ಮುಂಬೈ: ಅಮೆರಿಕದ ಕೆಲ ಪ್ರಮುಖ ಬ್ಯಾಂಕ್‌ಗಳು ಬಾಗಿಲು ಹಾಕಿಕೊಂಡಿವೆ. ಇದರಿಂದ ಅಲ್ಲಿನ ಷೇರು ಮಾರುಕಟ್ಟೆಗಳು ಅಸ್ಥಿರ ಸ್ಥಿತಿಯಲ್ಲಿವೆ.
ಇದು ಜಾಗತಿಕವಾಗಿಯೂ ಪರಿಣಾಮ ಬೀರುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಂತೂ ವಿಪರೀತ ಏರುಪೇರುಗಳು ಶುರುವಾಗಿವೆ. ಸೋಮವಾರ ವಿತ್ತೀಯ, ಬಂಡವಾಳ ಸರಕುಗಳು, ಐಟಿ ಕಂಪನಿಗಳ ಷೇರುಗಳ ಮಾರಾಟ ಶುರುವಾಯಿತು.
ಇದರಿಂದ ಸತತ ಎರಡು ದಿನ ಏರಿದ್ದ ಸೆನ್ಸೆಕ್ಸ್ 360.95 ಅಂಕ ಕುಸಿದು 57,628.95ಕ್ಕೆ ಮುಟ್ಟಿತು. ಅದಕ್ಕೂ ಮುನ್ನ 900 ಅಂಕಗಳಷ್ಟು ಕುಸಿದಿತ್ತು. ಇನ್ನು ನಿಫ್ಟಿ 111.65 ಅಂಕ ಕುಸಿದು 16,988.40ಕ್ಕೆ ಮುಟ್ಟಿತು. ಹೂಡಿಕೆದಾರರು ಅಮೆರಿಕದ ಬ್ಯಾಂಕ್‌ಗಳ ದುಸ್ಥಿತಿಯಿಂದ ಆತಂಕಗೊಂಡಿದ್ದಾರೆಂದು ವಿಶ್ಲೇಷಿಸಲಾಗಿದೆ.