Advertisement

ಮುಂಬಯಿ ಶೇರು 410 ಅಂಕ ಕುಸಿತ: 5 ತಿಂಗಳ ಕನಿಷ್ಠ ಮಟ್ಟಕ್ಕೆ

04:28 PM Mar 23, 2018 | udayavani editorial |

ಮುಂಬಯಿ : ಅಮೆರಿಕ ಮತ್ತು ಚೀನ ನಡುವೆ ವಾಣಿಜ್ಯ ಸಮರ ನ್ಪೋಟಗೊಂಡಿರುವ ಕಾರಣ ಜಾಗತಿಕ ಶೇರು ಪೇಟೆಗಳಲ್ಲಿ ತೀವ್ರ ತಲ್ಲಣ ಉಂಟಾಗಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರ 409.73 ಅಂಕಗಳ ಭಾರೀ ನಷ್ಟದೊಂದಿಗೆ ದಿನದ ವಹಿವಾಟನ್ನು 32,596.54 ಅಂಕಗಳ ಮಟ್ಟದಲ್ಲಿ ಆತಂಕಕಾರಿಯಾಗಿ ಕೊನೆಗೊಳಿಸಿತು. 

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಈ ವರ್ಷ ಇದೇ ಮೊದಲ ಬಾರಿಗೆ 10,000 ಅಂಕಕ್ಕಿಂತ ಕೆಳಮಟ್ಟಕ್ಕೆ ಜಾರಿತು. ನಿಫ್ಟಿ ದಿನದ ವಹಿವಟನ್ನು  116.70 ಅಂಕಗಳ ನಷ್ಟದೊಂದಿಗೆ 9,998.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು, 

ಸೇಲ್‌, ಜಿಂದಾಲ್‌ ಸ್ಟೀಲ್‌, ವೇದಾಂತ, ಹಿಂಡಾಲ್ಕೋ, ನ್ಯಾಶನಲ್‌ ಅಲ್ಯುಮಿನಿಯಂ, ಹಿಂದುಸ್ಥಾನ್‌ ಝಿಂಕ್‌, ಟಾಟಾ ಸ್ಟೀಲ್‌, ಎನ್‌ಎಂಡಿಸಿ, ಜೆಎಸ್‌ಡಬ್ಲ್ಯು ಸ್ಟೀಲ್‌ ಶೇರುಗಳು ಇಂದು ಶೇ.6.58ರಷ್ಟು ಕುಸಿದವು. 

ರಿಯಲ್ಟಿ, ಮೆಟಲ್‌, ಬ್ಯಾಂಕೆಕ್ಸ್‌, ಕ್ಯಾಪಿಟಲ್‌ ಗೂಡ್ಸ್‌, ಹೆಲ್ತ್‌ ಕೇರ್‌, ಪಿಎಸ್‌ಯು, ಆಟೋ ಮತ್ತು ಆಯಿಲ್‌ ಕ್ಷೇತ್ರದ ಶೇರುಗಳು ಭಾರೀ ಕುಸಿತವನ್ನು ಕಂಡವು. 

Advertisement

Udayavani is now on Telegram. Click here to join our channel and stay updated with the latest news.

Next