ಆವರಣದಲ್ಲಿಯೇ ನಿರ್ಮಿಸಲಾಗಿದೆ.

ಈಗೀರುವ ಹಳೆ ಆಸ್ಪತ್ರೆಯಲ್ಲಿ 19 ವೈದ್ಯರು, 22 ಶುಶೂಷ್ರಕಿಯರು ಹಾಗೂ 50 “ಡಿ’ದರ್ಜೆಯ ನೌಕರರು ಸೇರಿ ಒಟ್ಟು 90 ಜನ ಸಿಬ್ಬಂದಿಗಳಿದ್ದು, ಜಿಲ್ಲಾಸ್ಪತ್ರೆ ಉದ್ಘಾಟನೆ ಬಳಿಕ 43 ವೈದ್ಯರು, ಶುಶೂಷ್ರಕಿಯರು ಹಾಗೂ “ಡಿ’ ದರ್ಜೆ ನೌಕರರು ಸೇರಿ 240 ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

Advertisement

ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ವಿಶಾಲ ಸ್ಥಳವಿದ್ದು,ಅಲ್ಲಿಯೇ ಮೆಡಿಕಲ್‌ ಕಾಲೇಜು ನಿರ್ಮಾಣವಾಗಲಿದೆಎನ್ನಲಾಗಿದ್ದು, ಅದಕ್ಕೆ ಸರ್ಕಾರ 325 ಕೋಟಿಯಷ್ಟು ವೆಚ್ಚ ಮಾಡಲಿದೆ. ಇದರಲ್ಲಿ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40 ಅನುದಾನ ಖರ್ಚು ಮಾಡಲಿವೆ. ಯಾದಗಿರಿ ಜಿಲ್ಲಾ ಕೇಂದ್ರವಾದರೂಸರಿಯಾದ ಚಿಕಿತ್ಸೆ ಸಿಗದೇ ರಾಯಚೂರು, ಕಲಬುರಗಿಗೆ ರೋಗಿಗಳು ತೆರಳುವ ಜನರ ಗೋಳು ತಪ್ಪಿ, ಇಲ್ಲಿಯೇ ಸೂಕ್ತ ದೊರೆಯಲಿದೆ ಎನ್ನುವ ಆಶಾ ಭಾವನೆ ಮೂಡಿದೆ.

ಆಪತ್ಬಾಂಧವ ಕಟ್ಟಡ: ಹೊಸ ಜಿಲ್ಲಾಸ್ಪತ್ರೆ ಕಟ್ಟಡ ಕೋವಿಡ್ ಕಾಲದಲ್ಲಿ ಜಿಲ್ಲೆಯ ಜನರಿಗೆಆಪತ್ಬಾಂಧವವಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ನೀಡುವುದರಿಂದ ಪ್ರತ್ಯೇಕಕೋವಿಡ್‌ ಆಸ್ಪತ್ರೆಯ ಅಗತ್ಯವಿತ್ತು. ಹಾಗಾಗಿ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧಗೊಂಡಿದ್ದನೂತನ ಕಟ್ಟಡವನ್ನು ಮೊದಲು ಕೋವಿಡ್‌ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಯಿತು. ಇದರಿಂದಾಗಿ ಸಾಕಷ್ಟು ಜನರು ಕೋವಿಡ್‌ಚಿಕಿತ್ಸೆಯನ್ನು ಯಾದಗಿರಿಯಲ್ಲಿಯೇ ಪಡೆಯಲು ಅನುಕೂಲವಾಯಿತು.

250 ಹಾಸಿಗೆ ಸಾಮರ್ಥ್ಯ ಹೆಚ್ಚಳ: 100 ಹಾಸಿಗೆ ಸಾಮರ್ಥ್ಯವಿದ್ದ ಹಳೆಯ ಜಿಲ್ಲಾಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು ಏರಿಸಲು ಸರ್ಕಾರಕ್ಕೆ ಅಧಿಕಾರಿಗಳುಪತ್ರ ವ್ಯವಹಾರ ಮಾಡುತ್ತಲೇ ಬಂದಿರುವುದರಿಂದ ಅಗತ್ಯತೆಯನ್ನು ಮನಗಂಡ ಸರ್ಕಾರ, ಇದೀಗ 250 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ದೊರೆಯಲಿ: ಹಳೆದ ಜಿಲ್ಲಾಸ್ಪತ್ರೆಯಿಂದ ಡಿಸೆಂಬರ್‌ ತಿಂಗಳಿನಲ್ಲಿಯೇನೂತನ ಆಸ್ಪತ್ರೆಗೆ ಜಿಲ್ಲಾಸ್ಪತ್ರೆ ಸ್ಥಳಾಂತರಗೊಂಡಿದ್ದುಪ್ರಸ್ತುತ ಗರ್ಭಿಣಿಯರು ಮತ್ತು ಮಕ್ಕಳ 60ಹಾಸಿಗೆಯ ಆಸ್ಪತ್ರೆಗೆ ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ಸಾಮಾನ್ಯ ಚಿಕಿತ್ಸೆಗೆ ಬರುವ ರೋಗಿಗಳುಪರದಾಡುವಂತಾಗಿದೆ. ಇತರೆ ಚಿಕಿತ್ಸೆಗೆ 5 ಕಿ.ಮೀ.ದೂರದ ಜಿಲ್ಲಾಸ್ಪತ್ರೆಗೆ ತೆರಳಬೇಕಿದೆ. ರಸ್ತೆ ಅಪಘಾತಸೇರಿದಂತೆ ಇತರೆ ತುರ್ತು ಸಂದರ್ಭದಲ್ಲಿ ಸೂಕ್ತಚಿಕಿತ್ಸೆ ಸಿಗದೇ ಅವಘಡಗಳು ಸಂಭವಿಸುವುದನ್ನು ತಪ್ಪಿಸಲು ಹಳೆಯ ಆಸ್ಪತ್ರೆಯಲ್ಲಿಯೂ ಸಹ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ದೊರೆಯಲು ಅನುಕೂಲ ಕಲ್ಪಿಸಬೇಕಿದೆ.

ಸಿಬ್ಬಂದಿ ಕೊರತೆ: ನೂತನ ಜಿಲ್ಲಾಸ್ಪತ್ರೆಗೆ 240 ಸಿಬ್ಬಂದಿಗಳಅಗತ್ಯವಿದ್ದು, ಹಳೆಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳೇ ಇಲ್ಲಕಾರ್ಯ ಮಾಡುತ್ತಿದ್ದಾರೆ. ಅಗತ್ಯ ಸಿಬ್ಬಂದಿಗಳ ನೇಮಕವಾಗದಿರುವುದು ಆಸ್ಪತ್ರೆಯನ್ನುನಿರ್ವಹಣೆ ಮಾಡುವುದಾದರೂ ಹೇಗೆ ಎನ್ನುವಪ್ರಶ್ನೆ ಉದ್ಭವವಾಗಿದೆ. ಸರ್ಕಾರ ಶೀಘ್ರವೇ ಅಗತ್ಯ ಸಿಬ್ಬಂದಿಗಳನ್ನು ನೇಮಿಸಲು ಮುಂದಾಗಬೇಕಿದೆ.

ಜ.6ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಯಾದಗಿರಿ ನೂತನ ಜಿಲ್ಲಾಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜುಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಈ ಭಾಗದಜನರ ಬಹುದಿನಗಳ ಬೇಡಿಕೆ ಈಡೇರಲಿದ್ದು,ಆರೋಗ್ಯ ಸೇವೆ ಪಡೆಯಲು ದೂರದ ನಗರಗಳಿಗೆತೆರಳುವುದು ತಪ್ಪಲಿದೆ. ಇಲ್ಲಿಯೇ ಸೂಕ್ತ ಚಿಕಿತ್ಸೆಸಿಗಲಿದೆ. ಇದರೊಟ್ಟಿಗೆ 15 ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಲಿದೆ. ವೆಂಕಟರೆಡ್ಡಿ ಮುದ್ನಾಳ, ಶಾಸಕ

 

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next