Advertisement

ಒಮಿಕ್ರಾನ್ ಭೀತಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿ ಇಳಿಕೆ

12:15 PM Dec 27, 2021 | Team Udayavani |

ಮುಂಬಯಿ:ಒಮಿಕ್ರಾನ್ ಹೆಚ್ಚಳದಿಂದ ನಿರ್ಬಂಧಗಳನ್ನು ವಿಧಿಸಿರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಸೋಮವಾರ ಮುಂಬಯಿ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ 400ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿದೆ.

Advertisement

ಇದನ್ನೂ ಓದಿ:ಹೊಸ ವರ್ಷ ಸಂಭ್ರಮಾಚರಣೆಗೆ ಎಲ್ಲಾದರೂ ಹೋಗಲಿ, ಆದರೆ..: ಸಿಎಂ ಎಚ್ಚರಿಕೆ

ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 444,83 ಅಂಕ ಇಳಿಕೆಯಾಗಿದ್ದು, 56,679.48 ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 128.40 ಅಂಕ ಕುಸಿತದೊಂದಿಗೆ 16,875.35 ಅಂಕಗಳ ಮಟ್ಟ ತಲುಪಿದೆ.

ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್ ಸರ್ವ್, ಮಾರುತಿ ಮತ್ತು ಟಾಟಾ ಸ್ಟೀಲ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಪವರ್ ಗ್ರಿಡ್, ಮಹೀಂದ್ರ ಆ್ಯಂಡ್ ಮಹೀಂದ್ರ, ಡಾ.ರೆಡ್ಡೀಸ್ ಮತ್ತು ಎಚ್ ಡಿಎಫ್ ಸಿ ಷೇರುಗಳು ಲಾಭಗಳಿಸಿದೆ.

ಶುಕ್ರವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 190.97 ಅಂಕ ಇಳಿಕೆಯೊಂದಿಗೆ 57,124.31 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 68.85 ಅಂಕಗಳಷ್ಟು ಇಳಿಕೆಯಾಗಿದ್ದು, 17,003.75 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next